ಹುಳಿಯಾರು
ಹುಳಿಯಾರು ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಸರ್ಕಾರದಿಂದ ತೆರೆದಿರುವ ರಾಗಿ ಖರೀಧಿ ಕೇಂದ್ರವು ಮಾರ್ಚ್ 30 ಕ್ಕೆ ಅಂತ್ಯಗಳ್ಳಲಿದೆ ಎಂದು ಕೃಷಿ ಅಧಿಕಾರಿ ಕರಿಬಸಪ್ಪ ತಿಳಿಸಿದ್ದಾರೆ.ಕಳೆದ ಒಂದೂವರೆ ತಿಂಗಳಿಂದ ಸರ್ಕಾರದ ಬೆಂಬಲ ಬೆಲೆಯಲ್ಲಿ ರಾಗಿ ಖರೀಧಿಸುತ್ತಿದ್ದು ಇಲ್ಲಿಯವರೆವಿಗೆ 421 ರೈತರಿಂದ 13,700 ಕ್ವಿಂಟಲ್ ರಾಗಿ ಖರೀಧಿ ಮಾಡಲಾಗಿದೆ. ಈಗಾಗಲೇ ನೊಂದಾಯಿಸಿರುವ ರೈತರ ಪೈಕಿ ಇನ್ನೂ 120 ಮಂದಿ ರೈತರು ರಾಗಿ ಮಾರಲು ಬರಬೇಕಿದೆ ಎಂದು ವಿವರಿಸಿದರು.
ಬೆಂಬಲ ಬೆಲೆಯಲ್ಲಿ ರಾಗಿ ಮಾರುವ ರೈತರ ನೊಂದಾಣಿ ಕಾರ್ಯ ಈಗಾಗಲೇ ಸ್ಥಗಿತಗೊಂಡಿದ್ದು ಹಾಲಿ ನೋಂದಾಯಿಸಿರುವ ರೈತರಿಂದ ಮಾತ್ರ ರಾಗಿ ಖರೀದಿ ಮಾಡಲಾಗುತ್ತದೆ. ಹಾಗಾಗಿ ನೊಂದಣಿ ಮಾಡಿಸಿರುವ ರೈತರು ಮಾ.30 ರ ಒಳಗಾಗಿ ರಾಗಿ ಮಾರಬೇಕಿದ್ದು ಮಾ.30 ರ ನಂತರ ಬಂದರೆ ರಾಗಿ ಖರೀದಿಸುವುದಿಲ್ಲ ಎಂದು ಹೇಳಿದರು.
ರಾಗಿ ಮಾರುವ ರೈತರ ನೊಂದಣಿಗಾಗಿ ಎರಡ್ಮೂರು ಬಾರಿ ಗಡುವು ದಿನಾಂಕವನ್ನು ವಿಸ್ತರಿಸಲಾಗಿತ್ತಾದರೂ ಅಂದು ನೊಂದಣಿ ಮಾಡಿಸಲು ಬಾರದೆ ಈಗ ನೊಂದಣಿ ಮಾಡಿಸದೆ ನಿತ್ಯ ಏಳೆಂಟು ಮಂದಿ ರೈತರು ರಾಗಿ ಮಾರಲು ಬರುತ್ತಿದ್ದಾರೆ. ನೊಂದಣಿಯಾಗದ ರೈತರ ರಾಗಿ ಖರೀದಿಗೆ ಅವಕಾಶವಿಲ್ಲದಿರುವುದಿಲ್ಲ. ಹಾಗಾಗಿ ನೊಂದಣಿ ಮಾಡಿಸಿರುವ ರೈತರು ಮಾತ್ರ ಬರುವಂತೆ ಮನವಿ ಮಾಡಿದ್ದಾರೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
