ಮೂಲಭುತ ಸೌಕರ್ಯಕ್ಕಾಗಿ ಪ್ರತಿಭಟನೆ

ಹಗರಿಬೊಮ್ಮನಹಳ್ಳಿ:  
 
       ತಾಲೂಕಿನ ವಲ್ಲಾಭಪುರ ಗ್ರಾಮದ ಮೂರಾರ್ಜಿ ದೇಸಾಯಿ ವಸತಿ  ಶಾಲಾ ವಿದ್ಯಾರ್ಥಿಗಳಿಂದ ಮೂಲಭೂತ ಸೌಲಭ್ಯಗಳು ಬೇಕು ಎಂದು ಪಟ್ಟು ಹಿಡಿದು ಗೇಟ್‍ಗೆ ಅಡ್ಡಗಟ್ಟಿ ಪ್ರತಿಭಟನೆಮಾಡಿದ ಘಟನೆ ಸೋಮವಾರ ಜರುಗಿತು.
       ಈ ವಸತಿ ಶಾಲೆಯ ಬಗ್ಗೆ ಪ್ರತಿಭಟನೆ ನಡೆಯುತ್ತಿರುವುದು ಇದು ಮೊದಲಲ್ಲ, ಕಳೆದ ನಾಲ್ಕೈದು ವರ್ಷಗಳಿಂದ ಇಂತಹ ಪ್ರತಿಭಟನೆಗಳ ಬಿಸಿ ಆಗಾಗ ಶಾಲಾ ಶಿಕ್ಷಕರಿಗೆ ತಟ್ಟುತ್ತಲೇ ಇರುತ್ತೆ. ಇಂದು ಕೂಡ ಅದೇ ಆಗಿದ್ದು. ಬೆಳಗ್ಗೆ 9ಗಂಟೆಗೆ ತರಗತಿಗಳನ್ನು ಬಹಿಷ್ಕರಿಸಿದ ಎಲ್ಲಾ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಮಧ್ಯಾಹ್ನ 1 ಗಂಟೆಯಾದರೂ ಮುಗಿಯಲಿಲ್ಲ.
         ಮೂಲಭೂತ ಸೌಲಭ್ಯಗಳ ಬೇಡಿಕೆ: ವಿದ್ಯಾರ್ಥಿಗಳು ತಮಗೆ ವಸತಿ ಶಾಲೆಯಲ್ಲಿ ಸಿಗುವಂತ ಮೂಲಭೂತ ಸೌಲಭ್ಯಗಳು ಸಿಗುತ್ತಿಲ್ಲವೆಂದು ಪಟ್ಟುಹಿಡಿದರು. ವಿದ್ಯಾರ್ಥಿಗಳಿಗೆ ಎರಡೇ ಶೌಚಗೃಹಗಳು ಇರುವುದು. ಅಲ್ಲಿ ಹೋಗಿ ಸ್ನಾನಮಡಲು ಸಾಧ್ಯವಾಗದಷ್ಟು ದುರ್ನಾತದಿಂದ ಕೂಡಿವೆ ಎಂದು ಮೂಗು ಮುರಿಯುತ್ತಾರೆ. ಈ ಶೌಚಗೃಹಗಳ ಬಾಗಿಲುಗಳು ದುರಸ್ಥೆಯಲ್ಲಿವೆ ಎಂದು ಅಲ್ಲಿನ ಪರಿಸ್ಥಿತಿಗಳನ್ನು ಕಣ್ಣಿಗೆ ರಾಚುವಂತೆ ತೋರಿಸುತ್ತ ಆಡಳಿತದ ವೈಖರಿಯ ಬಗ್ಗೆ ಕಿಡಿಕಾರಿದರು. ಸಿಂಟೆಕ್ಸ್ ಸ್ವಚ್ಛತೆ ಇಲ್ಲ.
          ಶೌಚಗೃಹಗಳ ಪ್ರವೇಶಮಾಡಿದರೆ ಕಾಲುಜಾರಿ ಬೀಳುವುದು ಖಚಿತ. ಈಗಾಗಲೇ ನಮ್ಮಲ್ಲಿಯೇ ಒಂದಿಬ್ಬರು ವಿದ್ಯಾರ್ಥಿಗಳು ಕಾಲುಜಾರಿ ಬಿದ್ದಿರುವ ಅನುಭವ ಕೂಡ ಆಗಿದೆ ಎಂದರು. ಈ ಬಗ್ಗೆ ಶಾಲಾ ವಿದ್ಯಾರ್ಥಿನಿಯರು ಮಾತನಾಡಿ ನಮ್ಮ ಪರಿಸ್ಥಿತಿಕೂಡ ಇದಕ್ಕಿಂತ ಭಿನ್ನವೇನಿಲ್ಲ ಎಂದು ದೂರಿದರು.
         ಶುದ್ಧಕುಡಿಯುವ ನೀರಿಲ್ಲದೆ, ಇದ್ದ ನೀರನ್ನೆ ಕುಡಿಯುತಿದ್ದೇವೆ. ಸರ್ಕಾರದಿಂದ ಸಿಗುವಂತ ಸೌಲಭ್ಯಗಳನ್ನು ಯತ ಒತ್ತಾಗಿ ನೀಡದೆ ಊಟದಲ್ಲಿ ಅನ್ನ ಮುದ್ದಿಯಾಗಿರುತ್ತೆ. ಮುದ್ದೆ ಗಂಟಾಗಿರುತ್ತೆ. ಶಾಲೆಯಿಂದ ಅಡುಗೆ ಮಾಡುವವರು ಮನೆಗಳಿಗೆ ತುಂಬಿಕೊಂಡು ಹೋಗುತ್ತಾರೆ. ಸಾರಿಗೆ ಸೊಪ್ಪು ಇರುವುದಿಲ್ಲ. ತರಕಾರಿಯಂತು ಪರಿಶೀಲಿಸಿ ನೋಡಬೇಕಾಗುತ್ತೆ ಎಂದು ಒಂದರ ಮೇಲೊಂದರಂತೆ ಸಮಸ್ಯೆಗಳ ಕುರಿತು ಆರೋಪಿಸುವ ವಿದ್ಯಾರ್ಥಿಗಳು ಇಲ್ಲಿ ಎಲ್ಲಾ ಬೇಕಾಬಿಟ್ಟಿಯಾಗಿದೆ. 
 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link