ಶರಣ ಸಂಸ್ಕೃತಿ ಉತ್ಸವ ಯಶಸ್ವಿಗೆ ಸಹಕಾರ ಕೊಡಿ

ಚಿತ್ರದುರ್ಗ :

      ಶರಣ ಸಂಸ್ಕತಿ ಉತ್ಸವ ಮರುಘಮಠದಲ್ಲಿ 13ರಿಂದ 22 ರವರೆಗೆ ನಡೆಯಲಿದ್ದು ಈ ಉತ್ಸವ ಸಾಂಪ್ರದಾಯಿಕ ಅಚರಣೆಯಾಗಿರದೇ ವೈಚಾರಿಕತೆ ಬಿತ್ತುವ ಹಾಗೂ ಸಮಾನತೆ ಸಾರುವ ಬಸವಾದಿ ಶರಣರ ಅನುಭವ ಮಂಟಪದಂತೆ ಉಪನ್ಯಾಸ ಸಂವಾದ ಹಾಗೂ ಹಲವಾರು ವಿಚಾರಗೋಷ್ಟಿಗಳು ನಡೆಯಲಿದ್ದು ಈ ಕಾರ್ಯಕ್ರಮಗಳಿಗೆ ಸಾಕಷ್ಟು ಜನರು ಭಾಗವಹಿಸುತ್ತಿರುವುದರಿಂದ ಭಕ್ತರಿಗೆ ಊಟದ ವ್ಯವಸ್ಥೆ ಹಾಗೂ ವಸತಿ ನಿರ್ವಹಿಸುವುದರೊಂದಿಗೆ ಶರಣ ಸಂಸ್ಕತಿ ಉತ್ಸವ ಕಾಂರ್ಕ್ರಮವನ್ನು ಯಶಸ್ವಿಗೊಳಿಸಬೆಕೇಂದು ಡಾ. ಶಿವಮೂರ್ತಿ ಮುರುಘಶರಣರು ನೌಕರ ವರ್ಗದವರಿಗೆ ಮನವಿ ಮಾಡಿದರು

     ಮರುಘಮಠದ ಅವರಣದಲ್ಲಿರುವ ಅಲ್ಲಮಪ್ರಭು ಸಭಾಂಗಣದಲ್ಲಿ ಎಸ್ ಜೆ ಎಂ ವಿದ್ಯಾಪೀಠದ ನೌಕರರು ಶರಣ ಸಂಸ್ಕøತಿ ಉತ್ಸವದ ಸಿದ್ದತೆಯ ಬಗ್ಗೆ ಸೋಮವಾರ ಸೇರಿದ್ದ ಸಭೆಯಲ್ಲಿ ಶ್ರೀಗಳು ಮಾತನಾಡಿದರು

      ಈ ಭಾರಿ ವಿಶೇಷವಾಗಿ 13 ರಂದು ಸೌಹಾರ್ಧ ನಡಿಗೆ 14 ರಂದು ವಾಲಿಬಾಲ್ ಪಂಧ್ಯಾವಳಿ ಹಾಗೂ ಮಹಿಳೆಯರಿಗೆ ಕ್ರೀಡಾಕೂಟ ,15 ರಂದು ಸ್ವಚ್ಚತಾ ಅಭಿಯಾನ 16 ರಿಂದ ಬಸವ ತತ್ವ ದ್ವಜರೋಹಣದೊಂದಿಗೆ ಹಲವಾರು ಕಾರ್ಯಕ್ರಮಗಳು ಜರುಗಲಿವೆ ಈ ಕಾರ್ಯಕ್ರಮಗಳು ನೌಕರರು ಹಾಗೂ ಕುಟಂಬ ವರ್ಗದವರಿಗೆ ಉಪಯುಕ್ತ್ರವಾಗಿರುವುದರಿಂದ ಸಮಾರಂಭಗಳಿಗೆ ಭಾಗವಹಿಸಬೇಕೆಂದು ತಿಳಿಸಿದರು

       ನಂತರ ರಾಜ್ಯಾದಂತ ಅಗಮಿಸಿದ ಸಹಸ್ರ ನೌಕರರೊಂದಿಗೆ ಶ್ರೀಗಳು ಉತ್ಸವ ಸಿದ್ದತೆಯ ಬಗ್ಗೆ ಸಂವಾದ ನಡೆಸಿದರು ಸಭೆಯಲ್ಲಿ ಉತ್ಸವ ಸಮಿತಿಯ ಕಾರ್ಯದ್ಯಕ್ಷರಾದ ಪಟೇಲ್ ಶಿವಕುಮಾರ್ ಕಾರ್ಯದರ್ಶಿಗಳಾದ ಡಿ.ಎಸ್ ಮಲ್ಲಿಕಾರ್ಜುನ್ ವಿದ್ಯಾಪೀಠದ ಕಾರ್ಯದರ್ಶಿಗಳಾದ ಎ.ಜೆ ಪರಮಶಿವಯ್ಯ ಹಾಗೂ ಕಾರ್ಯನಿರ್ವಾಹಕ ನಿರ್ಧೇಶಕರಾದ ಡಾ.ಜಿ.ಎನ್ ಮಲ್ಲಿಕಾರ್ಜುನಪ್ಪ ,ಡಾ. ಈ.ಚಿತ್ರಶೇಖರ್ ಉಪಸ್ಥಿತರಿದ್ದರು ದೊರೆಸ್ವಾಮಿ ಸ್ವಾಗತಿಸಿ ವಂದಿಸಿದರು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap