ಪತ್ರಕರ್ತರೊಬ್ಬರ ಮೇಲೆ ಪಿಎಸ್ ಐ ಹಲ್ಲೆ ಖಂಡಿಸಿ ಸೂಕ್ತ ಕ್ರಮಕ್ಕೆ ಆಗ್ರಹ

ಜಗಳೂರು :

         ವರದಿ ಮಾಡಲು ಪೋಲಿಸ್ ಠಾಣೆಗೆ ತೆರಳಿದ್ದ ಪತ್ರಕರ್ತರೊಬ್ಬರ ಮೇಲೆ ಪಿಎಸ್ ಐ ಇಮ್ರಾನ್ ಬೇಗ್ ಮೊಬೆಲ್ ಕಸಿದುಕೊಂಡು, ಪೋಲೀಸ್ ಠಾಣೆಯಿಂದ ಹೊರದಬ್ಬಿ ಹಲ್ಲೆಗೆ ಯತ್ನಿಸಿದ್ದನ್ನು ಖಂಡಿಸಿ ಜಗಳೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಸೂಕ್ತ ಕ್ರಮಕ್ಕೆ ಆಗ್ರಹಿಸಿ ತಹಶೀಲ್ದಾರ್ ಗೆ ಮನವಿ ಸಲ್ಲಿಸಿದರು.

        ಈವೇಳೆ ಕಾರ್ಯ ನಿರತ ಪರ್ತಕರ್ತರ ಸಂಘದ ತಾಲೂಕು ಜಿ.ಎಸ್.ಚಿದಾನಂದ ಮಾತನಾಡಿ ಖಾಸಗಿ ಬಸ್ ಮಾಲೀಕರು ಹಾಗೂ ಏಜೆಂಟರ್‍ಗಳು ಠಾಣೆಗೆ ಧಾವಿಸಿ ಬಂದಾಗ ಪೊಲೀಸ್ ಸಬ್‍ಇನ್ಸ್‍ಪೆಕ್ಟರ್ ಎದುರಿಗೆ ಮಾತಿನ ಚಕಮಕಿ ನಡೆಯುತ್ತಿತ್ತು. ಆ ಸಂದರ್ಭದಲ್ಲಿ ಕನ್ನಡ ಸಂಪಿಗೆ ಹಾಗೂ ಕ್ರಾಂತಿದೀಪ ತಾ|| ವರದಿಗಾರ ಹಾಗೂ ಮಾನವ ಬಂಧುತ್ವ ವೇದಿಕೆ ಸಂಚಾಲಕ ಧನ್ಯಕುಮಾರ್ ಪೊಲೀಸ್ ಠಾಣೆಯ ಗಲಾಟೆ ನಡೆಯುತ್ತಿರುವುದನ್ನು ಕಂಡು ಠಾಣೆಯ ಒಳಗಡೆ ಹೋದಾಗ ಘಟನಾ ಸ್ಥಳದ ಭಾವಚಿತ್ರ ತೆಗೆಯಲು ಹೋದಾಗ ಜಗಳೂರು ಪೊಲೀಸ್ ಠಾಣೆಯ ಸಬ್‍ಇನ್‍ಸ್ಪೆಕ್ಟರ್ ಮಾದ್ಯಮ ವ್ಯಕ್ತಿಯ ಮೇಲೆ ಹಲ್ಲೆ ಯತ್ನ ನಡೆಸುವ ಮೂಲಕ ದೌರ್ಜನ್ಯ ನಡೆಸಿ, ಪತ್ರಿಕಾ ಅಭಿವ್ಯಕ್ತ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನ ಮಾಡಿದ್ದಾರೆ.

        ಜಗಳೂರು ಪೊಲೀಸ್‍ಠಾಣೆಯ ಪಿಎಸ್‍ಐರವರು ಮಾಧ್ಯಮ ಪ್ರತಿನಿಧಿಗಳ ಮೇಲೆಯೇ ಈರೀತಿಯಾಗಿ ಹಲ್ಲೆ ಮಾಡುವುದು ಸುದ್ದಿ ನೀಡದೇ ಇರುವುದು, ಸಾರ್ವಜನಿಕರ ಎದುರೇ ಅವಮಾನಿಸುವುದು ಪತ್ರರ್ಕರನ್ನ ಹೀನಾಯವಾಗಿ ಕಾಣುವುದು ಜೊತೆಗೆ ಅವರನ್ನು ಅವಮಾನಿಸುವುದನ್ನ ಖಂಡಿಸುತ್ತೇವೆ ಎಂದು ಅವರು ತಿಳಿಸಿದರು. ಪ್ರಸ್ತುತ ದಿನ ಮಾನಗಳಲ್ಲಿ ಪತ್ರಿಕೆ ಸಂಪಾದಕರು, ಪತ್ರಕರ್ತರು ನಿರ್ಭಯವಾಗಿ ಪತ್ರಿಕಾ ವರದಿ ಕರ್ತವ್ಯ ನಿರ್ವಹಿಸಲು ತುಂಬಾ ಕಷ್ಟಕರವಾಗುತ್ತಿದೆ.

         ಇಂತಹ ಸಂದರ್ಭದಲ್ಲಿ ಜಗಳೂರು ತಾಲ್ಲೂಕಿನ ಪತ್ರಿಕಾ ಪ್ರತಿನಿಧಿಗಳಿಗೆ ಜಗಳೂರು ಪಿಎಸ್‍ಐ ಇಮ್ರಾನ್‍ಬೇಗ್‍ರವರಿಂದ ನ್ಯಾಯ ಸಿಗುವುದಿಲ್ಲ. ಆದ್ದರಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಪೂರ್ವವಲಯ ಐಜಿಪಿ ಬಳ್ಳಾರಿ ವೃತ್ತದವರು ಜಗಳೂರು ಪೊಲೀಸ್ ವೃತ್ತ ನಿರೀಕ್ಷಕರು ಹಾಗೂ ಹರಪನಹಳ್ಳಿ ಡಿವೈಎಸ್‍ಪಿಯವರು ಇದೊಂದು ವಿಶೇಷ ಪ್ರಕರಣವೆಂದು ಪರಿಗಣಿಸಿ ಇಲ್ಲಿನ ಪತ್ರಕರ್ತರಿಗೆ ಸೂಕ್ತ ರಕ್ಷಣೆ ನೀಡಬೇಕೆಂದು ಒತ್ತಾಯಿಸಿದರು.

         ಪಿಎಸ್‍ಐ ಇಮ್ರಾನ್‍ಬೇಗ್ ಪತ್ರಕರ್ತ ಧನ್ಯಕುಮಾರ್‍ನ ಕೈಯಲ್ಲಿದ್ದ ಆ್ಯಪ್ ಮೊಬೈಲ್‍ನ್ನು ಕಿತ್ತುಕೊಂಡು ಆತನ ಕೊರಳಪಟ್ಟಿ ಹಿಡಿದು ಠಾಣೆಯಿಂದ ಅಮಾನವೀಯವಾಗಿ ದೂಡುತ್ತಾ ನಿನ್ನಲ್ಲಿ ಪತ್ರಿಕೆಯ ಐಡಿಕಾರ್ಡ್ ತೋರಿಸು, ಪತ್ರಿಕೆಯ ಅನುಮತಿ ಪತ್ರ ಇಲ್ಲದೇ ಪೊಲೀಸ್ ಠಾಣೆಗೆ ಬರುತ್ತೀರಾ? ಎಂದು ಕೂಗಾಡುತ್ತಾ ಕೊರಳಪಟ್ಟಿ ಹಿಡಿದು ಹಲ್ಲೆ ಯತ್ನ ನಡೆಸಿದರು. ಅಲ್ಲದೇ ಕತ್ತು ಹಿಡಿದು ಪತ್ರಕರ್ತ ಧನ್ಯಕುಮಾರ್ ಅವರನ್ನು ಠಾಣೆಯಿಂದ ಹೊರದಪ್ಪಿ ಠಾಣೆಯ ಮುಂಭಾಗದಲ್ಲಿದ್ದ ಸಾರ್ವಜನಿಕರ ಎದುರೇ ಅವಾಚ್ಯ ಶಬ್ದಗಳನ್ನು ಬಳಸಿ ಅವಮಾನಿಸಿದ್ದು, ತುಂಬಾ ಖಂಡನೀಯ ಎಂದರು.

         ಜಿಲ್ಲಾ ಪರ್ತಕರ್ತರ ಸಂಘದ ಜಿಲ್ಲಾಧ್ಯಕ್ಷ ಅಣಬೂರು ಕೋಟ್ರೇಶ್ ಮಾತನಾಡಿ ಇತ್ತಿಚ್ಚಿನ ದಿನಗಳಲ್ಲಿ ಪರ್ತಕರ್ತರ ಮೇಲೆ ಹಲ್ಲೆ ದೌರ್ಜನ್ಯ ನಡೆಯುತ್ತಿರುವುದು ವಿಷಾಧಿನಿಯ ಸಂಗತಿಯಾಗಿದೆ ರಕ್ಷಣೆ ಕೊಡ ಬೇಕಾದವರೆ ಈರಿತೀ ವರ್ತಿಸಿದರೆ ಸಾರ್ವಜನಿಕರ ಗತಿಏನು ಇನ್ನು ಮುಂದಾದರು ಇಂತ ಘಟನೆಗಳು ಮರುಕಳಿಸಿದಂತೆ ಸಂಬಂಧ ಪಟ್ಟ ಅಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಹೇಳಿದರು.

         ಈ ಸಂಧರ್ಭದಲ್ಲಿ ಪರ್ತಕರ್ತರಾದ ಬಿ.ಪಿ.ಸುಭಾನ್, ಡಿ, ಶ್ರೀನಿವಾಸ್, ಸಿ.ಬಸವರಾಜು, ಎಮ್.ಸಿ.ಬಸವರಾಜ್ ಎಮ್.ರಾಜಪ್ಪ, ಓ.ಮಂಜಣ್ಣ , ಧನ್ಯಕುಮಾರ್ ,ರವಿಕುಮಾರ , ಹೆಚ್.ಆರ್. ಬಸವರಾಜ್, ಜಗಧೀಶ್ , ಬಾಬು, ಮಾರುತಿ, ರಖಿಬ್, ಮಾಹಲಿಂಗಪ್ಪ , ತಿಪ್ಪೇಸ್ವಾಮಿ, ಬಸವರಾಜು, ಮಾಲಿಂಗ, ವಿವಿಧ ಸಂಘಟನೆಯ ಮುಖಂಡರುಗಳಾದ ನಾಗಲಿಂಗಪ್ಪ, ಓಬಳೇಶ್ ಸೇರಿದಂತೆ , ಎಸ್‍ಎಫ್‍ಐ ಹಾಗೂ ಜಿಲ್ಲಾ ಮುಖಂಡ ಹಾಗೂ ವಕೀಲರಾದ ಆರ್.ಓಬಳೇಶ್, ಎಸ್‍ಎಫ್‍ಐ ಜಿಲ್ಲಾಧ್ಯಕ್ಷ ಮಹಾಲಿಂಗಪ್ಪ ಸೇರಿದಂತೆ ಸುಮಾರು 30ಕ್ಕೂ ಹೆಚ್ಚು ಮಂದಿ ಪ್ರತಿಭಟನೆಯಲ್ಲಿ ಪಾಲ್ಗೊಂಡು ಸೂಕ್ತ ರಕ್ಷಣೆಗಾಗಿ ಒತ್ತಾಯಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

Recent Articles

spot_img

Related Stories

Share via
Copy link