ಮಾರ್ಕೋನಹಳ್ಳಿ ಗ್ರಾ.ಪಂ.ಯಲ್ಲಿ ಪಿಡಿಒ ಅಧ್ಯಕ್ಷರ ಅವ್ಯವಹಾರ ಖಂಡಿಸಿ ಪ್ರತಿಭಟನೆ

ಕುಣಿಗಲ್

     ತಾಲೂಕಿನ ಮಾರ್ಕೋನಹಳ್ಳಿ ಗ್ರಾ.ಪಂ ಅಧ್ಯಕ್ಷ ಹಾಗೂ ಪಿಡಿಒ ವಿರುದ್ದ ಕ್ರಮಕ್ಕೆ ಒತ್ತಾಯಿಸಿ ಗುರುವಾರ ಸದಸ್ಯರು ಹಾಗೂ ಗ್ರಾಮಸ್ಥರು ಗ್ರಾ.ಪಂ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

     ಇಲ್ಲಿ ನಡೆದಿರುವ ಅವ್ಯವಹಾರ ನೋಡಿದರೆ ಆಶ್ಚರ್ಯವಾಗುತ್ತದೆ ಅಧಿಕಾರಿಯೊಬ್ಬನನ್ನು ಬುಟ್ಟಿಗಾಕಿಕೊಂಡು ಇಡೀ ಪಂಚಾಯಿತಿಯ 14ನೇ ಹಣಕಾಸು ಯೋಜನೆಯ ಅನುಧಾನ ಸೇರಿದಂತೆ ವಿವಿಧ ಯೋಜನೆಯಡಿ ಅವ್ಯವಹಾರ ನಡೆಸಿ ಲಕ್ಷಾಂತರ ರೂ ನುಂಗಿ ನೀರುಕುಡಿದಿದ್ದಾರೆ ಎಂದು ಆರೋಪಿಸಿದ ಮುಖಂಡರಾದ ಮೂಡಲಗಿರಯ್ಯ, ನಾಗರಾಜು ಅವರ ನೇತೃತ್ವದಲ್ಲಿ ಗ್ರಾ.ಪಂ ಸದಸ್ಯರುಗಳಾದ ಗಿರೀಶ್, ಜಗದೀಶ್, ತಿಮ್ಮೇಗೌಡ, ಕಮಲಮ್ಮ, ವೆಂಕಟಲಕ್ಷ್ಮಮ್ಮ, ಸುಶೀಲಮ್ಮ, ಲಕ್ಷ್ಮೀ ಹಾಗೂ ಲಕ್ಷ್ಮಮ್ಮ ಸೇರಿದಂತೆ ನೂರಾರು ಗ್ರಾಮಸ್ಥರು ಗ್ರಾ.ಪಂ ಮುಂದೆ ಧರಣಿ ಕುಳಿತು ಗ್ರಾ.ಪಂ ಅಧ್ಯಕ್ಷ ಟಿ.ನಾಗರಾಜು ಹಾಗೂ ಪಿಡಿಓ ಜಾನ್ ವಿರುದ್ದ ಧಿಕ್ಕಾರ ಕೂಗಿದರು.
ಈ ವೇಳೆ ಅಧ್ಯಕ್ಷ ಟಿ.ನಾಗರಾಜು ಅವರ ಸೋದರ ವಿಜಯಕುಮಾರ್ ಮತ್ತು ಅಣ್ಣ ಕಾರೇಗೌಡ ಪ್ರತಿಭಟನಾಕಾರರ ವಿರುದ್ದ ತಿರುಗಿ ಬಿದ್ದು ಶಾಮೀಯಾನ ಹಾಗೂ ಮೈಕ್ ತೆರವು ಮಾಡಲು ಮುಂದಾಗಿ ದಬ್ಬಾಳಿಕೆ ನಡೆಸಿದರು.

    ಪ್ರತಿಭಟನಕಾರರು ಹಾಗೂ ಅಧ್ಯಕ್ಷನ ಸೋದರರ ನಡುವೆ ಮಾತಿನ ಚಕಮಕಿ ನಡೆದು ಉದ್ರಿಕ್ತ ವಾತಾವರಣ ಉಂಟಾಯಿತು. ತಕ್ಷಣ ಪಿಎಸ್‍ಐ ಮಂಜು ಹಾಗೂ ಸಿಬ್ಬಂದಿ ಮಧ್ಯ ಪ್ರವೇಶದಿಂದ ಪರಿಸ್ಥಿತಿ ತಣ್ಣಗಾಗಿತು.ಜಿ.ಪಂ ಮಾಜಿ ಅಧ್ಯಕ್ಷ ಡಾ.ರವಿ.ಡಿ.ನಾಗರಾಜಯ್ಯ ಸ್ಥಳಕ್ಕೆ ಅಗಮಿಸಿ ಪ್ರತಿಭಟನಕಾರರ ಪರವಾಗಿ ಬೆಂಬಲಕ್ಕೆ ನಿಂತು ಸಾಥ್ ನೀಡಿ ಆಗಿರುವ ಅನ್ಯಯವನ್ನು ಖಂಡಿಸದೇ ನೋಡಿಕೂರಬೇಕೆ ನೀವು ಮಾಡುವ ಮೋಸ ವಂಚನೆಯನ್ನು ಸಹಿಸಿಕೊಳ್ಳಬೇಕೆ ನಿಮ್ಮಂತೆಯೇ ಇವರು ಜನಪ್ರತಿನಿಧಿಗಳು ಇವರು ಆಯ್ಕೆಯಾಗಿ ಬಂದಿದ್ದಾರೆ ತಪ್ಪು ಮಾಡಿದವರ ಅಧಿಕಾರಿಯ ವಿರುದ್ದ ಕೂಡಲೇ ಮೇಲಾಧಿಕಾರಿಗಳು ಕ್ರಮವಹಿಸಲಿ ಎಂದು ಎಚ್ಚರಿಕೆ ನೀಡಿದರು.

    ಇಒ ಸ್ಥಳಕ್ಕೆ ಅಗಮಿಸಿ ಪ್ರತಿಭಟನಕಾರ ಸಮಸ್ಯೆ ಅಲಿಸಿದರು. ಶೌಚಾಲಯ ನಿರ್ಮಾಣ ಮಾಡಿ ಎರಡು ವರ್ಷವಾಗಿದೆ ಇನ್ನೂ ಹಣ ಕೊಟ್ಟಿಲ್ಲ ಸ್ವಾಮಿ ಇದಕ್ಕಾಗಿ ನನ್ನಿಂದ ಬಿಲ್‍ಕೆಲ್ಟರ್ 300ರೂ ಲಂಚ ಪಡೆದುಕೊಂಡಿದ್ದಾರೆ ಎಂದು ಹನುಮಾಪುರದ ಜಯಮ್ಮ ದೂರು ಹೇಳಿದರು. ಬನ್ನಿ ಸ್ವಾಮೀ ನಮ್ಮ ಮನೆಯ ಎದರಿನ ರಸ್ತೆಯಲ್ಲಿ ತೀರುಗಾಡಲು ಆಗುವುದಿಲ್ಲ ಕೊಳಚೆ ನೀರು ತುಂಬಿಕೊಂಡಿದೆ ಮನೆ ನಿರ್ಮಾಣಕ್ಕೆ ಎರಡು ಹಂತದಲ್ಲಿ ಹಣ ನೀಡಿ ಮೂರನೇ ಹಂತದ ಹಣ ಬಿಡುಗಡೆಗೆ ಸತಾಯಿಸುತ್ತಿದ್ದಾರೆ ಎಂದು ದೂರಿದರು.

     20 ತಿಂಗಳಿಂದ ಗ್ರಾ.ಪಂ ಸಿಬ್ಬಂದಿಗೆ ವೇತನ ನೀಡಿಲ್ಲ ಇದಕ್ಕಾಗಿ ಮೀಸಲಿದ್ದ 1ಲಕ್ಷರೂ ಹಣವನ್ನು ಅಧ್ಯಕ್ಷ ಮತ್ತು ಪಿಡಿಒ ಡ್ರಾ ಮಾಡಿಕೊಂಡು ಜೇಬಿಗಿಳಿಸಿಕೊಂಡಿದ್ದಾರೆ. ಕೆಳಿದರೆ ಇನ್ನೂ ಹಣ ಬಂದಿಲ್ಲ ಎಂದು ಸಬೂಬು ಹೇಳುತ್ತಾರೆ ಎಂದು ಪ್ರತಿಭಟನಕಾರರು ಆರೋಪಿಸಿದರು.

    14ನೇ ಹಣಕಾಸು ಯೋಜನೆ ಹಣವನ್ನು ಸಮಾನ್ಯ ಸಭೆ ಗಮನಕ್ಕೆ ತಾರದೇ 25.32ಲಕ್ಷರೂ ಹಣವನ್ನು ಕಾನೂನು ಬಾಹೀರವಾಗಿ ಲಪಟಾಯಿಸಿದ್ದಾರೆ ಎಂದು ಆರೋಪಿಸಿದರು. ಈ ವೇಳೆ ಅಧ್ಯಕ್ಷ ಟಿ.ನಾಗರಾಜು ಅವರ ತಮ್ಮ ವಿಜಯಕುಮಾರ್ ಈ ಹಿಂದೆ 5ಕೋಟಿ ಅವ್ಯವಹಾರ ನಡೆದಿದೆ. ಅಲ್ಲದೇ ಸದಸ್ಯರೇ ನರೇಗಾ ಯೋಜನೆಯಡಿ ಕಾಮಗಾರಿ ಮಾಡಿ ಲಕ್ಷಾಂತರ ಹಣ ಡ್ರಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ದೂರು ಸಲ್ಲಿಸಿದರು. ಇದು ಈ ಹಿಂದೆ ನಡೆದಿರುವ ಅವ್ಯವಹಾರದ ಬಗ್ಗೆ ನನಗೆ ಗೊತ್ತಿಲ್ಲ ನನ್ನ ಅವಧಿಯಲ್ಲಿ ನಡೆದಿರುವ ಅವ್ಯಹಾರದ ಬಗ್ಗೆ ನಾನು ತನಿಖಾ ತಂಡ ರಚಿಸಿ ತನಿಖಾ ವರದಿ ಸಿದ್ದಪಡಿಸಿ ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮಕ್ಕೆ ಸರಕಾರಕ್ಕೆ ವರದಿ ಸಲ್ಲಿಸುವುದಾಗಿ ಇಒ ಶಿವರಾಜಯ್ಯ ಭರವಸೆ ನೀಡಿದ ನಂತರ ಪ್ರತಿಭಟನಕಾರರು ಪ್ರತಿಭಟನೆ ಕೈಬಿಟ್ಟು ತೆರಳಿದರು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link