ಅಂಗವಿಕಲರ ಒಕ್ಕೂಟದಿಂದ ಪ್ರತಿಭಟನೆ ಮತ್ತು ಸರ್ಕಾರಕ್ಕೆ ಮನವಿ

ಹಗರಿಬೊಮ್ಮನಹಳ್ಳಿ 

      ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬಜೆಟ್ ಮಂಡನೆಯಲ್ಲಿ ಅಂಗವಿಕರನ್ನು ಸಂಪೂರ್ಣವಾಗಿ ಕಡೆಗಣಿಸಿವೆ ಎಂದು ಕರ್ನಾಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದಿಂದ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಶನಿವಾರ ಮನವಿಪತ್ರ ಸಲ್ಲಿಸಲಾಯಿತು.

     ತಾಲೂಕು ಕಚೇರಿಯ ಮುಂದೆ ಸೇರಿದ ಪ್ರತಿಭಟನಾಕಾರರನ್ನುದ್ದೇಶಿಸಿ ಒಕ್ಕೂಟದ ಜಿಲ್ಲಾ ಸಂಚಾಲಕರಾದ ಹುಸ್ಮಾನ್ ಭಾಷ ಮಾತನಾಡಿ, 2019-20ನೇ ಸಾಲಿನ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಎನ್.ಡಿ.ಎ ಹಾಗೂ ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರಗಳ ರಾಜ್ಯ ಸರ್ಕಾರಗಳು ಆಡಳಿತಕ್ಕೂ ಮುನ್ನ ಅಂಗವಿಕಲರಿಗೆ ಆಶಾಗೋಪುರಗಳನ್ನೆ ಕಟ್ಟಿದರು. ಆದರೆ, ಬಜೆಟ್ ಮಂಡನೆಯಲ್ಲಿ ಅದೇ ಅಂಗವಿಕಲರನ್ನು ಸಂಪೂರ್ಣ ಕಡೆಗಣಿಸಿದ್ದು ಅಕ್ಷಮ್ಯ ಅಪರಾದವೇ ಸರಿ. ಅಂಗವಿಕರಲು ಸ್ವಾಭಿಮಾನದಿಂದ ಬದುಕು ಸಾಧಿಸಬೇಕು ಎನ್ನುವವರಿಗೆ ಸೌಲಭ್ಯಗಳನ್ನು ನೀಡದೆ ವಂಚಿಸಿವೆ ಎಂದು ಆರೋಪಿಸಿದರು.

     ಮುಂದುವರೆದು ಮಾತನಾಡಿ, ಪ್ರತಿ ಬಜೆಟ್‍ನಲ್ಲಿ ಅಂಗವಿಕಲರಿಗೆ ಶೇ.5ರಷ್ಟು ಮೀಸಲಿರಿಸಬೇಕು, ಅಲ್ಲದೆ ಆಡಳಿತ ನಡೆಸುತ್ತಿರುವ ಪಕ್ಷಗಳು ನೀಡಿದ ಭರವಸೆಗಳನ್ನು ಕೂಡಲೆ ಈಡೇರಿಸಬೇಕು ಎಂದು ಕೋರಿದರು.ನಂತರ ತಹಸೀಲ್ದಾರ್ ವಿಜಯಕುಮಾರ್‍ಗೆ ಮನವಿಪತ್ರ ಸಲ್ಲಿಸಿದರು.

       ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ಜವಳಿ ಕೊಟ್ರೇಶಪ್ಪ, ಕಾರ್ಯದರ್ಶಿ ಡಿ.ಬಸವರಾಜ್, ಚಾಂದ್‍ಬೀ, ಗುರುರಾಜ್, ಹುಲಿಗೆಮ್ಮ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link