ಶೀಘ್ರದಲ್ಲಿ ಕನ್ನಡದಲ್ಲಿಯೇ ಪೊಲೀಸ್ ಕಮಾಂಡ್ ಗಳು: ನೀಲಮಣಿ ಎಸ್ ರಾಜು…!!

ಬೆಂಗಳೂರು

         ಪೊಲೀಸ್ ಪರೇಡ್ ಸಂದರ್ಭದಲ್ಲಿ ಹಿಂದಿ ಮತ್ತು ಇಂಗ್ಲಿಷ್‍ನಲ್ಲಿ ನೀಡುವ ಕಮಾಂಡ್‍ಗಳಿಗೆ ಶೀಘ್ರವೇ ಗುಡ್‍ಬೈ ಹೇಳಿ ಕನ್ನಡದಲ್ಲಿಯೇ ಕಮಾಂಡ್‍ಗಳನ್ನು ನೀಡುವ ವ್ಯವಸ್ಥೆ ಜಾರಿಗೆ ತರಲು ರಾಜ್ಯ ಪೊಲೀಸ್ ಇಲಾಖೆ ಮುಂದಾಗಿದೆ.ಪರೇಡ್ ಸಂದರ್ಭದಲ್ಲಿ ಕನ್ನಡದಲ್ಲೆ ಕಮಾಂಡ್‍ಗಳನ್ನು ಅನುಷ್ಠಾನಕ್ಕೆ ತರಲು ಅನುಮತಿ ನೀಡಬೇಕೆಂದು ಗೃಹ ಇಲಾಖೆಗೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕಿ ನೀಲಮಣಿ. ಎನ್ ರಾಜು ಅವರು ಪತ್ರ ಬರೆದಿದ್ದಾರೆ

       ಗೃಹ ಇಲಾಖೆಯ ಉಪಕಾರ್ಯದರ್ಶಿಯವರಿಗೆ ಪತ್ರ ಬರೆದಿರುವ ನೀಲಮಣಿ ರಾಜು ಅವರು 2016 ರಿಂದ ಬೆಳಗಾವಿ ಜಿಲ್ಲೆಯಲ್ಲಿ ಕನ್ನಡ ಭಾಷೆಯಲ್ಲೆ ಕಮಾಂಡ್‍ಗಳನ್ನು ನೀಡಲಾಗುತ್ತಿದ್ದು, ಇದನ್ನು ಆಧರಿಸಿ ಕನ್ನಡ ಕಮಾಂಡ್‍ಗಳ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ ಎಂದು ತಿಳಿಸಿದ್ದಾರೆ.

      ಗೃಹ ಇಲಾಖೆಯ ಅಧಿಕಾರಿಗಳು ಚುನಾವಣಾ ಕೆಲಸ-ಕಾರ್ಯಗಳಲ್ಲಿ ತಲ್ಲೀನರಾಗಿದ್ದು, ಈ ಪ್ರಕ್ರಿಯೆಗಳು ಮುಗಿದ ನಂತರ ಈ ವಿಷಯದ ಬಗ್ಗೆ ಪರಿಶೀಲಿಸಲು ಅಧಿಕಾರಿಗಳು ತೀರ್ಮಾನಿಸಿದ್ದಾರೆ .

      ಕನ್ನಡದಲ್ಲಿಯೇ ಕಮಾಂಡ್‍ಗಳನ್ನು ನೀಡುವ 2017ರಲ್ಲಿ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಎಸ್. ಪರಶಿವಮೂರ್ತಿ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಲಾಗಿತ್ತು. ಈ ಸಮಿತಿ ವಿವಿಧ ಪೊಲೀಸ್ ವಿವಿಧ ಕೈಪಿಡಿಗಳನ್ನು ಪರಿಶೀಲಿಸಿ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ವರದಿ ಸಲ್ಲಿಸಿದ್ದರು.

      ಮಾ. 7 ರಂದು ಈ ಸಮಿತಿ ಬೆಳಗಾವಿಗೆ ತೆರಳಿ ಪರೇಡ್ ಸಂದರ್ಭದಲ್ಲಿ ಕನ್ನಡದಲ್ಲೆ ನೀಡುತ್ತಿರುವ ಕಮಾಂಡ್‍ಗಳನ್ನು ಪರಿಶೀಲಿಸಿ ಅದರಿಂದ ಪ್ರೇರಿತರಾಗಿ ಕನ್ನಡ ಭಾಷೆಯಲ್ಲೆ ಕಮಾಂಡ್ ಬಳಸಲು ಪೊಲೀಸ್ ಇಲಾಖೆ ಮುಂದಾಗಿದೆ.ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗೃಹ ಇಲಾಖೆ ಉಪಕಾರ್ಯದರ್ಶಿ ಜೆ.ಡಿ ಮಧುಚಂದ್ರ ತೇಜಸ್ವಿ, ನೀಲಮಣಿ ಎನ್. ರಾಜು ಬರೆದಿರುವ ಪತ್ರ ಇನ್ನು ಪರಿಶೀಲಿಸಿಲ್ಲ. ಚುನಾವಣಾ ಪ್ರಕ್ರಿಯೆಗಳು ಪೂರ್ಣಗೊಂಡ ನಂತರ ಈ ಬಗ್ಗೆ ಪರಿಶೀಲಿಸುವುದಾಗಿ ಭರವಸೆ ನೀಡಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap