ಬಳ್ಳಾರಿ
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಬಳ್ಳಾರಿ ತಾಲೂಕಿನ ಕೊರ್ಲಗುಂದಿ ಗ್ರಾಮದಲ್ಲಿ ಹಾಲ್ವಿ ಬಸವೇಶ್ವರ ಮತ್ತು ಅಡವಿ ತಾತನವರ ಜೋಡು ರಥೋತ್ಸವ ಅಂಗವಾಗಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ನಡೆಯಿತು.ಈ ಶಿಬಿರದಲ್ಲಿ ಸಮಾರು 140ಕ್ಕೂ ಹೆಚ್ಚಿನ ಜನರು ಸ್ವಯಂ ಪ್ರೇರಿತರಾಗಿ ರಕ್ತದಾನವನ್ನು ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಹೆಚ್.ಐ.ವಿ/ಏಡ್ಸ್ ಘಟಕದ ಮೇಲ್ವಿಚಾರಕ ಗಿರೀಶ, ಆಪ್ತ ಸಮಾಲೋಚಕ ಸಿತಾರಾಮ್, ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಜಿಲ್ಲಾ ಸಂಯೋಜಕ ಹೊನ್ನೂರುಸಾಬ್, ಊರಿನ ಸ್ವಯಂ ಸೇವಕರಾದ ಚಂದ್ರಶೇಖರ ರೆಡ್ಡಿ, ಊರಿನ ಎಲ್ಲಾ ಯುವಕರು, ಮುಖಂಡರು ಇದ್ದರು.