ಶಿವಮೊಗ್ಗ
ಅಪ್ರಾಪ್ತ ಬಾಲಕಿ ಯೊಬ್ಬಳ ವಿವಾಹ ನಿಲ್ಲಿಸಿದ ಜಿಲ್ಲೆಯ ಪೊಲೀಸರಿಗೆ ಆತಂಕ ಎದುರಾಗಿದೆ.ವಿವಾಹ ನಡೆಸುತ್ತಿದ್ದ ಅಪ್ರಾಪ್ತ ಬಾಲಕಿಯನ್ನು ವಶಕ್ಕೆ ಪಡೆದು ಆಕೆಯನ್ನು ಸುರಭಿ ಸಖಿ ಕೇಂದ್ರಕ್ಕೆ ಒಪ್ಪಿಸುವ ಮುನ್ನ ನಡೆಸಿದ ಕೊರೊನಾ ಪರೀಕ್ಷೆ ಯಲ್ಲಿ ಸೋಂಕು ತಗುಲಿರುವುದು ಪತ್ತೆ ಯಾಗುತ್ತಿದ್ದಂತೆ ಜಿಲ್ಲಾ ಪೊಲೀಸ್ ವ್ಯವಸ್ಥೆ ಸಂಕಷ್ಟ ಕ್ಕೆ ಸಿಲುಕಿದೆ.
ಬಾಲಕಿಯನ್ನು ವಶಕ್ಕೆ ಪಡೆದ ನಂತರ ಆಕೆಯ ಸಂಪರ್ಕ ಕ್ಕೆ ಬಂದಿದ್ದ ಎಎಸ್‍ಪಿ, 5 ಮಂದಿ ಡಿವೈಎಸ್‍ಪಿ, 12 ಮಂದಿ ಸಿಪಿಐ, ಸೇರಿದಂತೆ ಸಖಿ ಕೇಂದ್ರದ ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ.ಐದು ದಿನಗಳ ಹಿಂದೆ ಶಿಕಾರಿಪುರ ತಾಲೂಕಿನ ತರಲಘಟ್ಟದ ಅಪ್ರಾಪ್ತ ಬಾಲಕಿಳಗೆ ಆಕೆಯ ಪೋಷಕರು ಮದುವೆಗೆ ಸಿದ್ಧತೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಶಿಕಾರಿಪುರ ಗ್ರಾಮಾಂತರ ಪೊಲೀಸರಿಗೆ ಬಂದಿದೆ.
ಮಾಹಿತಿ ಮೇರೆಗೆ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸರ್ಕಲ್ ಇನ್ಸ್ ಪೆಕ್ಟರ್,ವಿವಾಹ ನಡೆಸಲು ಮುಂದಾಗಿದ್ದ ಬಾಲಕಿಯನ್ನು ವಶಕ್ಕೆ ಪಡೆದು ಶಿವಮೊಗ್ಗದ ಸುರಭಿ ಸಖಿ ಕೇಂದ್ರಕ್ಕೆ ಒಪ್ಪಿಸಿದ್ದಾರೆ.ಬಾಲಕಿಯನ್ನು ಸಖಿ ಕೇಂದ್ರಕ್ಕೆ ಒಪ್ಪಿಸಿದ ಸಿಪಿಐ ಅವರು ನಂತರ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ನಡೆದ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಭಾಗವಹಿಸಿದ್ದಾರೆ. ಆದರೆ ನಿನ್ನೆ ಬಂದ ಅಪ್ರಾಪ್ತೆಯ ಕೊರೊನಾ ವರದಿ ಇಡೀ ಪೊಲೀಸ್ ವ್ಯವಸ್ಥೆಯನ್ನೇ ಬೆಚ್ಚಿ ಬೀಳುವಂತೆ ಮಾಡಿದೆ.
ಅಪ್ರಾಪ್ತ ಬಾಲಕಿಗೆ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿದೆ. ಆದ್ದರಿಂದ ಜಿಲ್ಲೆಯ ಓರ್ವ ಎಎಸ್‍ಪಿ, 5 ಮಂದಿ ಡಿವೈಎಸ್‍ಪಿ, 12 ಮಂದಿ ಸಿಪಿಐ, ಸೇರಿದಂತೆ ಸಖಿ ಕೇಂದ್ರದ ಸಿಬ್ಬಂದಿ ಅವರುಗಳನ್ನು ಕ್ವಾರಂಟೈನ್ ಮಾಡಲಾಗಿದೆ.ಈಗ ಗೃಹ ಇಲಾಖೆ ಬೆಂಗಳೂರಿನ ವಿವಿಧ ವಿಭಾಗಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಓರ್ವ ಎಎಸ್‍ಪಿ, 4 ಮಂದಿ ಡಿವೈಎಸ್‍ಪಿ ಹಾಗೂ 6 ಮಂದಿ ಸಿಪಿಐ ಅವರುಗಳನ್ನು ಜಿಲ್ಲೆಗೆ ಕರ್ತವ್ಯಕ್ಕೆ ನಿಯೋಜನೆಗೊಳಿಸಿ ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
