ರಂಗೋಲಿ ಶುಭದ ಸಂಕೇತ:-ಗೀತಾ ಭೀಮಾನಾಯ್ಕ

ಹಗರಿಬೊಮ್ಮನಹಳ್ಳಿ

         ಯಾವುದೇ ಹಬ್ಬ ಹರಿದಿನಗಳು ಬರಲಿ ಮಹಿಳೆಯರು ತಮ್ಮ ಮನೆಗಳ ಅಂಗಳದಲ್ಲಿ ಚಿತ್ತಚಿತ್ತಾರದ ರಂಗೋಲಿ ಬಿಡಿಸುವುದು ಹಿಂದಿನ ಕಾಲದಿಂದಲೂ ಬಂದಿರುವ ಪದ್ಧತಿಯಾಗಿದ್ದು, ಇದೊಂದು ನಮ್ಮ ಭಾರತದ ನೆಲದ ಸಂಸ್ಕತಿಯ ಪ್ರತೀಕವಾಗಿದೆ ಎಂದು ಮಹಿಳಾ ಒಕ್ಕೂಟದ ಅಧ್ಯಕ್ಷೆ ಗೀತಾ ಭೀಮಾನಾಯ್ಕ ಅಭಿಪ್ರಾಯ ವ್ಯಕ್ತಪಡಿಸಿದರು.

          ತಾಲೂಕಿನ ತಂಬ್ರಹಳ್ಳಿಯಲ್ಲಿ ಶ್ರೀಗುರು ಕೊಟ್ಟೂರೇಶ್ವರ ದೇಗುಲದ ಆವೃಣದಲ್ಲಿ ಗೀತಾ ಭೀಮಾನಾಯ್ಕ ಅಭಿಮಾನ ಬಳಗದಿಂದ 2019ರ ಸಂಕ್ರಾತಿ ಹಬ್ಬದ ಪ್ರಯುಕ್ತ ತಾಲೂಕಿನ ಹೋಬಳಿ ವ್ಯಾಪ್ತಿಗಳಲ್ಲಿ ಮಹಿಳೆಯರಿಗಾಗಿ ಆಯೋಜಿಸಿದ್ದ ರಂಗೋಲಿ ಬಿಡಿಸುವ ಸ್ಪರ್ಧೆ ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು. ಪ್ರತಿಯೊಬ್ಬ ರಂಗೋಲಿ ಮಹಿಳೆಯರ ಕೈಚಳಕದಿಂದ ಅಭಿವ್ಯಕ್ತಗೊಳಿಸುವ ಕಲೆಯಾಗಿದೆ. ಈ ಕಲೆಗಳನ್ನು ಹೊರಜಗತ್ತಿಗೆ ಪರಿಚಯಿಸಿ ಪ್ರತಿಭೆಗಳನ್ನು ಗುರುತಿಸುವ ಕಾರ್ಯ ಆಗಬೇಕಿದೆ.

         ಪುರಾತನದ ವಿಭಿನ್ನ ಕಲೆಗಳು ಆಧುನಿಕರಣದ ಪ್ರಭಾವದಿಂದ ಅನೇಕ ಕಲೆಗಳು ಮಾಯವಾಗುತ್ತಿರುವ ಸಮಯದಲ್ಲಿ ಮುಂದಿನ ಯುವ ಪೀಳಿಗೆಗೆ ಈ ಕಲೆಗಳನ್ನು ಕೊಂಡೊಯ್ಯುವ ದೃಷ್ಟಿಯಂದ ಮಹಿಳೆಯರಿಗಾಗಿ ರಂಗೋಲಿ ಬಿಡಿಸುವ ಸ್ಪರ್ಧೆಯನ್ನು ಗೀತಾ ಭೀಮಾನಾಯ್ಕ್ ಅಭಿಮಾನ ಬಳಗದಿಂದ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.

          ಇದಲ್ಲದೇ ಭೀಮಾನಾಯ್ಕ್‍ರವರು ಕಳೆದ 6 ವರ್ಷಗಳಲ್ಲಿ ಕ್ಷೇತ್ರದ ಸಮಗ್ರ ಅಭಿವೃದ್ದಿ ಹಾಗೂ ಸಮಾಜಸೇವೆಯಲ್ಲಿ ತೊಡಗಿದ್ದಾರೆ. ನಮ್ಮ ಬಳಗದಿಂದ ವೃದ್ದರಿಗೆ, ಅಂಗವಿಕಲರಿಗೆ, ಇತರ ದುರ್ಬಲ ವರ್ಗದವರಿಗೆ ಮಾಶಾಸನ ಕೊಡಿಸುವಲ್ಲಿ ಪ್ರಯತ್ನಿಸುವುದು, ಆರೋಗ್ಯ ಹಾಗೂ ಕಣ್ಣಿನ ತಪಾಸಣೆ ಶಿಬಿರಗಳನ್ನು ಆಯೋಜಿಸುವುದು ಇನ್ನಿತರ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಸೇವೆ ಮಾಡಲಾಗುವುದು ಎಂದರು.

          ರಂಗೋಲಿ ಸ್ಪರ್ಧೆಯಲ್ಲಿ 20ಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸಿದ್ದರು. ಜಿಪಂ ಮಾಜಿ ಸದಸ್ಯ ಅಕ್ಕಿ ತೋಟೇಶ್, ಗ್ರಾಪಂ ಸದಸ್ಯ ಜಿ.ಗಿರೀಶ್, ಮುಖಂಡರಾದ ಪಿ.ಸುರೇಶ್, ಗಂಗಾವತಿ ಅಜೀಜ್‍ಸಾಬ್, ದೇವಿಪ್ರಸಾದ್, ಗ್ರಂಥಾಲಯ ಮೇಲ್ವಿಚಾರಕ ಟಿ.ಪಾಂಡುರಂಗಪ್ಪ, ಜಿಲ್ಲಾ ಘಟಕದ ಮಹಿಳಾ ಉಪಾಧ್ಯಕ್ಷೆ ಶಾಹಿರಬಾನು ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ಜಿ.ಗೌಸೀಯಾ ಅಧ್ಯಕ್ಷತೆ ವಹಿಸಿದ್ದರು. ಕಾಂಗ್ರೆಸ್ ತಾಲೂಕು ಅಧ್ಯಕ್ಷೆ ಯಶೋಧ ಮಂಜುನಾಥ್, ಕವಿತಾ ಹಾಲ್ದಾಳ್, ನಾಗವೇಣಿ, ಹನುಂತಮ್ಮ, ವಸಂತಮ್ಮ, ಶೆಟ್ರು ಗೀತಾ, ಸುಮಾ, ನಾಗರತ್ನಮ್ಮ, ಗಂಗಮ್ಮ ಬೀಬಿಜಾನ್ ಇದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link