ಅಂತ್ಯಸಂಸ್ಕಾರಕ್ಕೆ ಹಣ ವಿಳಂಬ;ಪ್ರತಿಭಟನೆ

ಚಿತ್ರದುರ್ಗ:

        ಕಡುಬಡವರ ಕುಟುಂಬದಲ್ಲಿ ಯಾರಾದರೂ ಮೃತಪಟ್ಟರೆ ಅಂತ್ಯಸಂಸ್ಕಾರಕ್ಕಾಗಿ ಸರ್ಕಾರದಿಂದ ನೀಡಲಾಗುವ ಐದು ಸಾವಿರ ರೂ.ಗಳನ್ನು ವಾರಸುದಾರರಿಗೆ ತಲುಪಿಸುವಲ್ಲಿ ತಡವಾಗುತ್ತಿರುವುದನ್ನು ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಸಿರುಸೇನೆ ಹುಚ್ಚವ್ವನಹಳ್ಳಿ ಬಣದವರು ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿ ಅಪರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಈಗಾಗಲೆ ಮೃತಪಟ್ಟಿರುವ ಬಡ ಕುಟುಂಬದವರು ಅಂತ್ಯಸಂಸ್ಕಾರದ ಹಣ ಸಿಗದೆ ತಾಲೂಕು ಕಚೇರಿಗೆ ದಿನನಿತ್ಯವೂ ಅಲೆದಾಡುವಂತಾಗಿದೆ . 

         ಶವಸಂಸ್ಕಾರಕ್ಕಾಗಿ ಹಣವಿಲ್ಲದೆ ಪರದಾಡಬಾರದು ಎನ್ನುವ ಕಾರಣಕ್ಕಾಗಿ ಅಂತ್ಯಸಂಸ್ಕಾರದ ದಿನದಂದೆ ಮೃತರ ವಾರಸುದಾರರಿಗೆ ಐದು ಸಾವಿರ ರೂ.ಗಳನ್ನು ತಹಶೀಲ್ದಾರ್ ಕಚೇರಿಯಿಂದ ನೀಡಬೇಕೆಂದು ರಾಜ್ಯ ಸರ್ಕಾರ ಆದೇಶಿಸಿದ್ದರೂ ಅಧಿಕಾರಿಗಳು ಇಲ್ಲ ಸಲ್ಲದ ಕಾರಣ ಹೇಳಿ ಅಂತ್ಯಸಂಸ್ಕಾರದ ಹಣ ನೀಡಲು ಮೀನಾಮೇಷ ಎಣಿಸುತ್ತಿದ್ದಾರೆ ಎಂದು ಆಪಾದಿಸಿದ ರೈತರು ಅಂತ್ಯಸಂಸ್ಕಾರದ ಹಣ ಪಡೆಯಲು ಗ್ರಾಮೀಣ ಪ್ರದೇಶಗಳಿಂದ ತಾಲೂಕು ಕಚೇರಿಗೆ ಬರಬೇಕಾದರೆ ನೂರಾರು ರೂ.ಗಳನ್ನು ಖರ್ಚು ಮಾಡಬೇಕಾಗುತ್ತದೆ.

          ಶವಸಂಸ್ಕಾರಕ್ಕೆ ನೀಡದಿದ್ದರೂ ಪರವಾಗಿಲ್ಲ. ತಿಥಿ ಮಾಡುವುದರೊಳಗಾಗಿಯಾದರೂ ಮೃತ ಕುಟುಂಬಕ್ಕೆ ಹಣ ತಲುಪಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ಮಾಡಲಾಗುವುದೆಂದು ರೈತ ಸಂಘದ ಜಿಲ್ಲಾಧ್ಯಕ್ಷ ಈ.ಎನ್.ಲಕ್ಷ್ಮಿಕಾಂತ ಸರ್ಕಾರಕ್ಕೆ ಗಡುವು ನೀಡಿದರು.

          ರೈತ ಮುಖಂಡರುಗಳಾದ ಎಸ್.ನಾಗರಾಜ್, ಹೆಚ್.ಅಂಜಿನಪ್ಪ, ಪಾಪಣ್ಣ, ಬಾಬುರೆಡ್ಡಿ, ಶಿವಮೂರ್ತಿ, ಡಿ.ಬಿ.ಮಂಜುನಾಥರೆಡ್ಡಿ, ಪ್ರೇಮಕುಮಾರ್, ಜಗನ್ನಾಥರೆಡ್ಡಿ, ಚಂದ್ರಣ್ಣ, ಸತೀಶ್, ಎಂ.ಟಿ.ಅಶೋಕ್‍ಕುಮಾರ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap