ಹಕ್ಕೋತ್ತಾಯಗಳನ್ನು ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆ

ಹಗರಿಬೊಮ್ಮನಹಳ್ಳಿ:

    ಸರ್ಕಾರಿ ಆಸ್ಪತ್ರೆಗಳ ಗುತ್ತಿಗೆ ಆಧಾರಿತ ಎನ್.ಎಚ್.ಎಂ.ನೌಕರರು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಗುತ್ತಿಗೆ ನೌಕರರ ಸಂಘದ ತಾಲೂಕು ಸಮಿತಿ ಪದಾಧಿಕಾರಿಗಳು ತಾಲೂಕು ಕಚೇರಿಯ ಮುಂದೆ ಕುಳಿತು ಪ್ರತಿಭಟನೆ ನಡೆಸಿದರು.

      ಪ್ರತಿಭಟನೆಯು ಸರ್ಕಾರಿ ಆಸ್ಪತ್ರೆಯಿಂದ ಪ್ರಾರಂಭಿಸಿ ಬಸವೇಶ್ವರ ಬಜಾರದ ಮೂಲಕ ವಿವಿಧ ಘೋಷಣೆಗಳನ್ನು ಕೂಗುತ್ತ ಸಾಗಿದರು. ತಾಲೂಕು ಕಚೇರಿಯ ಬಳಿ ಸೇರಿದ ಸಂಘಟಕರು ಕೆಲ ಗಂಟೆ ಪ್ರತಿಭಟನೆ ನಡೆಸಿದರು. ಸಮಿತಿ ಅಧ್ಯಕ್ಷ ಬಿ.ಅಶೋಕ ಮಾತನಾಡಿ, ಸುಮಾರು 10ವರ್ಷಗಳಿಂದ ದುಡಿಯುತ್ತ ಬಂದಿರುವ ನಮಗೆ ವೇತನ ತಾರತಮ್ಯ ಮಾಡುತಿದ್ದಾರೆ. ಆರೋಗ್ಯ ಇಲಾಖೆಯ ಎಲ್ಲಾ ಗುತ್ತಿಗೆ ನೌಕರರಿಗೆ ನಿವೃತ್ತಿಯ ವಯಸ್ಸಿನವರೆಗೂ ಸೇವಾಭದ್ರತೆಯನ್ನು ಒದಗಿಸಬೇಕು, 5ರಿಂದ 10ವರ್ಷ ಕಾರ್ಯ ನಿರ್ವಹಿಸುಯ್ತಿರು ನೌಕರರಿಗೆ ಹುದ್ದೆ ಅನುಸಾರ ಹುದ್ದೆಗಳನ್ನು ಸಷ್ಠಿಸಿ ಅವರನ್ನು ಖಾಯಂ ನೌಕರರೆಂದು ಪರಿಗಣಿಸಬೇಕು ಗುತ್ತಿಗೆ ಆಧಾರಿತ ನೌಕರರಿಗೆ ನೇಮಕಾತಿಯಲ್ಲಿ ವಯಸ್ಸಿನ ಮಿತಿಯನ್ನು ಹೆಚ್ಚಿಸಬೇಕು ಎಂದು ಬೇಡಿಕೆಗಳನ್ನಿಟ್ಟು ಇನ್ನು ಅನೇಕ ಬೇಡಿಕೆಗಳನ್ನು ಸರ್ಕಾರ ಕೂಡಲೆ ನೆರವೇರಿಸಬೇಕು ಎಂದು ಆಗ್ರಹಿಸಿದರು.

      “ಎನ್.ಎಚ್.ಎಂ.ಕಾರ್ಯಕ್ರಮದಡಿ ಗುತ್ತಿಗೆ ಆಧಾರದಲ್ಲಿ ಕಳೆದ 10ವರ್ಷಗಳಿಂದ ಅತಿ ಕಡಿಮೆ ವೇತನಕ್ಕಾಗಿ ಖಾಯಂ ನೌಕರರ ಸಮನಾಗಿ ದುಡಿಯುತಿದ್ದೇವೆ. ಆದರೆ, ವೇತನದಲ್ಲಿ ತಾರತಮ್ಯ ಅನುಭವಿಸುತಿದ್ದೇವೆ. ಸುಪ್ರೀಮ್ ಕೋರ್ಟ್ ಆದೇಶದಂತೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು, ಸೇವಾ ಭದ್ರತೆಯನ್ನು ಸರ್ಕಾರ ಈ ಕೂಡಲೆ ನಮಗೆ ನೀಡಬೇಕು.”-ಭಾಗ್ಯಮ್ಮ. ಗುತ್ತಿಗೆ ಆಧಾರಿತ ನರ್ಸ್. ತಂಬ್ರಹಳ್ಳಿ ಸರ್ಕಾರಿ ಆಸ್ಪತ್ರೆ.

       ಸಮಿತಿಯ ಉಪಾಧ್ಯಕ್ಷರಾದ ಆಯುಷ್ ವೈದ್ಯಾಧಿಕಾರಿಗಳಾದ ಎಚ್.ಎಂ.ಮಲ್ಲಿಕಾರ್ಜುನ, ಡಾ||ಸಿದ್ದೇಶ್, ಕಾರ್ಯದರ್ಶಿ ಡಾ||ಸಿದ್ದೇಶ್ ಶಿವಶಾಲಿ, ಸಹಕಾರ್ಯದರ್ಶಿ ಟಿ.ಎಂ.ಗಂಗಾಧರ, ಡಾ||ಅನಿತಾ ಕೆ.ಕಲಂದರ್, ಖಜಾಂಚಿ ಸಿ.ಅಂದಾನಪ್ಪ, ಸಂಚಾಲಕ ಟಿ.ಜಯಪ್ರಕಾಶ್, ಟಿ.ಎಂ.ಗಂಗಾಧರ, ಮಹಿಳಾ ಪ್ರತಿನಿಧಿ ಡಿ.ರಾಧಮ್ಮ, ಕೆ.ಸುವರ್ಣ, ಅನ್ನಪೂರ್ಣ, ಜಿ.ಸರೋಜ, ಕೆ.ವಿಶಾಲಾಕ್ಷಿ, ಎಸ್.ವೀಣಾ, ನೇತ್ರಾ, ಮಂಗಳಮ್ಮ, ಮಂಜುನಾಥ, ಪೂಜ ಮುಂತಾದವರು ಪಾಲ್ಗೊಂಡಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap