ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಪ್ರಧಾನ ಮಂತ್ರಿಗೆ ಮನವಿ

ಹಾವೇರಿ :

     ತ್ರಿವಿಧದಾಸೋಹಿ,ಪವಾಡ ಪುರುಷ,ಶತಾಯುಷಿ,ಈ ನಾಡು ಕಂಡಂತಹ ಮಹಾಚೇತನ.ಶಿವಶರಣ ಶ್ರೀ ಸಿಧ್ಧಗಂಗಾ ಪುಣ್ಯಕ್ಷೇತ್ರದ ಪೀಠಾಧ್ಯಕ್ಷರಾದ ಶ್ರೀ ಡಾ|| ಶಿವುಕುಮಾರ ಮಹಾಸ್ವಾಮಿಗಳಿಗೆ ಗೌರವ ಭಾರತ ರತ್ನ ಪ್ರಶಸ್ತಿ ನೀಡಿ ಅವರ ಸಾಧನೆಯ ಜೀವನ ಪಾವನಗೊಳಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನ ಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

          ಶ್ರೀ,ಡಾ||ಶಿವಕುಮಾರ ಮಹಾಸ್ವಾಮಿಗಳು ಈ ನಾಡಿಗೆ ನೀಡಿದ ಕೊಡುಗೆಗಳು ಅಪಾರ ಲಕ್ಷ ಲಕ್ಷ ಬಡ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಿ ಅವರನ್ನು ವಿದ್ಯಾವಂತರನ್ನಾಗಿ ಮಾಡಿದವರು.ಸಿದ್ದಗಂಗಾ ಕ್ಷೇತ್ರದಲ್ಲಿ ಮಹಾದಾಸೋಹವನ್ನು ನೀಡುತ್ತಾ ಮಹಾದಾಸೋಹಿ ಎಂಬ ಬಿರುದನ್ನು ಪಡೆದವರು. 1930 ರಿಂದ ಶ್ರೀ ಸಿದ್ದಗಂಗಾ ಮಠದ ಜವಾಬ್ದಾರಿಯನ್ನು ಹೊತ್ತು ಅಂದಿನಿಂದ ನಿರಂತರವಾಗಿ ಯಾವುದೋ ಧರ್ಮಕ್ಕೆ ಸೀಮಿತವಾಗದೇ ಸರ್ವ ಧರ್ಮಗಳ ಮತ್ತು ಸಮಾಜದ ಏಳಿಗೆಗಾಗಿ ಶ್ರಮಿಸುತ್ತಾ ಬಂದಿದ್ದಾರೆ.

          ಇದರಿಂದ ಕಾಯಕಯೋಗಿ ಎಂಬ ಬಿರುದನ್ನು ಸಹ ಪಡೆದವರು ಹಾಗೂ ಶ್ರೀಗಳು ಎಷ್ಟೋ ಸಮಾಜದ ಗಣ್ಯರ ಬಾಲ್ಯಜೀವನಗಳ ಪರಿವರ್ತನೆಗೆ ಕಾರಣವಾಗಿದ್ದಾರೆ.ಇಂತಹ ಮಹಾನ್ ಚೇತನಕ್ಕೆ ನಡೆದಾಡುವ ದೇವರಿಗೆ ಅವರ ಗತವೈಭವದ ಯುಗಾಂತ್ಯ ಕಾಲದಲ್ಲಿ ಗೌರವ ಭಾರತರತ್ನ ಪ್ರಶಸ್ತಿ ನೀಡಿ ಗೌರವಿಸಬೇಕು ಮನವಿಯಲ್ಲಿ ತಿಳಿಸಲಾಗಿದೆ. ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಸತೀಶಗೌಡ ಮುದಿಗೌಡ್ರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯಶವಂತಗೌಡ ದೊಡ್ಡಗೌಡ್ರ.

            ಜಿಲ್ಲಾ ಸಹ ಕಾರ್ಯದರ್ಶಿ ಹಸನಸಾಬ ಹತ್ತಿಮತ್ತೂರ.ಹಾವೇರಿ ತಾಲೂಕು ಅಧ್ಯಕ್ಷ ಬಸವರಾಜ ಹೊಂಭರಡಿ ಗುತ್ತಲ ಹೋಬಳಿ ಘಟಕದ ಅಧ್ಯಕ್ಷ ರಾಮಕೃಷ್ಣ ಅಕುಡಕರ.ಗುತ್ತಲ ಯುವ ಘಟಕದ ಅಧ್ಯಕ್ಷ ಹಾಲೇಶ ಹಾಲಣ್ಣನವರ,ಗುತ್ತಲ ನಗರ ಘಟಕದ ಪ್ರಧಾನ ಕಾರ್ಯದರ್ಶಿ ಚನ್ನಪ್ಪ ಹೊನ್ನಮ್ಮನವರ ಅನೇಕರು ಪಾಲ್ಗೊಂಡಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link