ಕೊರೋನಾ ಹಾವಳಿ ನಡುವೆ ರೈತರಿಗೆ ನೆಮ್ಮದಿ ತಂದ ಮಳೆರಾಯ..!

ಗುಬ್ಬಿ

     ತಾಲ್ಲೂಕಿನಾಧ್ಯಂತ ಉತ್ತಮ ಮಳೆಯಾಗಿದ್ದು ಬಿಸಿಲ ಬೇಗೆಯಿಂದ ತತ್ತರಿಸಿದ್ದ ಜನತೆಗೆ ತಂಪು ತಂದಿದೆ ರೈತರು ಮುಂಗಾರು ಹಂಗಾಮಿನ ಬೆಳೆಗಳನ್ನು ಬಿತ್ತನೆ ಮಾಡಿದ್ದು ಮಳೆಗಾಗಿ ಮುಗಿಲತ್ತ ನೋಡುತ್ತಿದ್ದ ಸಂದರ್ಭದಲ್ಲಿ ಇಂದು ಬೆಳಗ್ಗೆ ಬಿದ್ದ ಮಳೆ ನೆಮ್ಮಧಿ ತಂದಿದೆ.

     ಬಹುತೇಕ ತಾಲ್ಲೂಕಿನಾಧ್ಯಂತ ಮಳೆ ಬಿದ್ದಿದ್ದು ಕೃಷಿ ಮತ್ತು ತೋಟದ ಬೆಳೆಗಳು ಹಸಿರಿನಿಂದ ಕಂಗೊಳಿಸುತ್ತಿವೆ ವಾತಾವರಣವು ತಂಪಾಗಿದ್ದು ಇದೇ ರೀತಿ ಮಳೆ ಬಂದರೆ ಪೂರ್ವ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿರುವ ಹೆಸರು, ಉದ್ದು, ಹಲಸಂದೆ ಬೆಳೆಗಳು ಉತ್ತಮವಾಗಿ ಬೆಳೆಯುತ್ತವೆ ಎಂಬ ಆಶಾಭಾವನೆ ರೈತರದ್ದಾಗಿದೆ.

      ರಾಸುಗಳ ಮೇವಿಗಾಗಿ ತೋಟಗಳಲ್ಲಿ ರೈತರು ಈಗಾಗಲೆ ಬಿತ್ತನೆ ಮಾಡಿದ್ದ ಜೋಳ ಮಳೆಯಿಂದಾಗಿ ಹಸಿರಿನಿಂದ ಕಂಗೊಳಿಸುತ್ತಿವೆ. ಕೊಳವೆ ಬಾವಿಗಳಿಂದ ಬರುವ ಅಷ್ಠಿಷ್ಟು ನೀರಿನಿಂದ ಜಾನುವಾರುಗಳಿಗೆ ಮೇವಿಗಾಗಿ ಬೆಳೆದಿದ್ದ ಜೋಳದ ಬೆಳೆಗಳು ಇಂದು ಬೆಳೆಗ್ಗೆ ಸುರಿದ ಮಳೆಯಿಂದ ಜೀವಕಳೆ ಬಂದಂತಾಗಿದೆ. ಈಗಾಗಲೆ ಮುಂಗಾರು ಹಂಗಾಮಿನ ಕೃಷಿ ಬೆಳೆಗಳಾದ ಹೆಸರು, ಅಲಸಂದೆ ಬಿತ್ತನೆ ಬೀಜಗಳನ್ನು ತಾಲ್ಲೂಕಿನ ಆರು ಹೋಬಳಿಗಳ ರೈತ ಸಂಪರ್ಕ ಕೇಂದ್ರಗಳಲ್ಲಿ ಪಡೆದು ಬಿತ್ತನೆ ಕಾರ್ಯದಲ್ಲಿ ತೊಡಗಿದ್ದಾರೆ.

      ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜಗಳನ್ನು ರೈತರಿಗೆ ವಿತರಣೆ ಮಾಡುತ್ತಿದ್ದು ಈ ಭಾರಿ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಮುಂಗಾರು ಹಂಗಾಮಿನ ಬಿತ್ತನೆ ಬೀಜಗಳನ್ನು ರೈತರು ಖರೀದಿಮಾಡಿದ್ದಾರೆಂದು ಕೃಷಿ ಇಲಾಖೆ ಮೂಲಗಳು ತಿಳಿಸಿವೆ. ರೈತರು ಹೆಚ್ಚಿನ ಪ್ರಮಾಣದಲ್ಲಿ ಬಿತ್ತನೆ ಬೀಜ ಖರೀದಿ ಮಾಡಿರುವುದರಿಂದ ಕೆಲವು ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜ ಕೊರತೆ ಕಂಡು ಬಂದಿದ್ದು ತ್ವರಿತವಾಗಿ ಅಗತ್ಯವಿರುವ ಬಿತ್ತನೆ ಬೀಜಗಳನ್ನು ತರಿಸಿ ವಿತರಿಸಲಾಗುವುದೆಂದು ಇಲಾಖೆಯ ಮೂಲಗಳು ತಿಳಿಸಿವೆ. ರೈತರಿಗೆ ಬಿತ್ತನೆ ಬೀಜ ಮತ್ತು ರಸಗೊಬ್ಬರದ ಕೊರತೆಯಾಗದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿರುವುದಾಗಿ ಕೃಷಿ ಇಲಾಖೆ ತಿಳಿಸಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap