ರೈತ ಸಭೆ

ಹಾನಗಲ್ಲ :

         ಹತ್ತಾರು ವರ್ಷಗಳಿಂದ ರೈತರ ಕನಸಿನ ಬಾಳಂಬೀಡ ಏತ ನೀರಾವರಿ ಯೋಜನೆ ಹಗಲುಗನಸಾಗಿದ್ದು, ಸರಕಾರಗಳ ನಿರ್ಲಕ್ಷ ಹಾಗೂ ಕೂಡಲೇ ಈ ನೀರಾವರಿ ಯೋಜನೆ ಜಾರಿಗೆ ಒತ್ತಾಯಿಸಿ ಅಕ್ಟೋಬರ್ 17 ರಿಂದ ಹಾನಗಲ್ಲ ತಹಶೀಲ್ದಾರ ಕಛೇರಿ ಎದುರು ಅಹೋರಾತ್ರಿ ಧರಣಿ ಆಂಭಿಸಲಾಗುತ್ತದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಆರ್.ವಿ.ಕೆಂಚೆಳ್ಳೇರಿ ಘೋಷಿಸಿದ್ದಾರೆ.

         ಹಾನಗಲ್ಲಿನ ಪ್ರವಾಸಿ ಮಂದಿರದಲ್ಲಿ ತಾಲೂಕಿನ ರೈತ ಸಂಘದ ಸಭೆಯಲ್ಲಿ ಮಾತನಾಡಿ ವಿವಿರ ನೀಡಿದ ಅವರು, ಹಾನಗಲ್ಲ ತಾಲೂಕಿನಲ್ಲಿ ಎರಡು ನದಿಗಳು ಹರಿದಿವೆ. ಇಲ್ಲಿ ಆರೇಳು ನೂರು ನೀರಾವರಿ ಕರೆಗಳಿವೆ. ಇಂಥ ನೀರವಾರಿ ಮೂಲಗಳಿದ್ದರೂ ಕೂಡ ಸರಕಾರ ರೈತರಿಗೆ ನೀರಾವರಿ ವ್ಯವಸ್ಥೆ ಕಲ್ಪಿಸುವಲ್ಲಿ ನಿರ್ಲಕ್ಷ ತೋರಿದೆ. ರೈತರ ಬೇಡಿಕೆಗಳ ಬಗೆಗೆ ನಿರ್ಲಕ್ಷ ತೋರುತ್ರಿರುವ ಸರಕಾರಗಳು ಉತ್ತರ ಕರ್ನಾಟಕವನ್ನು ಕೇವಲ ಮತ ಬ್ಯಾಂಕ ಮಾಡಿಕೊಂಡು ಆಟ ಆಡುತ್ತಿವೆ. ಬಾಳಂಬೀಡ ಏತ ನೀರಾವರಿ ಯೋಜನೆಗೆ ಹಿಂದಿನ ಕಾಂಗ್ರೇಸ್ ಸರಕಾರದಲ್ಲಿ ವಿಶ್ವಾಸವಿಟ್ಟುಕೊಂಡಿದ್ದ ರೈತರು ಭ್ರಮನಿರಸನಗೊಂಡಿದ್ದಾರೆ.

         ಕೇಂದ್ರ ಸರಕಾರವೂ ಕೂಡ ತಾಲೂಕಿನಲ್ಲಿ ಯಾವುದೇ ನೀರಾವರಿಯೂ ಸೇರಿದಂತೆ ರೈತ ಪರ ಚಿಂತನೆಗಳಿಂದ ದೂರವಿರುವುದೇ ವಿಷಾದದ ಸಂಗತಿ ಎಂದ ಅವರು, ಹಾನಗಲ್ಲನಲ್ಲಿ ಅಕ್ಟೋಬರ್ 17 ರಿಂದ ಆರಂಭಿಸುವ ಅಹೋರಾತ್ರಿ ಧರಣಿ ಅನಿರ್ಧಿಷ್ಟ ಧರಣಿಯಾಗಿದೆ. ಬಾಳಂಬೀಡ ಏತ ನೀರಾವರಿ, ಶಿರಗೋಡ ಏತ ನೀರಾವರಿ ಸೇರಿದಂತೆ ಎಲ್ಲ ನೀರಾವರಿ ಯೋಜನೆಗಳು ಜಾರಿಗೆ ಬರುವವರೆಗೆ ಧರಣಿ ನಿಲ್ಲದು ಎಂದು ಘೋಷಿಸಿದರು.

         ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜು ಬಳ್ಳಾರಿ ಮಾತನಾಡಿ, ರೈತರು ತಮ್ಮ ಶಕ್ತಿ ಪ್ರದರ್ಶಿಸಬೇಕು. ರಾಜಕಾರಣಿಗಳ ತಾಳಕ್ಕೆ ಕುಣಿಯುವುದರಿಂದ ಅವರು ಶ್ರೀಮಂತರಾಗುತ್ತರೆ. ರೈತ ಮಾತ್ರ ಬಡತನದ ಬೇಗೆಯಲ್ಲಿ ಸಿಲುಕಿ, ಪ್ರತಿ ವರ್ಷ ಬೆಳೆವಿಮೆ, ಸಾಲ ಮನ್ನಾ, ಬರಗಾಲ ಕಾಮಗಾರಿಗೆ ಭಿಕ್ಷೆ ಬೇಡುವ ಸ್ಥಿತಿ ನಿರ್ಮಾಣವಾಗುತ್ತದೆ. ಇದರಲ್ಲೇ ಕಾಲ ಕಳೆದು ಈ ಶಾಸಕರು, ಸಂಸದರು ಅವಧಿ ಮುಗಿಸಿ ಮತ್ತೆ ಚುನವಣೆಗೆ ಬಂದು ಭರವಸೆ ನೀಡಿ ಮಾಯವಾಗುತ್ತರೆ. ಹಾನಗಲ್ಲ ತಾಲೂಕಿನಲ್ಲಿ ಶಾಸಕ, ಸಂಸದ, ಇಬ್ಬರು ವಿಧಾನ ಪರಿಷತ್ ಸದಸ್ಯರು ಕಾರ್ಯ ಕ್ಷೇತ್ರವನ್ನಾಗಿ ಮಾಡಿಕೊಂಡಿದ್ದರೂ ಇಲ್ಲಿನ ನೀರಾವರಿಗೆ ಒಂದಷ್ಟು ಲಕ್ಷ್ಯ ನೀಡದೇ ಇರುವುದು ದುರದೃಷ್ಟಕರ ಸಂಗತಿ. ರೈತರು ಒಗ್ಗಟ್ಟಾಗಿ ನಮ್ಮ ಹಕ್ಕನ್ನು ಪಡೆಯೋಣ. ರಾಜಕಾರಣಿಗಳ ದಾಳವಾಗದೇ ನಮ್ಮ ಹಕ್ಕಿನ ಹೋರಾಟಕ್ಕೆ ಶಕ್ತಿಯಾಗಿರಿ ಎಂದರು.

         ತಾಲೂಕು ಘಟಕದ ಅಧ್ಯಕ್ಷ ಮರಿಗೌಡ ಪಾಟೀಲ ಮಾತನಾಡಿ, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ರೈತ ಹೋರಾಟವನ್ನು ಕಡೆಗಣಿಸಿ ತಮ್ಮದೇ ಆಟದಲ್ಲಿ ತೊಡಗಿದ್ದಾರೆ. ಪ್ರತಿ ವರ್ಷವೂ ಬೆಳೆವಿಮೆ, ಬರ ಕಾಮಗಾರಿ, ಪರಿಹಾರಗಳನ್ನು ಹೋರಾಟದಿಂದಲೇ ಪಡೆಯಬೇಕಾಗಿದೆ. ನಮ್ಮ ಭೂಮಿಗೆ ನೀರು ಕೊಡಿ ನಾವು ಭಿಕ್ಷೆಯನ್ನೂ ಬೇಡುವುದಿಲ್ಲ. ಡಿಸೆಂಬರ್ 17 ರಂದು ಆರಂಭವಾಗುವ ಅಹೋರಾತ್ರಿ ಧರಣಿಗೆ ತಾಲೂಕಿನ ಎಲ್ಲ ಗ್ರಾಮಗಳ ರೈತರು ಒಗ್ಗಟ್ಟಾಗಿ ಬನ್ನಿ. ನಮ್ಮ ಶಕ್ತಿ ಪ್ರದರ್ಶನ ಮಾಡೋಣ. ರೈತ ಶಕ್ತಿಯ ನಿಜವಾದ ಪ್ರದರ್ಶನ ಇದಾಗುವಂತೆ ಜನಪ್ರತಿನಿಧಿಗಳು ಹಾಗೂ ಸರಕಾರಕ್ಕೆ ಎಚ್ಚರಿಕೆ ನೀಡೋಣ ಎಂದರು.

         ಉತ್ತರ ಕರ್ನಾಟಕ ಹೋರಾಟ ಸಮಿತಿ ಅಧ್ಯಕ್ಷ ಎಸ್.ಎಂ.ಕೋತಂಬರಿ, ರೈತ ಸಂಘದ ಜಿಲ್ಲಾ ಹಾಗೂ ತಾಲೂಕು ಪದಾಧಿಕಾರಿಗಳಾದ ಅಡಿವೆಪ್ಪ ಆಲದಕಟ್ಟಿ, ಮಲ್ಲೇಶಪ್ಪ ಪರಪ್ಪನವರ, ವಾಸುದೇವ ಕಮಾಟಿ, ರುದ್ರಪ್ಪ ಹಣ್ಣಿ, ಶಂಭುಗೌಡ ಪಾಟೀಲ, ಸೋಮಣ್ಣ ಜಡೆಗೊಂಡರ, ಮಹೇಶ ವಿರುಪಣ್ಣನವರ, ರಾಜು ದಾನಪ್ಪನವರ, ಮಲ್ಲನಗೌಡ ಪಾಟೀಲ, ಮರದಾನಸಾಬ ಬಡಗಿ, ಸುರೇಶಗೌಡ ಪಾಟೀಲ, ಶಣ್ಮುಖ ಅಂದಲಗಿ, ರಾಮಣ್ಣ ಕೋಟಿ, ಶ್ರೀಧರ ಮಲಗುಂದ, ಮಾಲತೇಶ ಕಲ್ಲಿಕರೆಣ್ಣವರ ಈ ಸಂದರ್ಭದಲ್ಲಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link