ಸಂಸದರು, ಶಾಸಕರಿಂದ ಜನರ ಅಹವಾಲು ಸ್ವೀಕಾರ

ಚಿತ್ರದುರ್ಗ;

        ಚಿತ್ರದುರ್ಗ-ಹೊಸಪೇಟೆರಾಷ್ಟ್ರೀಯ ಹೆದ್ದಾರಿ13ರಚತುಷ್ಪಥರಸ್ತೆ ನಿರ್ಮಾಣದಿಂದಜನರಿಗಾಗಿರುವ ಸಮಸ್ಯೆಗಳನ್ನು ಸಂಸದರಾದ ಬಿ.ಎನ್.ಚಂದ್ರಪ್ಪ, ಶಾಸಕರಾದ ಜಿ.ಹೆಚ್.ತಿಪ್ಪಾರೆಡ್ಡಿ ಹಾಗೂ ಟಿ.ರಘುಮೂರ್ತಿಯವರು ಆಲಿಸಿದರು.

       ಚಿತ್ರದುರ್ಗದ ಪಿಳ್ಳೆಕೇರನಹಳ್ಳಿ, ಮಲ್ಲಾಪುರ, ಮಲ್ಲಾಪುರಗೊಲ್ಲರಹಟ್ಟಿ, ಜಿ.ಆರ್.ಹಳ್ಳಿ, ಮಾಡನಾಯಕನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದ ವೇಳೆ ಗ್ರಾಮಸ್ಥರು, ರೈತರುರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡುತ್ತಿರುವುದರಿಂದಎದುರಾಗಿರುವ ಸಮಸ್ಯೆಗಳನ್ನು ವಿವರಿಸಿದರು.
ಚಿತ್ರದುರ್ಗರಾಷ್ಟ್ರೀಯ ಹೆದ್ದಾರಿ ನಾಲ್ಕರಿಂದ ಎನ್.ಹೆಚ್.13 ಗೆ ಹೋಗುವ ತಿರುವಿನಲ್ಲಿ ಮಳೆ ಬಂದಾಗ ಸಾಕಷ್ಟು ನೀರು ನಿಲ್ಲುತ್ತದೆ.

       ಹಾಗೂ ಬವಸೇಶ್ವರ ನಗರಕ್ಕೆ ಹೋಗಲು ಸಂಪರ್ಕದರಸ್ತೆಗೆತೊಂದರೆಯಾಗಿದೆ. ಹಾಗೂ ಮಲ್ಲಾಪುರದ ಹತ್ತಿರುವ ಮೇಲುಸೇತುವೆ ನಿರ್ಮಾಣ ಮಾಡಿದ್ದುಕಿರಿದಾಗಿದೆಎಂದುಗ್ರಾಮಸ್ಥರು ತಿಳಿಸಿದರು.

       ಹಾಗೂ ಮುಂದೆ ಮಲ್ಲಾಪುರಗೊಲ್ಲರಹಟ್ಟಿ ನಂತರ ಸುಮಾರು 50 ರಿಂದ 70 ಎಕರೆಜಾಗದಲ್ಲಿಜಂಕ್ಷನ್ ನಿರ್ಮಾಣ ಮಾಡಲಾಗುತ್ತಿದ್ದು ಎನ್.ಹೆಚ್.13 ನಿಂದ ಬರುವ ವಾಹನಗಳುಇಲ್ಲಿಂದಲೇ ಬೈಪಾಸ್ ಮೂಲಕ ಬೆಂಗಳೂರು ಕಡೆಗೆ, ಚಳ್ಳಕೆರೆ ಕಡೆಗೆ ಹಾಗೂ ದಾವಣಗೆರೆಗೆಕಡೆಗೆ ಹೋಗಲು ರಸ್ತೆ ನಿರ್ಮಾಣ ಮಾಡಲಾಗುತ್ತದೆಎಂದು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದರು.

       ಜಿ.ಆರ್.ಹಳ್ಳಿ ಸಮೀಪ ಮೇಲುಸೇತುವ ನಿರ್ಮಾಣ ಮಾಡುತ್ತಿರುವುದರಿಂದರಸ್ತೆಎತ್ತರವಾಗಿದೆ. ಇದರಿಂದರೈತರುತಮ್ಮ ಜಮೀನುಗಳಿಗೆ ಹೋಗಲು ಏಣಿಯನ್ನು ಹಾಕಿ ಇಳಿಯುವಂತಾಗಿದೆ.ಏಕೆಂದರೆರಸ್ತೆಎತ್ತರವಾಗಿದ್ದು ಪಕ್ಕದಲ್ಲಿ ಸೇವಾ ರಸ್ತೆಇಲ್ಲದಕಾರಣ ಜಮೀನುಗಳಿಗೆ ಹೋಗಲು ಸಾಧ್ಯವಾಗುತ್ತಿಲ್ಲಎಂದು ನೂರಾರುರೈತರುತಾವುಎದುರಿಸುತ್ತಿರುವ ಸಮಸ್ಯೆಗಳನ್ನು ಬಿಚ್ಚಿಟ್ಟರು.ಈ ವೇಳೆ ರೈತರು ಹೇಳುತ್ತಿರುವುದು ಸತ್ಯವಾಗಿದ್ದುಕೂಡಲೆರೈತರುತಮ್ಮ ಜಮೀನುಗಳಿಗೆ ಹೋಗಲು ವ್ಯವಸ್ಥೆ ಮಾಡಲು ಸಂಸದರು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ತಿಳಿಸಿದರು.

         ಜಿ.ಆರ್.ಹಳ್ಳಿಯ ಸಮೀಪ ಗ್ರಾಮಕ್ಕೆ ಸಂಪರ್ಕಕಲ್ಪಿಸುವ ನೆಲಸೇತುವೆ ನಿರ್ಮಾಣ ಮಾಡಿದ್ದುಇದುಎತ್ತರವಾಗಿದೆ. ಎತ್ತಿನಗಾಡಿಗಳು, ಲೋಡ್ ಟ್ರ್ಯಾಕ್ಟರ್‍ಗಳು ಸಂಚರಿಸುವುದುಕಷ್ಟವಾಗುತ್ತಿದೆ.ಆದ್ದರಿಂದಗ್ರಾಮದರಸ್ತೆಗೆ ಸರಿಸಮಾನವಾಗಿ ಸೇತುವೆಯನ್ನು ಸರಿಪಡಿಸಲುಸಂಸದರು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ತಿಳಿಸಿದರು.

       ಮಾಡನಾಯಕನಹಳ್ಳಿ ಸಮೀಪ ಪೂರ್ವಭಾಗದಲ್ಲಿನಜಮೀನು, ಬೆಟ್ಟದ ಮೇಲೆ ಬೀಳುವ ಮಳೆ ನೀರುಗ್ರಾಮದ ಸಮೀಪವಿರುವ ಸೇತುವೆ ಮೂಲಕ ಹೋಗುತ್ತದೆ.ಈ ಹಿಂದೆಎರಡು, ಮೂರುಕಡೆ ನೀರು ಹರಿಯುತ್ತಿತ್ತು, ಸಮಸ್ಯೆಯಾಗಿರಲಿಲ್ಲ. ಆದರೆ ಈಗ ಎಲ್ಲಾಕಡೆರಸ್ತೆಎತ್ತರವಾಗಿರುವುದರಿಂದಒಂದುಕಡೆ ನಿರ್ಮಾಣ ಮಾಡಿರುವ ಸೇತುವೆ ಮೂಲಕ ನೀರು ಹೋಗಬೇಕಿರುವುದರಿಂದ ನೀರಿನರಬಸ ಹೆಚ್ಚಾಗಿದೆ.

         ಇದರಿಂದರಸ್ತೆಯ ಪಶ್ಚಿಮ ದಿಕ್ಕಿನಲ್ಲಿನ ಮನೆ, ಜಮೀನುಗಳಿಗೆ ರಬಸವಾಗಿ ನೀರುನುಗ್ಗುವುದರಿಂದ ಮಣ್ಣುಕೊಚ್ಚಿ ಹೋಗುತ್ತದೆ.ಇದನ್ನುತಡೆಯಲುನೀರು ಮುಂದೆ ಹೋಗಿ ಹರಿಯುವಂತೆ ಮಾಡಲುಕಲ್ಲಿನಿಂದ ಕಾಲುವೆ ನಿರ್ಮಾಣ ಮಾಡಬೇಕೆಂದುಗ್ರಾಮಸ್ಥರು ಪ್ರಾಧಿಕಾರದ ಅಧಿಕಾರಿಗಳಿಗೆ ತಿಳಿಸಿದರು.

         ಆದರೆರಸ್ತೆಗೆ ಸಂಬಂಧಿಸಿದಂತೆ ಸೇತುವೆ, ಸಾರ್ವಜನಿಕರಿಗೆ ಸಂಚರಿಸಲುಅಗತ್ಯವಿರುವ ವ್ಯವಸ್ಥೆಯನ್ನುಕಲ್ಪಿಸಲು ಅವಕಾಶ ಇದೆಎಂದು ಅಧಿಕಾರಿಗಳು ತಿಳಿಸಿದಾಗ ಶಾಸಕರಾದಟಿ.ರಘುಮೂರ್ತಿಯವರುರಸ್ತೆ ನಿರ್ಮಾಣದಿಂದ ಸಹಜವಾಗಿ ಹರಿಯುತ್ತಿದ್ದ ನೀರನ್ನುಒಂದೆಕಡೆ ಹರಿಯಲು ಸೇತುವೆ ನಿರ್ಮಾಣದಿಂದ ಈ ಸಮಸ್ಯೆಎದುರಾಗಿದೆ. ಸಾರ್ವಜನಿಕ ಹಿತದೃಷ್ಟಿಯಿಂದ ಈ ಕೆಲಸ ಮಾಡಿಕೊಡಬೇಕೆಂದು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ತಿಳಿಸಿದರು.

         ಮತ್ತು ಹೆದ್ದಾರಿ ನಿರ್ಮಾಣಕ್ಕೆ ಬೇಕಾದ ಭೂ ಸ್ವಾಧೀನ ಮಾಡಿಕೊಡಿದ್ದು ಹೆಚ್ಚಿನ ಪರಿಹಾರ ನೀಡಲು ಕಳೆದ ಮೂರು ವರ್ಷಗಳಿಂದ ಜಿಲ್ಲಾಧಿಕಾರಿಗಳ ಕಚೇರಿಗೆಓಡಾಡಿದರೂ ಮೇಲ್ಮನವಿ ವಿಚಾರಣೆ ಆರಂಭಿಸಿರುವುದಿಲ್ಲ ಎಂದಾಗ ಸ್ಥಳದಲ್ಲಿದ್ದ ಜಿಲ್ಲಾಧಿಕಾರಿಆರ್.ಗಿರೀಶ್‍ರವರು ನಿಯಮಾನುಸಾರ ವಿಚಾರಣೆ ನಡೆಸಿ ನವಂಬರ್ 20 ರೊಳಗಾಗಿ ಇತ್ಯರ್ಥಪಡಿಸಲಾಗುತ್ತದೆಎಂದರು.

           ಈ ವೇಳೆ ಉಪವಿಭಾಗಾಧಿಕಾರಿ ವಿಜಯಕುಮಾರ್, ಹೆದ್ದಾರಿ ಪ್ರಾಧಿಕಾರದಅಧಿಕಾರಿ ಮಲ್ಲಿಕಾರ್ಜುನ್, ತಹಶೀಲ್ದಾರ್ ಮಲ್ಲಿಕಾರ್ಜುನ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link