ಬಳ್ಳಾರಿ
ನಗರದ 5ನೇ ವಾರ್ಡಿನ ಕಾಕರ್ಲತೋಟದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಶ್ರೀರಾಮ ನವಮಿಯನ್ನು ಆಚರಿಸಲಾಯಿತು. ಶ್ರೀ ಸಿತಾರಾಮ ಕಲ್ಯಾಣ ನಿಮಿತ್ತವಾಗಿ ಕಾಕಾರ್ಲತೋಟದ ಪ್ರಮುಖರು, ನಾಗರಿಕರು ಮತ್ತು ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಲ್ಯಾಣೋತ್ಸವವನ್ನು ವಿಜೃಂಭಣೆಯಿಂದ ನಡೆಸಿಕೊಟ್ಟರು.
ಈ ಕಾರ್ಯಕ್ರಮಕ್ಕೆ ನಗರದ ಶಾಸಕ ಗಾಲಿ ಸೋಮಶೇಖರ್ ರೆಡ್ಡಿ ಮತ್ತು ಅವರ ಆಪ್ತ ಸಹಾಯಕ ವೀರಶೇಖರ ರೆಡ್ಡಿಯವರು ಆಗಮಿಸಿ ದೇವರ ಆಶಿರ್ವಾದ ಪಡೆದರು. ಈ ಸಂಧರ್ಭದಲ್ಲಿ ಮಳೆ ಬೆಳೆ ಚನ್ನಾಗಿ ಆಗಲಿ, ಜನರ ಆರೋಗ್ಯ ,ಐಶ್ವರ್ಯವನ್ನು ಹೆಚ್ಚಿಸಲೆಂದು ಭಗವಂತನಲ್ಲಿ ಅವರು ಪ್ರಾರ್ಥಿಸಿದ್ದಾರೆ.
ಈ ಸಂದರ್ಭದಲ್ಲಿ ಶಾಸಕರಿಗೆ ಅರ್ಚಕರು ಸನ್ಮಾನಿಸಿದರು. ಮತ್ತು ಈ ಕಾರ್ಯಕ್ರಮದಲ್ಲಿ ಅನ್ನದಾಸೋಹವನ್ನು ಆಯೋಜಿಸಲಾಗಿತ್ತು. ಸಾಯಿವರ್ಮ ಪಾಲಣ್ಣ,ಕೆ.ಸಿ.ಬಾಬು, ವಿ.ರಾಮಚಂದ್ರ, ಪ್ರಹ್ಲಾದ, ಎಸ್. ನಾಗರಾಜು, ಕೆ.ಸುರೇಶ್, ಪಿ.ವೀರೇಶ್, ಕೆ.ಗೋಪಾಲ್, ಹನುಮೇಶ್, ಮಲ್ಲಿಕಾರ್ಜುನ, ರಮೇಶ್, ನಾಗಭೂಷಣ, ಸುಧಾಕರ್ ಮತ್ತು ಇತರರು ಭಾಗವಹಿಸಿದ್ದರು.