ಹಿರೇಕೆರೂರು
ತಾಲೂಕಿನಾದ್ಯಂತ ಕೋರೋನಾ ಕರ್ಫ್ಯೂ ಮತ್ತಷ್ಟು ಕಠಿಣವಾಗಿದ್ದರಿಂದ ತಾಲೂಕಿನಾದ್ಯಂತ ನಿಷೇಧಾಜ್ಞೆ ಜಾರಿಯಾಗಿದ್ದು ಇದರಿಂದ ತಾಲ್ಲೂಕಿನಲ್ಲಿ ಜನಸಂಚಾರ ಬಹಳ ವಿರಳವಾಗಿದೆ.
ಪಟ್ಟಣದ ಅಂಗಡಿ-ಮುಂಗಟ್ಟುಗಳನ್ನು ಮುಚ್ಚಿದ್ದರಿಂದ ಬಿಕೋ ಎನ್ನುತ್ತಿತ್ತು. ಕೆಲವು ಔಷಧ ಅಂಗಡಿಗಳು ಮತ್ತು ಕಿರಾಣಿ ಅಂಗಡಿಗಳು ಮಾತ್ರ ತೆರೆದಿದ್ದವು. ಪೆಟ್ರೋಲ್ ಖರೀದಿಗೆ ನಿರ್ಬಂಧ ವಿಧಿಸಿದ್ದರಿಂದ ರಸ್ತೆಯ ಮೇಲೆ ಬೈಕ್ ಸವಾರರ ಸಂಖ್ಯೆ ಕೂಡ ತೀರ ವಿರಳವಾಗಿತ್ತು. ಪೊಲೀಸರು ಅಲ್ಲಲ್ಲಿ ಬ್ಯಾರಿಕೇಡ್ ಗಳನ್ನು ಹಾಕಿ ಮುಕ್ತ ಸಂಚಾರಕ್ಕೆ ತಡೆ ಹಾಕಿದ್ದರು. ತುರ್ತು ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿತ್ತು ಪಟ್ಟಣದಲ್ಲಿ ಅನಗತ್ಯವಾಗಿ ಸಂಚರಿಸುವವರಿಗೆ ಪಿಎಸ್ಐ ಎಂ. ಟಿ. ದೀಪು ಅನಗತ್ಯವಾಗಿ ಸಂಚರಿಸುವುದನ್ನು ನಿಲ್ಲಿಸುವಂತೆ ಖಡಕ್ ಸೂಚನೆಯನ್ನು ನೀಡಿದರು.ಅನಗತ್ಯವಾಗಿ ರಸ್ತೆಯಲ್ಲಿ ಸಂಚರಿಸುವವರು ವಿರುದ್ಧ ಕಾನೂನು ಪ್ರಕಾರ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸೂಚಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ