ತಿಪಟೂರು :
ಸ್ಚಚ್ಛ ಭಾರತ ಅಭಿಯಾನ ಎಂದು ಹೇಳುತ್ತಿದ್ದ ಗ್ರಾ.ಪಂ ಅಧಿಕಾರಿಗಳು ಈಗ ಕೊರೊನಾ ಕೊರೊನಾ ಎಂದು ಕೊರಗುತ್ತ ಗ್ರಾಮಗಳ ಸ್ವಚ್ಛತೆಯನ್ನು ಸಂಪೂರ್ಣವಾಗಿ ಕಡೆಗಣಿಸಿ ಹಲವಾರು ರೋಗಗಳಿಗೆ ಆಶ್ರಯ ತಾಣವನ್ನಾಗಿ ಮಾಡುತ್ತಿದ್ದಾರೆ.ಚರಂಡಿಗಳನ್ನು ಸ್ವಚ್ಛಗೊಳಿಸಿದೇ ಇದ್ದುದರಿಂದ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಗೆ ಚರಂಡಿಗಳು ಸಂಪೂರ್ಣವಾಗಿ ಕಟ್ಟಿಕೊಂಡು ಮಳೆಯ ನೀರು ಮನೆಗಳಿಗೆ ನುಗುತ್ತಿದೆ.ಹೀಗೆ ನುಗ್ಗುವ ನೀರಿನ ಜೊತೆ ಚರಂಡಿಯ ಕಸವೆಲ್ಲಾ ಸೇರಿ ಮನೆಯೊಳಗೆ ನುಗ್ಗುವುದರಿಂದ ಇಲ್ಲದ ಸಾಂಕ್ರಾಮಿಕ ರೋಗಗಳು ಹಬ್ಬುವ ಸಾಧ್ಯತೆ ದಟ್ಟವಾಗಿದೆ.
ನಮ್ಮ ಊರಿಗೆ ಕೊರೊನಾ ಬರುವ ಮೊದಲೇ ಚಿಕನ್‍ಗುನ್ಯಾ, ಡೆಂಗ್ಯೂ, ಮಲೇರಿಯಾ ಇನ್ನಿತರೆ ರೋಗಗಳು ಬಂದು ನಾವು ಕೊರೊನಾ ಭಯದಿಂದ ಆಸ್ಪತ್ರೆಗೆ ಹೋಗುತ್ತಿಲ್ಲ, ಇನ್ನೂ ಈ ಕಾಯಿಲೆಗಳೇನಾದರು ಬಂದರೆ ಜನರು ಅನೇಕ ಕಷ್ಠಗಳನ್ನು ಅನುಭವಿಸಬೇಕು ಅಲ್ಲದೇ ರೋಗಿಗಳು ಆಸ್ಪತ್ರೆಗೆ ಹೋಗಲು ಸರಿಯಾದ ಸಾರಿಗೆಯ ವ್ಯವಸ್ಥೆಯೂ ಇಲ್ಲದೇ ಪರದಾಡುವಂತಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ