ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕಾಯ್ದೆ ವಿರೋಧಿಸಿ ಪ್ರತಿಭಟನೆ

ಹಾವೇರಿ :

    ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾರಿಗೆ ತರುತ್ತಿರುವ ಕೃಷಿ ಮತ್ತು ಎಪಿಎಂಸಿ ಕಾಯ್ದೆ ತಿದ್ದುಪಡಿಯನ್ನು ವಿರೋಧಿಸಿ ರೈತ ಸಂಘ,ಹಸಿರು ಸೇನೆ ವತಿಯಿಂದ ನಗರದ ಸಿದ್ದಪ್ಪ ಹೊಸಮನಿ ವೃತ್ತದಲ್ಲಿ ಪ್ರತಿಭಟನೆ ಮಾಡಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

    ಈ ಕಾಯ್ದೆಗಳು ಜಾರಿಗೆ ಬಂದರೆ ರೈತರು ಇದ್ದ ಜಮೀನನ್ನು ಕಳೆದುಕೊಂಡು ಬೀದಿಗೆ ಬರಬೇಕಾಗುತ್ತದೆ. ಈ ಕಾಯ್ದೆಗಳು ರೈತರ ಪಾಲಿಗೆ ಮಾರಕವಾಗಿವೆ.ಈ ಕಾಯ್ದೆಗಳನ್ನು ಹಿಂದೆ ಪಡೆದುಕೊಳ್ಳಬೇಕೆಂದು ರೈತ ಸಂಘ ಮತ್ತು ಹಸಿರು ಸೇನೆಯ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ ಅವರು ಆಗ್ರಹಿಸಿದರು.

    ವಿದ್ಯುತ್ ವಲಯವನ್ನು ಖಾಸಗೀಕರಣ ಮಾಡಬಾರದು ಇದು ರೈತ ಸಮುದಾಯಕ್ಕೆ ಮಾರಕವಾಗಲಿದ್ದು. ಈ ವಲಯ ಖಾಸಗೀಕರಣವಾದರೆ ರೈತರು ನೀರಾವರಿಯನ್ನೇ ಬಿಡಬೇಕಾಗುತ್ತದೆ ಎಂದರು.ಜಿಲ್ಲೆಯಲ್ಲಿ ಕೋವಿಡ್ ಆಸ್ಪತ್ರೆಗಳಲ್ಲಿ ಈ ಮಾರಕ ಖಾಯಿಲೆಗೆ ಚಿಕಿತ್ಸೆ ನೀಡುವುದಕ್ಕೆ ಬೇಕಾದ ಸೌಲಭ್ಯಗಳು, ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂಧಿಗಳಿದ ಕಾರಣಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಮರಣವನ್ನು ಹೊಂದುತ್ತಿದ್ದಾರೆ ಆದ್ದರಿಂದ ಅಗತ್ಯ ವ್ರೈದ್ಯರು ಮತ್ತು ಅಗತ್ಯ ಔಷಧಿಗಳನ್ನು ಒದಗಿಸುವಂತೆ ಜಿಲ್ಲಾಡಳಿತವನ್ನು ಆಗ್ರಹಿಸಿದರು.
ರೈತರ ಮನವಿಯನ್ನು ಸ್ವೀಕರಿಸಲು ಆಗಮಿಸಿದ್ದ ಅಪರ ಜಿಲ್ಲಾಧಿಕಾರಿ ಎಸ್.ಯೋಗೇಶ್ವರ ಅವರಿಗೆ ಕೆಂಚಳ್ಳೇರ ಅವರು, ಹಿರೇಕೆರೂರ ತಾಲೂಕಿನ ರಟ್ಟಿಹಳ್ಳಿ, ಕೋಡ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರಿಲ್ಲದೆ ಜನತೆಗೆ ಕನಿಷ್ಟ ವೈದ್ಯಕೀಯ ಸೌಲಭ್ಯ ದೊರೆಯದೇ ಪರದಾಡುವಂತಾಗುತ್ತಿದೆ ಆದ್ದರಿಂದ ತಕ್ಷಣದಲ್ಲಿ ಸಿಬ್ಬಂಧಿಗಳನ್ನು ನಿಯೋಜನೆ ಮಾಡುವಂತೆ ಆಗ್ರಹಿಸಿದರು.

   ಹಾವೇರಿ ತಾಲೂಕಿನ ಲಕ್ಷ್ಮಿ ಜಗದೇರ ಎನ್ನುವ ಮಹಿಳೆ ಸರಾಯಿಯನ್ನು ನಿಷೇಧಿಸುವಂತೆ ವಿನಂತಿಸಿಕೊಂಡಳು. ನನ್ನ ಗಂಡ ಪ್ರತಿ ನಿತ್ಯ ಕುಡಿದು ಬರುತ್ತಿದ್ದಾನೆ. ನನಗೆ ನಾಲ್ಕು ಜನ ಮಕ್ಕಳಿದ್ದ ಜೀವನ ನಡೆಸುವುದು ಬಹಳ ಕಷ್ಟವಾಗುತ್ತಿದೆ ಎಂದು ಅಳುತ್ತ ತನ್ನ ನೋವನ್ನು ಹೇಳಿಕೊಂಡರು.

   ಪ್ರತಿಭಟನೆಗೆ ಆರಂಭದಲ್ಲಿ ಬೆಂಬಲ ಸೂಚಿಸಿದ ಡಿಎಸ್‍ಎಸ್ ರಾಜ್ಯ ಸಮಿತಿ ಸದಸ್ಯ ಉಡಚಪ್ಪ ಮಾಳಗಿ ರೈತರ ಪರವಾಗಿ ಸದಾ ನಿಮ್ಮೊಂದಿಗೆ ಇರಲಿದ್ದೇವೆ ಎಂದರು.ಸಭೆಯಲ್ಲಿ ವಿವಿಧ ಮುಖಂಡರು ಮಾತನಾಡಿದರು.ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಮಹ್ಮದಗೌಸ್ ಪಾಟೀಲ್,ಅಡಿವೆಪ್ಪ ಆಲದಕಟ್ಟಿ, ಶಿವಬಸಪ್ಪ ಗೋವಿ, ಮಂಜುಳಾ ಅಕ್ಕಿ, ರುದ್ರಗೌಡ ಕಾಡನಗೌಡ, ಮರಿಗೌಡ ಪಾಟೀಲ, ಸುರೇಶ ಚಲವಾದಿ,ಫಕ್ಕಿರೇಶ ಕಾಳಿ,ದಿಳ್ಳೆಪ್ಪ ಮಣ್ಣೂರ, ಪ್ರಭುಗೌಡ ಪ್ಯಾಟಿ, ಕರಬಸಪ್ಪ ಅಗಸಿಬಾಗಿಲ, ಫಕ್ಕೀರಗೌಡ ಗಾಜೀಗೌಡ್ರ.ನವೀನ ಹುಲ್ಲತ್ತಿ, ನಾಗರಾಜ ಮಳೂರ,ಕಾಮಾಕ್ಷಿ ರೇವಣಕರ ಸೇರಿದಂತೆ ನೂರಾರು ರೈತರು ಪಾಲ್ಗೊಂಡಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link