ಹರಪ್ಪನಹಳ್ಳಿ: ಜಿಲ್ಲಾ ಕೇಂದ್ರವನ್ನಾಗಿ ಘೋಷಿಸಲು ಆಗ್ರಹ

ಹರಪನಹಳ್ಳಿ:

    ಜಿಲ್ಲಾ ಕೇಂದ್ರವಾಗಿ ಹರಪನಹಳ್ಳಿಯನ್ನು ಘೋಷಣೆ ಮಾಡುವಂತೆ ಆಗ್ರಹಿಸಿ ಗುರುವಾರ ಜಿಲ್ಲಾ ಹೋರಾಟ ಸಮಿತಿ ನೇತೃತ್ವದಲ್ಲಿ ಐ.ಬಿ.ವೃತ್ತದ ಬಳಿ ಸಾಂಕೇತಿಕವಾಗಿ ರಾಜ್ಯ ಹೆದ್ದಾರಿ ರಸ್ತೆ ತಡೆಯನ್ನು ನಡೆಸಿದರು.

    ಪ್ರಾದೇಶಿಕ ಮತ್ತು ಸಾಮಾಜಿಕ ನ್ಯಾಯಗಳಿಗೆ ಪ್ರಥಮ ಪ್ರಾಶಸ್ತ್ಯಗೆ ಆದ್ಯತೆ ಅನ್ವಯ ಹರಪನಹಳ್ಳಿಯನ್ನು ನೂತನ ಜಿಲ್ಲೆಯಾಗಿ ಘೋಷಣೆಯಾಗಬೇಕು ಇದು ನಮ್ಮೆಲ್ಲರ ಹಕ್ಕು ಮತ್ತು ಒತ್ತಾಯವಾಗಿದೆ.

    ಬಳ್ಳಾರಿಯಿಂದ ಹರಪನಹಳ್ಳಿ ದೂರವಾಗಲಿದ್ದು, 25-30ಕಿ.ಮೀ.ವ್ಯಾಪ್ತಿಯೊಳಗಿನ ಹಡಗಲಿ, ಹಗರಿಬೊಮ್ಮನಹಳ್ಳಿ, ಕೊಟ್ಟೂರು, ಕೂಡ್ಲಿಗಿ ತಾಲೂಕು ಒಳಗೊಂಡು ಹರಪನಹಳ್ಳಿಯನ್ನು ನೂತನ ಜಿಲ್ಲೆಯನ್ನಾಗಿ ಘೋಷಣೆ ಮಾಡುವಂತೆ ಪ್ರತಿಭಟನಾ ನಿರತರು ಆಗ್ರಹಿಸಿದರು.

    ಕೇವಲ ರಾಜಕೀಯ ಲಾಭ-ನಷ್ಟಗಳ ಲೆಕ್ಕಾಚಾರಗಳಿಗೆ ಸೀಮಿತಗೊಳಿಸುವ ಸಂವಿಧಾನ ವಿರೋಧಿಗೆ ಮನ್ನಣೆ ನೀಡಿದ್ದಲ್ಲಿ ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ರಸ್ತೆ ತಡೆ, ಆಘೋಷಿತ ಬಂದ್‍ನಂತಹ ಉಗ್ರ ಪ್ರತಿಭಟನೆಗೆ ಇಳಿಯಬೇಕಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಸಿದರು.ಪ್ರತಿಭಟನಾ ಸ್ಥಳಕ್ಕೆ ಶಿರಸ್ತೆದಾರರು ಆಗಮಿಸಿ ಮನವಿ ಸ್ವೀಕರಿಸಿದರು.

    ಈ ಸಂದರ್ಭದಲ್ಲಿ ಜಿಲ್ಲಾ ಹೋರಾಟ ಸಮಿತಿ ಸಂಚಾಲಕ ಬಸವರಾಜ ಶೃಂಗಾರತೋಟ, ಮುಖಂಡರಾದ ಹೊಸಹಳ್ಳಿ ಮಲ್ಲೇಶ್, ಹೆಚ್.ವೆಂಕಟೇಶ್, ಗುಡಿಹಳ್ಳಿ ಹಾಲೇಶ್, ನಿಚ್ಚವ್ವನಹಳ್ಳಿ ಭೀಮಪ್ಪ, ಮಾಂತೇಶ್, ದ್ವಾರಕೇಶ್, ಶಿವಕುಮಾರ, ಕಬ್ಬಳ್ಳಿ ಮೈಲಪ್ಪ, ತಿರುಪತಿ, ಮೇಡ್ಲೇರಿ ನಾಗರಾಜ, ಇತರರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link