ಕಲಬುರಗಿ:
ಬಿಜೆಪಿ ನಾಯಕರಿಂದ ಗುರುವಾರ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಭೇಟಿ ಹಾಗೂ ಕಲಬುರಗಿ ಜಿಲ್ಲಾಧಿಕಾರಿ ಶರತ್. ಬಿ ಅವರ ವರ್ಗಾವಣೆ ಪ್ರಹಸನ ಕುರಿತು ಬಿಜೆಪಿ ನಾಯಕರಿಗೆ ಅವರದೇ ಧಾಟಿಯಲ್ಲಿ ಪ್ರಿಯಾಂಕ್ ಖರ್ಗೆ ಟ್ವೀಟ್ ಮೂಲಕ ವ್ಯಂಗ್ಯವಾಡಿದ್ದಾರೆ
ತಮ್ಮನ್ನು ಟ್ವಿಟರ್ ಖರ್ಗೆ ಎಂದು ವ್ಯಂಗ್ಯವಾಡಿದ್ದ ಮಾಜಿ ಶಾಸಕ ಮಾಲಿಕಯ್ಯ ಗುತ್ತೇದಾರ ಹಾಗೂ ಬಿಜೆಪಿ ನಾಯಕರಿಗೆ ಶಾಸಕ ಪ್ರಿಯಾಂಕ್ ಖರ್ಗೆ ಅವರು ಅದೇ ದಾಟಿಯಲ್ಲೇ ತಿರುಗೇಟು ನೀಡಿದ್ದಾರೆ. ಕಲಬುರಗಿ ಜಿಲ್ಲಾಧಿಕಾರಿ ವರ್ಗಾವಣೆ ನಂತರ ವ್ಯಕ್ತವಾದ ಸಾರ್ವಜನಿಕರ ಆಕ್ರೋಶ ಹಾಗೂ ನಕಾರಾತ್ಮಕ ಪ್ರತಿಕ್ರಿಯೆಗಳ ನಂತರ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರನ್ನು ಸಮಾಧಾನಪಡಿಸಲು ಬಿಜೆಪಿ ನಾಯಕರು ಬೆಂಗಳೂರಿಗೆ ಧಾವಿಸಿದ್ದಾರೆ ಎಂದಿದ್ದಾರೆ.
ಇನ್ನು, ಜಿಲ್ಲಾಧಿಕಾರಿ ಶರತ್ ಬಿ ಅವರನ್ನು ವರ್ಗಾವಣೆ ಏಕೆ ಮಾಡಲಾಗಿತ್ತು? ಎಂದು ಪ್ರಶ್ನಿಸಿರುವ ಅವರು, ವರ್ಗಾವಣೆಯಲ್ಲಿ ತಮ್ಮದೇನು ಪಾತ್ರವಿಲ್ಲ ಎಂದು ಹೇಳಿಕೊಂಡ ಬಿಜೆಪಿ ನಾಯಕರು ವಿಡಿಯೋ ಬಿಡುಗಡೆ ಮಾಡಿದ್ದು ಯಾಕೆ? ಮುಖ್ಯಮಂತ್ರಿ ಅವರಿಗೆ ತಪ್ಪು ಮಾಹಿತಿ ನೀಡಿದ್ದು ಯಾರು? ಎಂದು ಟ್ವೀಟ್ ಮಾಡಿ ಪ್ರಶ್ನಿಸಿರುವ ಶಾಸಕರು, ಯಾರು ತಮ್ಮನ್ನು ಟ್ವೀಟರ್ ಖರ್ಗೆ ಎಂದು ಕರೆದಿದ್ದರೋ ಅದೇ ಹೆಸರನ್ನೇ ಟ್ವೀಟ್ ಕೊನೆಯಲ್ಲಿ ಪುನಃ ನಮೂದಿಸಿ ಶಾಸಕರು ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ್ದಾರೆ.