ವಿದ್ಯಾರ್ಥಿನಿಗೆ ಸಾವಿಗೆ ನ್ಯಾಯ ಒದಗಿಸಲು ಪ್ರತಭಟನೆ

ಬೆಂಗಳೂರು

     ಪ್ರೀತಿಸುವಂತೆ ಸಹಪಾಠಿ ನೀಡುತ್ತಿದ್ದ ಕಿರುಕುಳಕ್ಕೆ ಬೇಸತ್ತು ನೇಣಿಗೆ ಶರಣಾಗಿದ್ದ ವಿದ್ಯಾರ್ಥಿನಿ ಸಾವಿಗೆ ಕಾರಣನಾದ ಆರೋಪಿ ಮಂಜುನಾಥ್‍ಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ನೂರಾರು ವಿದ್ಯಾರ್ಥಿಗಳು ನಗರ ರಾಮಮೂರ್ತಿನಗರದಲ್ಲಿ ಪ್ರತಿಭಟನೆ ಜಾಥ ನಡೆಸಿದರು.

       ರಾಮಮೂರ್ತಿನಗರದ ಎನ್.ಆರ್.ಐ ಬಡಾವಣೆಯಲ್ಲಿ ವಿದ್ಯಾರ್ಥಿನಿಗೆ ನ್ಯಾಯ ದೊರಕಿಸುವಂತೆ ವಿದ್ಯಾರ್ಥಿಗಳಿಂದ ಜಾಥಾ ಜಸ್ಟೀಸ್ ಪಾರ್ ಲೀನಾ ಎಂಬ ನಾಮಪಲಕಗಳನ್ನು ಹಿಡಿದು ವಿದ್ಯಾರ್ಥಿನಿ ಸಾವಿಗೆ ನ್ಯಾಯ ದೊರಕಿಸಿಕೊಡಿ ಎಂದು ನೂರಾರು ವಿದ್ಯಾರ್ಥಿಗಳು ಪ್ರತಿಭಟನೆ ಜಾಥ ನಡೆಸಿದರು.

      ಕಳೆದ ಮಂಗಳವಾರ ಅಕ್ಷಯನಗರ ನಿವಾಸಿಯಾಗಿದ್ದ ಈ ವಿದ್ಯಾರ್ಥಿನಿ ತನ್ನ ಸಹಪಾಠಿ ಮಂಜುನಾಥ್‍ನ ಕಿರುಕುಳದಿಂದ ಬೇಸತ್ತು ಮನೆಯಲ್ಲಿ ನೇಣಿಗೆ ಶರಣಾಗಿದ್ದಳು. ಇದನ್ನು ವಿರೋಧಿಸಿ ಆರೋಪಿ ಮಂಜುನಾಥ್‍ಗೆ ಕಠಿಣ ಶಿಕ್ಷೆ ವಿಧಿಸುವಂತೆ ಜಾಥ ನಡೆಸಿದ್ದು, ಈ ಜಾಥದಲ್ಲಿ ಬಿಗ್‍ಬಾಸ್ ಖ್ಯಾತಿಯ ಕಿರಿಕ್ ಕೀರ್ತಿ, ವಿದ್ಯಾರ್ಥಿನಿಯ ಪೋಷಕರು ಭಾಗವಹಿಸಿದ್ದರು.

      ರಾಜ್ಯದಲ್ಲಿ ಇದೇ ರೀತಿಯ ಪ್ರಕರಣಗಳು ಹೆಚ್ಚುತ್ತಿವೆ. ರಾಜಕೀಯ ಒತ್ತಡಕ್ಕೆ ಒಳಗಾಗದೇ ನಿಷ್ಪಕ್ಷಪಾತವಾಗಿ ತನಿಖೆ ಆಗಬೇಕಿದ್ದು, ತಪ್ಪಿತಸ್ಥರು ಯಾರೆ ಆದರೂ ಅಂತಹವರಿಗೆ ಕಠಿಣ ಶಿಕ್ಷೆಯಾಗಬೇಕು. ಶಿಕ್ಷೆಯಾದಾಗ ಮಾತ್ರ ಇಂತಹ ಘಟನೆಗಳು ನಿಲ್ಲುತ್ತವೆ. ಮುಂದೆ ಇಂತಹ ಘಟನೆಗಳು ಮರುಕಳಿಸಬಾರದು. ಇನ್ನು ಕೆಲ ಕಿಡಿಗೇಡಿಗಳು ವಿದ್ಯಾರ್ಥಿನಿ ಹೆಸರಲ್ಲಿ ನಕಲಿ ಫೇಸ್‍ಬುಕ್ ಖಾತೆ ತೆರೆದು ಸುಳ್ಳು ಮಾಹಿತಿಗಳನ್ನು ಪೆಸ್ಟ್ ಮಾಡಿ ಆಕೆಯ ಹೆಸರಿಗೆ ಮಸಿ ಬಳಿಯುವ ಕೆಲಸ ಮಾಡಿದ್ದಾರೆ. ಅಂತವರ ವಿರುದ್ಧವೂ ಪೆÇಲೀಸ್ ಇಲಾಖೆ ಕಾನೂನು ಕ್ರಮ ಜರುಗಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.

      ಈ ವೇಳೆ ಮಾತನಾಡಿದ ಕಿರಿಕ್ ಕೀರ್ತಿ, ವಿದ್ಯಾರ್ಥಿನಿ ಸಾವಿಗೆ ಕಾರಣವಾದ ಆರೋಪಿಯನ್ನು ಬಂಧಿಸುವಲ್ಲಿ ಪೆಲೀಸರು ಯಶಸ್ವಿಯಾಗಿದ್ದಾರೆ. ಆರೋಪಿ ಬಾಲಾಪರಾಧಿ ಆಗಿರುವುದರಿಂದ ಅವನನ್ನ ಹೊರಗಡೆ ಯಾರಿಗೂ ತೋರಿಸಿಲ್ಲ. ಇದೇ ರೀತಿ ತುಂಬಾ ಜನ ಹೆಣ್ಣುಮಕ್ಕಳಿಗೆ ಅನ್ಯಾಯ ಆಗಿದೆ, ಹಲವು ಕೇಸ್ಗಳು ಹಾಗೆ ಮುಚ್ಚಿಹೋಗಿವೆ. ಈ ಪ್ರಕರಣ ಕೂಡ ಅವುಗಳಲ್ಲಿ ಒಂದು ಆಗಬಾರದು. ತಪ್ಪಿತಸ್ಥನಿಗೆ ಕಠಿಣ ಶಿಕ್ಷೆ ಆಗಬೇಕು, ಇದಕ್ಕೆ ಪೆಲೀಸರು ಸಹಕರಿಸಿ ನ್ಯಾಯ ಕೊಡಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದರು.

Recent Articles

spot_img

Related Stories

Share via
Copy link