ಪಿಂಜಾರ ಸಂಘದ ಪದಾಧಿಕಾರಿಗಳ ನೇಮಕ ಕಾರ್ಯಕ್ರಮ

ಹಾವೇರಿ :

       ಇಲ್ಲಿನ ಶಿವಲಿಂಗ ನಗರದ ಬನಶಂಕರಿ ಕಲ್ಯಾಣ ಮಂಟಪದಲ್ಲಿ ಜರುಗಿದ ತಾಲೂಕಿನ ನದಾಫ್ – ಪಿಂಜಾರ ಸಂಘದ ಪದಾಧಿಕಾರಿಗಳ ನೇಮಕ ಕಾರ್ಯಕ್ರಮದಲ್ಲಿ ಶಾಸಕ ನೆಹರೂ ಓಲೇಕಾರ ಅವರನ್ನು ಜಿಲ್ಲಾ ನದಾಫ್-ಪಿಂಜಾರ ಸಂಘದ ವತಿಯಿಂದ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಸಕ ನೆಹರೂ ಓಲೇಕಾರ ಉತ್ತರ ಕರ್ನಾಟಕದಲ್ಲಿ ಹೆಚ್ಚಿನ ಜನಸಂಖ್ಯೆ ಹೊಂದಿರುವ

       ಸಮುದಾಯವಾಗಿದ್ದು, ಎಲ್ಲ ಕ್ಷೇತ್ರದಲ್ಲಿಯೂ ಪ್ರಗತಿದಾಯಕವಾಗಿ ಮುಂದುವರಿಯುತ್ತಿದ್ದಾರೆ. ನಗರದಲ್ಲಿ ಶಾದಿ ಮಹಲ್ ಹಾಗೂ ಸಮುದಾಯ ಭವನ ನಿರ್ಮಾಣಕ್ಕೆ ಅತಿ ಶೀಘ್ರದಲ್ಲಿ ಜಾಗ ಗುರುತಿಸಲಾಗುವುದು. ಸಮುದಾಯದ ಜನರು ಸರ್ಕಾರಿ ಸೌಲಭ್ಯಗಳನ್ನು ಬಳಸಿಕೊಂಡು ಅಭಿವೃದ್ಧಿಯಾಗಲು ಮುಂದಾಗಬೇಕು ಎಂದರು. ಹಾವೇರಿ ತಾಲೂಕ ಅಧ್ಯಕ್ಷರಾಗಿ ಕುಸೇನಸಾಬ ದೇವಿಹೋಸೂರ ಸೇರಿದಂತೆ ತಾಲೂಕ ಪದಾಧಿಕಾರಿಗಳಲ್ಲಿ ಮಹಿಳೆಯರಿಗೂ ಸ್ಥಾನಮಾನ ನೀಡಿ ನೇಮಕ ಮಾಡಲಾಯಿತು.

        ಜಿಲ್ಲಾ ಪಿಂಜಾರ ಸಂಘದ ಜಿಲ್ಲಾಧ್ಯಕ್ಷರಾಗಿ ಎಂಎಲ್ ನದಾಫ್ ಮಾತನಾಡಿ ನಗರ ಹಾಗೂ ಗ್ರಾಮೀಣ ಮಟ್ಟದಲ್ಲಿಯೂ ನಮ್ಮ ಸಮುದಾಯದ ಜನರ ಸಂಘಟನೆಯನ್ನು ಮಾಡುವುದು ಅತ್ಯವಶ್ಯಕವಾಗಿದ್ದು, ಜಾಗೃತಿ ಕಾರ್ಯಕ್ರಮಗಳ ಮೂಲಕ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕಾಗಿದೆ ಎಂದರು. ಕಾರ್ಯದರ್ಶಿಯಾಗಿ ಮರ್ದಾನಸಾಬ ಸುಳ್ಳಳ್ಳಿ ಮಾತನಾಡಿ ಸಂಘಟನೆಯ ಮೂಲಕ ಸರ್ಕಾರ ಸೌಲಭ್ಯ ಪಡೆಯಲು ಸಾಧ್ಯ ಉತ್ತಮ ಜೀವನಕ್ಕೆ ಎಲ್ಲರೂ ಮುಖ್ಯವಾಹಿನಿಗೆ ಬರಬೇಕಾಗಿದೆ ಎಂದರು.

         ಈ ಸಂದರ್ಭದಲ್ಲಿ ಜಿಲಾನಿ ದೇವಿಹೋಸೂರ.ರಾಜ್ಯ ಸಮಿತಿ ಸದಸ್ಯರಾದ ಮುಖಂಡರುಗಳಾದ ದಾವಲಸಾಬ ನೆಗಳೂರ.ಇಸ್ಮಾಯಿಲ್‍ಸಾಬ ನದಾಫ್.ಜಾಫರಸಾಬ ಹತ್ತಿಕಾಳ.ಮೌಲಾಸಾಬ ನೆಗಳೂರ. ನಜೀರಸಾಬ ನದಾಫ್.ಮೌಲಾಸಾಬ ನದಾಫ್.ಹುಸೇನಸಾಬ ದೊಡ್ಡಪಿಂಜಾರ.ಅಲ್ಪಾಫ್ ನದಾಫ್ ಸೇರಿದಂತೆ ಜಿಲ್ಲೆಯ ಹಾಗೂ ಎಲ್ಲ ತಾಲೂಕಗಳ ಪದಾಧಿಕಾರಿಗಳು ಹಾಗೂ ನದಾಫ್-ಪಿಂಜಾರ ಸಮುದಾಯದವರು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link