ಸುರಕ್ಷತಾ ಚಾಲನೆಗೆ ಒತ್ತು ನೀಡಲು ಕರೆ

0
12

ತುರುವೇಕೆರೆ

   ಬಸ್‍ನಲ್ಲಿ ಸಂಚರಿಸುವ ಎಲ್ಲಾ ಪ್ರಯಾಣಿಕರ, ಹಾದಿಯಲ್ಲಿ ಎದುರಾಗುವ ಅನೇಕ ಅಮೂಲ್ಯ ಜೀವಗಳ ಸಂರಕ್ಷಣೆ, ಸ್ವಯಂರಕ್ಷಣೆ, ಮಾಡುವಂತಹ ಸುರಕ್ಷತಾ ಚಾಲನೆಗೆ ಚಾಲಕರು ಒತ್ತು ನೀಡುವಂತೆ ಮೋಟಾರು ವಾಹನ ನಿರೀಕ್ಷಕರಾದ ಮಂಜುನಾಥ್ ಪ್ರಸಾದ್ ತಿಳಿಸಿದರು.

    ಪಟ್ಟಣದ ರಾಜ್ಯ ಸಾರಿಗೆ ಸಂಸ್ಥೆ ಆವರಣದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ಚಾಲನೆಯಲ್ಲಿ ಚಾಲಕರು ತೊಡಗುವ ಮುನ್ನ ಸಮಾಧಾನ ಚಿತ್ತರಾಗಿ, ಚಾಲನೆ ಮಾಡುವ ವಾಹನವನ್ನು ನಿತ್ಯವೂ ತಪಾಸಣೆ ಮಾಡುವುದನ್ನು ರೂಢಿಸಿಕೊಳ್ಳಿ, ಕಾರ್ಯ ನಿರ್ವಹಿಸಿದ ನಂತರ ಅಗತ್ಯ ವಿಶ್ರಾಂತಿ ಪಡೆದುಕೊಳ್ಳುವುದನ್ನು ಮರೆಯದಿರಿ, ಚಾಲನೆಯ ವೇಳೆ ಶಾಂತಚಿತ್ತತೆಯನ್ನು ಕಾಪಾಡಿಕೊಳ್ಳುವ ಮೂಲಕ ನಿಮ್ಮ ವೃತ್ತಿಯನ್ನು ಪ್ರೀತಿಸಿ, ಅತ್ಯಂತ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಿ, ಉತ್ತಮ ಚಾಲಕರೆಂಬ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗುವಂತಹ ವೃತ್ತಿ ನೈಪುಣ್ಯತೆ ನಿಮ್ಮದಾಗಲಿ ಎಂದು ಆಶಿಸಿದರು.

     ಚಾಲಕರಿಗೆ ತಾಂತ್ರಿಕ ಜ್ಞಾನದ ಅರಿವು ಅತ್ಯಗತ್ಯವಾಗಿದ್ದು, ಪ್ರತಿ ಘಟಕಗಳಲ್ಲಿಯೂ ಚಾಲಕರಿಗೆ ವಿಶೇಷ ತರಬೇತಿ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳುವಂತಾಗಬೇಕು, ಚಾಲಕ – ನಿರ್ವಾಹಕರಾಗಿ ಏಕ ಕಾಲದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳು ಒತ್ತಡಕ್ಕೆ ಸಿಲುಕಿರುತ್ತಾರೆ.

    ಎರಡೂ ಕಾರ್ಯಗಳನ್ನು ಏಕವ್ಯಕ್ತಿ ಮಾಡಲು ಮುಂದಾದಾಗ ಅಹಿತಗಳು ಸಹಜವಾಗಿಯೇ ಸಂಭವಿಸುತ್ತವೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

     ಪಿ.ಎಸ್.ಐ. ರಾಜು ಮಾತನಾಡಿ, ಬಸ್‍ಚಾಲನೆ ಮಾಡುವ ವೇಳೆ, ನಿಮಗೆ ರಸ್ತೆಯಲ್ಲಿಎದುರಾಗುವ ಸಣ್ಣ-ಪುಟ್ಟ ವಾಹನಗಳನ್ನು ಅನುಸರಿಸಿ ಚಾಲನೆ ಮಾಡಿ, ಚಾಲನೆಯನ್ನು ಸ್ಪರ್ಧೆ ಎಂಬಂತೆ ನೋಡುವುದು ಬೇಡ, ಸುರಕ್ಷತಾ ಚಾಲನೆ ಮಾಡಲು ಚಾಲಕರು ಒತ್ತುಕೊಡಿ ಎಂದು ತಿಳಿಸಿದರು.ಘಟಕ ವ್ಯವಸ್ಥಾಪಕರಾದ ತುಳಸೀತಾರಾಮ್, ಆರೋಗ್ಯ ಇಲಾಖೆಯ ಬೋರೇಗೌಡ, ವಕೀಲರಾದ ಧನಪಾಲ್, ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here