ಪಿ.ಯು.ಸಿ ಪ್ರವೇಶ ಪಡೆಯಲು ವಿದ್ಯಾರ್ಥಿಗಳ ನೂಕು ನುಗ್ಗಲು.

ಕೊಟ್ಟೂರು

    ಸುಮಾರು ವರ್ಷಗಳಿಂದ ಕೊಟ್ಟೂರಿನಿಂದ ದೂರದ ಧಾರವಾಡ, ದಾವಣಗೆರೆ, ಮೂಡಬಿದರೆ ಕಡೆಗೆ ಮಕ್ಕಳು ಪಿ.ಯು.ಸಿ. ವಿದ್ಯಾಭ್ಯಾಸಕ್ಕಾಗಿ ಹೋಗುತ್ತಿದ್ದರು. ಆದರೆ ಈ ವರ್ಷದ ವಿಶೇಷತೆಯೆಂದರೆ ಆ ಭಾಗದ ಕಡೆಯಿಂದ ಪಿ.ಯು.ಸಿ. ವಿಜ್ಞಾನ, ವಾಣಿಜ್ಯ, ಕಲಾ, ಶಿಕ್ಷಣ ವಿದ್ಯಾಭ್ಯಾಸಕ್ಕಾಗಿ ಕೊಟ್ಟೂರಿನ ಇಂದು ಕಾಲೇಜಿನ ಕಡೆ ಬರುತ್ತಿರುವುದು ಕೊಟ್ಟೂರಿಗೆ ಹೆಮ್ಮೆಯ ವಿಷಯವಾಗಿದೆ.

      ವಿಶೇಷವಾಗಿ ಸಂಸ್ಥೆಯ ವತಿಯಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಎಸ್.ಎಸ್.ಎಲ್.ಸಿ.ಯಲ್ಲಿ ಶೇಕಡ 95ಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಸಂಪೂರ್ಣ ಕಾಲೇಜು ಹಾಗೂ ಹಾಸ್ಟೆಲ್ ಶುಲ್ಕದಿಂದ ವಿನಾಯಿತಿ, ಶೇಕಡ 90 ರಿಂದ ಶೇಕಡ 95ರವರೆಗಿನ ವಿದ್ಯಾರ್ಥಿಗಳಿಗೆ ಕಾಲೇಜು ಶುಲ್ಕದಲ್ಲಿ ಶೇಕಡ 50ರಷ್ಟು ವಿನಾಯಿತಿ ಹಾಗೂ ರಾಜ್ಯದ ಯಾವುದೇ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡಿ ಅತೀ ಹೆಚ್ಚು ಅಂಕ ಪಡೆದು ಶಾಲೆಗೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳಿಗೂ ಶೇಕಡ 50ರಷ್ಟು ವಿನಾಯಿತಿ ನೀಡಿರುವುದರಿಂದ ಹೆಚ್ಚು ಹೆಚ್ಚು ವಿದ್ಯಾರ್ಥಿಗಳು ಪ್ರವೇಶಕ್ಕೆ ಅರ್ಜಿ ಸಲ್ಲಿಸುತ್ತಿದ್ದಾರೆ.

      ವಿಶೇಷವೆಂದರೆ ವಿಜ್ಞಾನ ಹಾಗೂ ವಾಣಿಜ್ಯ ವಿಭಾಗಕ್ಕೆ ಅತೀ ಹೆಚ್ಚು ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಎಸ್.ಎಸ್.ಎಲ್.ಸಿ.ಯ ಯಾವುದೇ ಅಂಕಗಳ ಮಾನದಂಡವಿಲ್ಲದೆ ನಮ್ಮ ಸಂಸ್ಥೆಯಲ್ಲಿ ಪ್ರವೇಶ ನೀಡುತ್ತಿದ್ದೇವೆ. ಪೋಷಕರಿಗೆ ಅಡ್ಮಿಷನ್ ಸಿಗುವುದಿಲ್ಲವೆಂಬ ಆತಂಕವೂ ಬೇಡ. ಅರ್ಜಿಸಲ್ಲಿಸಿದ ಪ್ರತಿಯೊಬ್ಬರಿಗೂ ಅಡ್ಮಿಷನ್ ನೀಡಲಾಗುವುದು.

      ನೀಟ್, ಜೆ.ಇ.ಇ. ಮತ್ತು ಕೆ.ಸಿ.ಇ.ಟಿ. ವಿಭಾಗಗಳಿಗೆ ಕಳೆದ ವರ್ಷದಿಂದ ಪ್ರತಿಷ್ಠಿತ ಕಾಲೇಜುಗಳಂತೆ ಉತ್ತಮ ತರಬೇತಿ ನೀಡಿರುವುದರಿಂದ ವಿಜ್ಞಾನ ವಿಭಾಗಕ್ಕೆ ಬೇಡಿಕೆ ಹೆಚ್ಚಾಗಿದೆ. ಜೊತೆಗೆ ವಾಣಿಜ್ಯ ಹಾಗೂ ಕಲಾ ವಿಭಾಗದ ಪ್ರವೇಶಕ್ಕೂ ವಿದ್ಯಾರ್ಥಿಗಳಿಂದ ಉತ್ತಮ ಪ್ರತಿಕ್ರಿಯೆ ಮೂಡಿಬಂದಿದೆ ಹಾಗೂ ಸಂಸ್ಥೆಯಲ್ಲಿ ವ್ಯಾಸಂಗ ಮಾಡಿದ ಹಳೇ ವಿದ್ಯಾರ್ಥಿಗಳಿಂದಲೂ ಸಕಾರತ್ಮಕ ಸ್ಪಂದನೆ ಇರುವುದರಿಂದ ಅಡ್ಮಿಷನ್‍ಗೆ ಒಳ್ಳೆಯ ಪ್ರತಿಕ್ರಿಯೆ ಮೂಡಿಬಂದಿದೆ ಎಂದು ಪ್ರಾಂಶುಪಾಲರಾದ ವೀರಭದ್ರಪ್ಪ ತಿಳಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap