ಬಳ್ಳಾರಿ
ಜಿಲ್ಲಾಡಳಿತ, ಆಂದ್ರ ಪ್ರದೇಶದ ಗುಂಟೂರ್ ಜಿಲ್ಲೆಯ 10ನೇ ಎನ್.ಡಿ.ಆರ್.ಎಫ್, ನ್ಯಾಷನಲ್ ಡಿಸಾಸ್ಟರ್ ರೆಸ್ಪಾನ್ಸ್ ಫೋರ್ಸ್, ಪ್ಯೂಪಿಲ್ ಟ್ರೀ ಸ್ಕೂಲ್ ಮತ್ತು ಕಾಲೇಜು ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಇವರ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ವಿಕೋಪ ಜಾಗೃತಿ ದಿನಚಾರಣೆ ಅಂಗವಾಗಿ ಶಾಲಾ ಸುರಕ್ಷತಾ ಕಾರ್ಯಕ್ರಮವನ್ನು ಶುಕ್ರವಾರದಂದು ಪ್ಯೂಪಿಲ್ ಟ್ರೀ ಸ್ಕೂಲ್ ಮತ್ತು ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.
ಮುಖ್ಯ ತರಬೇತುದಾರ ಟೀಮ್ ಕಮಾಂಡರ್ ಮತ್ತು ಇನ್ಸ್‍ಪೆಕ್ಟರ್ ಸಂತೋಷ್ ಕುಮಾರ್ ಇವರು ಪ್ರಥಮ ಚಿಕಿತ್ಸೆ, ಪ್ರವಾಹ ರಕ್ಷಣೆ, ಪ್ರಕೃತಿ ವಿಕೋಪದಿಂದ ಆಗುವ ಅನಾಹುತಗಳು, ಕಟ್ಟಡ ಕುಸಿತ, ರಾಸಾಯನಿಕ ಪದಾರ್ಥಗಳಿಂದ ಆಗುವ ಅನಾಹುತಗಳ, ಇನ್ನೀತರ ಅನಾಹುತಗಳಿಂದ ಪಾರಾಗಲು ಮತ್ತು ಭೂಕಂಪ ಬಂದಾಗ ಯಾವ ರೀತಿ ಶಾಲೆಯಲ್ಲಿ ಮಕ್ಕಳು ಭಯಪಡದೇ ಹೇಗೆ ರಕ್ಷಣೆ ಮಾಡಬಹುದು ಎಂದು ಪ್ಯೂಪಿಲ್ ಟ್ರೀ ಸ್ಕೂಲ್ ಪ್ರಾಂಶುಪಾಲರು, ಪ್ರಾಧ್ಯಾಪಕರು, ಸಿಬ್ಬಂದಿ ವರ್ಗದವರಿಗೆ ಹಾಗೂ ವಿಧ್ಯಾರ್ಥಿಗಳಿಗೆ ಪ್ರಕೃತಿ ವಿಕೋಪದಲ್ಲಿ ಉಪಯೋಗವಾಗುವ ಸಲಕರಣೆಗಳನ್ನು ಹೇಗೆ ಉಪಯೋಗಿಸಬೇಕೆಂದು ವಿವರವಾಗಿ ಮಾಹಿತಿಯನ್ನು ನೀಡಿದರು.
ಅಗ್ನಿಶಾಮಕ ಠಾಣಾಧಿಕಾರಿ ಬಸವರಾಜ ಅವರು ಮಾತನಾಡಿ, ಅಗ್ನಿ ಅನಾಹುತಗಳಿಂದ ಪಾರಾಗಲು ಮತ್ತು ಮನೆಯಲ್ಲಿ ಗ್ಯಾಸ್ ಸಿಲೆಂಡರ್‍ಯಿಂದ ಬೆಂಕಿ ಹತ್ತಿಕೊಂಡರೆ ಹೇಗೆ ನಂದಿಸಬೇಕೆಂದು ಪ್ರಾತ್ಯಕ್ಷತೆಯನ್ನು ತೋರಿಸುವುದರ ಮೂಲಕ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಪ್ಯೂಪಿಲ್ ಟ್ರೀ ಸ್ಕೂಲ್ ಮತ್ತು ಕಾಲೇಜಿನ ಪ್ರಾಂಶುಪಾಲರಾದ ರೇಖಾ, ಎನ್.ಡಿ.ಆರ್.ಎಫ್ ತಂಡದ ಜೆ.ಎ.ಥವಮಣಿ, ರಮೇಶ್, ಗಿರೀ, ಸುರೇಶ್, ರಾಮಕೃಷ್ಣ ರೆಡ್ಡಿ, ಪರಮಲ್ ಸಿಂಗ್, ಕೊಂಡಯ್ಯ ಎಂ, ರಾಜೀವ್ ಸಿಂಗ್, ಸಂತುಲಾಲ್ ಮತ್ತು ಎನ್.ಡಿ.ಆರ್.ಎಫ್ ತಂಡದ ಕಾರ್ಯದರ್ಶಿ ಎಂ.ಎ.ಷಕೀಬ್, ಭಾರತೀಯ ರೆಡ್ ಕ್ರಾಸ್ ತಂಡದ ಉಮಾಮಹೇಶ್ವರಿ, ಎಂ.ವಲಿ ಬಾಷಾ, ಸುಮಾರು 500 ಜನ ವಿದ್ಯಾರ್ಥಿಗಳು ಹಾಗೂ ಇತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ