ಬೆಂಗಳೂರು:
ದೇಶದ ಆರ್ಥಿಕ ಬೆನ್ನಲೆಬಾಗಿರುವ ರೈಲ್ವೇ ಇಲಾಖೆ ಪ್ರಯಾಣಿಕರಿಗಾಗಿ ರೈಲುಗಳಲ್ಲಿನ ಶೌಚಾಲಯಗಳನ್ನು ಜನಸ್ನೇಹಿ ಹಾಗೂ ದುರ್ವಾಸನೆ ಮುಕ್ತವಾಗಿಸಲು ಬಯೋ ವ್ಯಾಕ್ಯೂಮ್ ಶೌಚಾಲಯಗಳನ್ನು ಸ್ಥಾಪಿಸಲು ಮುಂದಾಗಿದೆ.
ರೈಲ್ವೆ ಇಲಾಖೆಯ ಅಧಿಕೃತ ಮೂಲಗಳ ಪ್ರಕಾರ, ಇಲಾಖೆ ಸಂಶೋಧನಾ ವಿಭಾಗವಾದ ಸಂಶೋಧನಾ ವಿನ್ಯಾಸ ಮತ್ತು ಗುಣಮಟ್ಟ ಸಂಸ್ಥೆ ಹೊಸ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದು, ಇದನ್ನು ರೈಲಿನ ಶೌಚಾಲಯಗಳಲ್ಲಿ ಅಳವಡಿಸಿದಲ್ಲಿ ನೀರಿನ ಉಳಿತಾಯದ ಜೊತೆಗೆ, ಸ್ವಚ್ಛತೆಯನ್ನು ಕಾಪಾಡಬಹುದು ಎಂದು ತಿಳಿದು ಬಂದಿದೆ.
