ಮಕ್ಕಳಲ್ಲಿ ಕ್ರೀಡೆ, ಸಾಹಿತ್ಯ, ಉಳಿಸಿ ಬೆಳೆಸುವುದು ನಮ್ಮ ನಿಮ್ಮೆಲ್ಲರ ಕರ್ತವ್ಯ-ಶಾಸಕ ಗಾಲಿ ಸೋಮಶೇಖರರೆಡ್ಡಿ

ಬಳ್ಳಾರಿ

          ಮಕ್ಕಳಲ್ಲಿ ಕ್ರೀಡೆ, ಸಾಹಿತ್ಯ, ಸಂಸ್ಸøತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕೆಲವು ಕನ್ನಡಪರ ಸಂಘಟನೆಗಳ ನಡೆಸಿಕೊಂಡು ಬರುತ್ತಿರುವ ಕಾರ್ಯಕ್ರಮಗಳು ಶ್ಲಾಘನೀಯ ಎಂದು ಬಳ್ಳಾರಿ ಶಾಸಕರಾದ ಗಾಲಿ ಸೋಮಶೇಖರರೆಡ್ಡಿ ಹೇಳಿದರು. ಅವರು ನಗರದ ರಾಘವಕಲಾಮಂದಿರದಲ್ಲಿ ಕನ್ನಡ ಚೈತನ್ಯ ವೇದಿಕೆ ಆಯೋಜಿಸಿದ್ದ 18ನೇ ವಾರ್ಷಿಕೋತ್ಸವದ ಸಾಂಸ್ಕøತಿಕ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

         2001ರಲ್ಲಿ ಆರಂಭವಾದ ಈ ವೇದಿಕೆ ನಾನು ರಾಜಕೀಯ ಪ್ರವೇಶ ಮಾಡಿದ್ದು 2001ರಿಂದ ಎಂದು ತಾಳೆ ಹಾಕಿದರು. ಮುಂಬರುವ ದಿನಗಳಲ್ಲಿ ಸಹ ಮಕ್ಕಳಿಗಾಗಿ ಉತ್ತಮ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಮೂಲಕ ಮಕ್ಕಳನ್ನು ಪ್ರೋತ್ಸಾಹಿಸಬೇಕೆಂದು ಅದಕ್ಕೆ ಬೇಕಾಗುವ ಎಲ್ಲಾ ಸಹಕಾರಗಳನ್ನು ನಾನೇ ನೀಡುವುದಾಗಿ ಘೋಷಿಸಿದರು. ನಂತರ ಮಾತನಾಡಿದ ಸರಳಾದೇವಿ ಸತಿಶ್ಚಂದ್ರ ಹಗರವಾಲ್ ಕಾಲೇಜಿನ ಪ್ರಾಂಶುಪಾಲರಾದ ಯು.ಅಬ್ದುಲ್ ಮುತಾಲಿಬ್ ಮಾತನಾಡಿ ಕೆಲವು ಸಂಘ ಸಂಸ್ಥೆಗಳಲ್ಲಿ ಮಾತ್ರ ಇಂತಹ ಕಾರ್ಯಕ್ರಮಗಳು ಆಯೋಜಿಸುತ್ತಿದ್ದು.

         ಅದರಲ್ಲೆ ಪ್ರಮೂಖವಾಗಿ ಕನ್ನಡ ಚೈತನ್ಯ ವೇದಿಕೆ ಮಕ್ಕಳಿಗಾಗಿ ಬಹಳ ಉತ್ಸಹದಿಂದ ಕಾರ್ಯಕ್ರಮಗಳನ್ನು ಹಮ್ಮಿ ಕೊಳ್ಳುತ್ತಿರುವುದು ಶ್ಲಾಘನೀಯ ಪ್ರತಿಯೊಬ್ಬ ಮಕ್ಕಳಲ್ಲಿ ಒಂದೊಂದು ಕಲೆ ಅಡಗಿರುತ್ತದೆ. ಅದನ್ನು ಹೊರತರುವ ಪ್ರಯತ್ನ ಈ ವೇದಿಕೆ ಮಾಡುತ್ತಿರುವುದು ಜೊತೆಗೆ ನಮ್ಮ ಕಾಲೇಜಿನಲ್ಲಿ ರಂಗಪ್ರವೇಶಕ್ಕಾಗಿ ಒಂದು ತರಗತಿಯನ್ನು ಸಹ ಆರಂಭಿಸಿದ್ದು ಆಸಕ್ತಿಯುಳ್ಳ ಮಕ್ಕಳು ಈ ತರಗತಿಗೆ ಬಂದು ಭಾಗವಹಿಸಿ ತಮ್ಮ ಕಲೆಯನ್ನು ಇನ್ನೂ ಹೆಚ್ಚಿಸಿಕೊಳ್ಳಬಹುದು ಸಾರ್ವಜನಿಕರಿಗೆ ಕರೆ ನೀಡಿದರು.

         ವೇದಿಕೆಯ ಕಾರ್ಯಧ್ಯಕ್ಷ ಹಾಗೂ ಪತ್ರಕರ್ತರಾದ ರಘುರಾಮ್ ಪೆಂಡ್‍ಕೂರ್ ಇವರಿಗೆ ಸನ್ಮಾನಿಸಲಾಯಿತು. ನಂತರ ವೇದಿಕೆಯ ಅಧ್ಯಕ್ಷ ಬಿ.ಎಸ್ ಪ್ರಭುಕುಮಾರ ಪ್ರಾಸ್ತವಿಕವಾಗಿ ಸಂಘ ನಡೆದು ಬಂದ ದಾರಿಯನ್ನು ವಿವರಿಸಿದರು. ನಂತರ ಈ ಹಿಂದೆ 7ನೇ ತರಗತಿ ಮಕ್ಕಳಿಗಾಗಿ ಆಯೋಜಿಸಿದ್ದ ಸಾಮಾನ್ಯಜ್ಞಾನ ಪರೀಕ್ಷೆಯಲ್ಲಿ ವಿಜೆತರಾದ ಬಾಲಭಾರತಿ ಶಾಲೆಯ ವಿದ್ಯಾರ್ಥಿನಿ ವರ್ಷಿಣಿಗೆ ಮೊದಲನೇ ಬಹುಮಾನ ಗಳಿಸಿದ್ದು ಅದೇ ಶಾಲೆಯ ಮತ್ತೊರ್ವ ವಿದ್ಯಾರ್ಥಿನಿ ಎರಡನೇ ಬಹುಮಾನ ರೇಣುಕಾ ಪ್ರಸಾದ್ ಗಳಿಸಿದ್ದು.

           ಮತ್ತು ಮೂರನೇ ಬಹುಮಾನ ಚಕ್ರದಾರ ಶಾಂತಿನಿಕೇತನ ಮತ್ತು ಬಾಲಭಾರತಿಯ ವಿನೂತಾ ಇವರಿಗೆ ಬಹುಮಾನವನ್ನು ವಿತರಣೆ ಮಾಡಲಾಯಿತು. ನಂತರ ವಿವಿದ ಶಾಲಾ ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮ ವಿಶೇಷವಾಗಿ ಗುಲ್ಬರ್ಗ ಕಲಾವಿದ ಜೂನಿಯರ್ ರಾಜಕುಮಾರ್ ನೃತ್ಯಗಳು ಜನರನ್ನು ರಂಜಿಸಿದವು. ಈ ಕಾರ್ಯಕ್ರಮದಲ್ಲಿ ಮಹಿಳಾ ಘಟಕದ ಅಧ್ಯಕ್ಷೆ ಜೋತಿಪ್ರಕಾಶ್ ಅಥಿತಿಗಳಾಗಿ ಆಗಮಸಿದ್ದ ಶಾಂತರಾಮ ಶೆಟ್ಟಿ, ಬಿಜೆಪಿ ಯುವಮೊರ್ಚ ಅಧ್ಯಕ್ಷ ಕೆ.ಎಸ್ ಅಶೋಕ್, ವೇದಿಕೆಯ ಮೇಲೆ ಆಸಿನರಾಗಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link