ಪ್ರಾಯೋಗಿಕ ಶಿಕ್ಷಣದಿಂದ ಮಾತ್ರ ಬದಲಾವಣೆ ಸಾಧ್ಯ

ಚಿತ್ರದುರ್ಗ

         ನಾಲ್ಕು ಕೋಡೆಗಳ ನಡುವಿನ ಸಂಪ್ರದಾಯ ಶಿಕ್ಷಣದಿಂದ ಶಾಂತಿ ಮತ್ತು ಸೌಹಾರ್ದ ಸಮಾಜ ನಿರ್ಮಾಣ ಸಾಧ್ಯವಿಲ್ಲ, ಇದರ ಜೊತೆಗೆ ಪ್ರಾಯೋಗಿಕವಾದ ಶಿಕ್ಷಣದ ಅಗತ್ಯ ಇದೆ ಎಂದು ಸ್ನಾತಕೋತ್ತರ ಕೇಂದ್ರ ಪರೀಕ್ಷಾ ವಿಭಾಗದ ನಿಯಂತ್ರಣಾಧಿಕಾರಿಗಳಾದ ಡಾ.ಗುಡದೇಶ್ವರಪ್ಪ ತಿಳಿಸಿದರು.

         ನಗರದ ಕರ್ನಾಟಕ ಶಾಂತಿ & ಸೌಹಾರ್ದತ ವೇದಿಕೆ. ವಿಮುಕ್ತಿ ವಿದ್ಯಾಸಂಸ್ಥೆ(ರಿ).ಸರ್ಕಾರಿ ಕಲಾ ಕಾಲೇಜ್. ಸ್ನಾತಕೋತ್ತರ ಕೇಂದ್ರ. ಸಂಯುಕ್ತಾಶ್ರಯದಲ್ಲಿ ಕಾಲೇಜಿನ ಸ್ನಾತಕೋತ್ತರ ಕೇಂದ್ರದಲ್ಲಿ ಏರ್ಪಡಿಸಲಾಗಿದ್ದ ಶಾಂತಿ & ಸೌಹಾರ್ದತೆ ಕಡೆಗೆ.ನಮ್ಮ ನಡಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿ, ಇದೇ ವಿಷಯದ ಬಗ್ಗೆ ಪ್ರಬಂಧ ಸ್ಫರ್ದೆಯಲ್ಲಿ ವಿಜೇತರಿಗೆ ಪ್ರಮಾಣಪತ್ರಗಳನ್ನು ವಿತರಿಸಿ ಮಾತನಾಡುತ್ತಿದ್ದರು.

         ಯುವ ಸಮೂಹವು ದೇಶವನ್ನು ಜಾತಿ, ಧರ್ಮ, ಪಕ್ಷಗಳನ್ನು ಹೊರತುಪಡಿಸಿ ಬೆಳೆಯುವಂತಹ ಕೆಲಸ ಯುವಕರಿಂದ ಆಗಬೇಕು. ವಿಶಾಲ ಮನೋಭಾವ ಬೆಳೆಸಿಕೊಂಡು ಮತ್ತು ಶಾಂತಿ ಸೌಹಾರ್ದತೆಗೆ ಒತ್ತು ನೀಡಿದರೆ ಬದಲಾವಣೆ ಸಾಧ್ಯ ಎಂದ ಅವರು, ಪ್ರಸ್ತುತ ಬದುಕಿನಲ್ಲಿ ಜಾತಿಗಳು, ಧರ್ಮಗಳ ನಡುವೆ ಸಂಘರ್ಷ ತಾಂಡವಾಡುತ್ತಿದೆ. ವಿದ್ಯಾರ್ಥಿ ದೆಸೆಯಲ್ಲಿ ಎಲ್ಲವನ್ನೂ ಮೀರಿ ಬೆಳೆದು ಸಮಾಜ ಸುಧಾರಣೆ ಮಾಡಬೇಕು. ಬುದ್ದಿವಂತ ವ್ಯಕ್ತಿಗಳು ಸಮಾಜದಲ್ಲಿ ಒಗ್ಗಟ್ಟು , ಶಿಕ್ಷಣ , ಕಾನೂನಿನ ಅರಿವು ಮೂಡಿಸಿ ಶಾಂತಿ ಸೌಹಾರ್ದ ಬದುಕು ಸಾಗಿಸಲು ಜ್ಞಾನ ನೀಡಬೇಕು ಎಂದು ಹೇಳಿದರು.

         ಬಸವಣ್ಣ ಮತ್ತು ಬುದ್ದ , ಅಂಬೇಡ್ಕರ್ ಅವರು ಯುವ ಸಮೂಹ ಶಾಂತಿ, ನ್ಯಾಯ, ವಿವಿಧತೆಯಲ್ಲಿ ಏಕತೆಯ ಭಾವನೆ ಬೆಳೆಸಿಕೊಳ್ಳಿ ಎಂದು ಸಂದೇಶ ಸಾರಿದ್ದರು. ಶಿಕ್ಷಣದ ಜೊತೆಗೆ ಸಾಮಾಜಿಕ ಕಳಕಳಿಯನ್ನು ಸಹಾ ವಿದ್ಯಾರ್ಥಿಗಳಾದ ನೀವುಗಳು ಬೆಳಸಿಕೊಳ್ಳಬೇಕಿದೆ, ಸಮಾಜ, ದೇಶ ಎಂಬ ಅಭೀಮಾನ ಇರಬೇಕಿದೆ ಎಂದರು.

         ಸ್ಥಳೀಯ ಜನರ ಕೂಗು ಮತ್ತು ಹೋರಟದ ಫಲವಾಗಿ ಸ್ನಾತಕೋತ್ತರ ಕೇಂದ್ರ ಚಿತ್ರದುರ್ಗಕ್ಕೆ ತೆರೆಯಲಾಯಿತು. ಸ್ನಾತಕೋತ್ತರ ಕೇಂದ್ರವಾದ ಮೇಲೆ ಅನೇಕ ಚರ್ಚೆಗಳು, ಸಂವಾದ, ಪ್ರಬಂಧ ಸ್ವರ್ಧೆಗಳಲ್ಲಿ ವಿಧ್ಯಾರ್ಥಿಗಳು ಭಾಗವಹಿಸಲು ಸಹಾಯಕವಾಗಿದೆ ಎಂದು ಗುಡದ್ದೇಶ್ವರಪ್ಪ ತಿಳಿಸಿದರು.

        ಪತ್ರಕರ್ತ ಸಂಘದ ರಾಜ್ಯಸಮಿತಿ ಸದಸ್ಯ ನರೇನಹಳ್ಳಿ ಅರುಣ್ ಕುಮಾರ್ ಮಾತನಾಡಿ ಸರ್ಕಾರಿ ಕಲಾ ಕಾಲೇಜು ಸ್ವಂತ ಶಕ್ತಿಯ ಮೇಲೆ ಹೆಚ್ಚು ಪ್ರಸಿದ್ಧವಾಗಿದೆ. ದೇಶದಲ್ಲಿ ಗುಂಪು ಘರ್ಷಣೆ, ದಬ್ಬಾಳಿಕೆ, ಭಯೋತ್ಪಾತಕ ಇಂತಹ ಆತಂಕ ಬದುಕು ನಡೆಸುತ್ತಿದ್ದೇವೆ. ಒಬ್ಬರಿಗೊಬ್ಬರು ಕಂಡರೆ ಅಸಹಕಾರ ಜೀವನ ನಡೆಸುತ್ತಿರುವುದು ಎಲ್ಲಾರೂ ತಮ್ಮನ್ನು ಪ್ರಶ್ನಿಸಿಕೊಳ್ಳುವ ವಾತವರಣ ನಿರ್ಮಾಣವಾಗಿದೆ. ವಿಧ್ಯಾರ್ಥಿಗಳು ಜೀವನದಲ್ಲಿ ಶಾಂತಿ , ತಾಳ್ಮೆ, ಸೌಹಾರ್ದತೆಯನ್ನು ಅಳವಡಿಸಿಕೊಳ್ಳಬೇಕು ಎಂದರು. ಸ್ನಾತಕೋತ್ತರ ವಿಧ್ಯಾರ್ಥಿಗಳು ಶಿಕ್ಷಕರಾಗಿ ಸಾವಿರಾರು ಯುವಕ ಯುವತಿಯ ಬದುಕು ನಿರ್ಮಿಸುವ ಉತ್ಗಮ ವಾತವರಣ. ಸೃಷ್ಟಿಸಲು ನಿಮಗೆ ಅವಕಾಶವಿದೆ ಅದಕ್ಕಾಗಿ ಶಾಂತಿ ಸೌಹಾರ್ದ ಮನೋಭಾವ ಬೆಳೆಸಲು ಶಿಕ್ಷಕರು ಶ್ರಮಿಸಬೇಕು. ಧರ್ಮದ, ಜಾತಿ ವ್ಯವಸ್ಥೆ , ಪರಿಸರವನ್ನು ಬದಲಾಯಿಸಬೇಕು ಎಂದು ತಿಳಿಸಿದರು.

         ಕವಿ . ನಿಸರ್ ಅಹಮ್ಮದ್, ಪ್ರಾಂಶುಪಾಲರಾದ . ಡಾ.ಟಿ.ಎಲ್. ಸುಧಾಕರ್, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಲಕ್ಷ್ಮಣ್, .ಜಯಮ್ಮ, ವಿಮುಕ್ತಿ ವಿದ್ಯಾಸಂಸ್ಥೆಯ ವಿಶ್ವಸಾಗರ್,.ತಿಪ್ಪೇಸ್ವಾಮಿ, ಕವಿ ಮತ್ತು ಪತ್ರಿಕಾ ವಿತರಕ ಕೆ.ಎಚ್. ಜಯಪ್ರಕಾಶ್ ಇದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link