ಹಾವೇರಿ :
ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಹೊಸುರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ನ್ಯಾಸರ್ಗಿ ಗೌಳಿಯಾರ ದಡ್ಡಿ ಹಾಗೂ ಕೋಣನಕೇರಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಬಸವನಕಟ್ಟಿ ಗೌಳಿಯಾರ ದಡ್ಡಿಗೆ ಮೂಲಭೂತ ಸೌಕರ್ಯ ಒದಗಿಸಲು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವಿಣಕುಮಾರ ಶೆಟ್ಟಿ ಬಣ) ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಉತ್ತರ ಕನ್ನಡ ಹಾಗೂ ಧಾರವಾಡ ಜಿಲ್ಲಾಡಳಿತ ಅಲ್ಲಿಯ ಧನಗಾಯಿ ಗೌಳಿಯರಿಗೆ ನೀಡಿದ ಸೌಕರ್ಯದಲ್ಲಿ ಜಿಲ್ಲಾಡಳಿತ ಶೇ,5 ರಷ್ಟು ಸೌಕರ್ರ್ಯ ಒದಗಿಸದೆ ಇರುವುದು ತುಂಬಾ ವಿಸಾದಕರ ಸಂಗತಿ. ಎರಡು ದಡ್ಡಿಯಲ್ಲಿ ತಲಾ 25 ಕುಟುಂಬಗಳು ವಾಸವಾಗಿದ್ದು, ಈ ಜನಾಂಗ ಅನೇಕ ವರ್ಷಗಳಿಂದ ಅರಣ್ಯ ಪ್ರದೇಶದಲ್ಲಿ ವಾಸಿಸುತ್ತಾ ಬಂದಿವೆ. ಈ ಗೌಳಿ ಜನಾಂಗದವರು ತಮ್ಮ ಜಾನುವಾರುಗಳಿಂದ ಹೈನುಗಾರಿಕೆ ಮಾಡಿ ಜೀವನ ಸಾಗಿಸುತ್ತಿದ್ದಾರೆ.
ಮೂಲಭೂತ ಸೌಕರ್ಯ ಮರಿಚಿಕೆಯಾಗಿದೆ. ಕಾಡಿನ ಮಧ್ಯದಲ್ಲಿ ಕಾಡು ಹಕ್ಕಿಗಳಂತೆ ಕಾಲಕಳಿಯುತ್ತಾ ಜೀವನ ಸಾಗಿಸುತ್ತಿರುವ ಎರಡು ಗ್ರಾಮದ ಗೌಳಿಗರು ಮೂಲಭೂತ ಸೌಕರ್ಯಗಳಿಂದ ವಂಚಿತಗೊಂಡಿರುತ್ತಾರೆ.ಸದರಿಯವರು ವಾಸವಾಗಿರುವ ದಡ್ಡಿಗಳಲ್ಲಿ ರಸ್ತೆ, ಬಿದಿದೀಪ ಸೇರಿದಂತೆ ಶೌಚಾಲಯವಂತೂ ಇಲ್ಲಿಯ ಜನಾಂಗ ಕಂಡೇ ಇಲ್ಲ ಶೌಚಕ್ಕೆಂದು ಅರಣ್ಯ ಪ್ರದೇಶದಲ್ಲಿ ಮಹಿಳೆಯರು ಸೇರಿದಂತೆ ಮಕ್ಕಳು ಹೋದಾಗ ಅಲ್ಲಿರುವ ಕಾಡು ಪ್ರಾಣಿಗಳಿಂದ ಅನೇಕ ಬಾರಿ ಹಲ್ಲೆಗೊಳಗೊಂಡಿರುತ್ತಾರೆ.
ಗ್ರಾಮದಲ್ಲಿ ಚರಂಡಿಗಳಿಲ್ಲ ಸರಿಯಾದ ರಸ್ತೆಗಳಿಲ್ಲ ಕುಡಿಯುವ ನೀರಿನ ಸೌಲಭ್ಯವಿಲ್ಲ ಕೆಲವೊಂದು ಬಾರಿ ಕೆರೆ, ಹಳ್ಳಗಳಲ್ಲಿಯ ಕಲುಶಿತಗೊಂಡಿರುವ ನೀರನ್ನೇ ಕುಡಿದು ಕಾಲಕಳಿಯಬೇಕು. ಮಳೆಗಾಲದಲ್ಲಿ ಈ ದಡ್ಡಿಗಳಲ್ಲಿ ಮೊಣಕಾಲವರೆಗು ಇರುವ ಕೆಸರಿನಲ್ಲಿಯೇ ನಡೆದು ಹೋಗಬೇಕು.
ಈ ಗೌಳಿಗರಿಗೆ ಸರಕಾರ ನೀಡುವ ಯಾವುದೇ ವಸತಿ ಯೋಜನೆಗಳಿಂದ ಮನೆ ಮಂಜೂರಾತಿ ಆಗಿಲ್ಲಿ ತಟ್ಟಿಯ ಮನೆಯಲ್ಲಿಯೇ ತಮ್ಮ ಧನಗಳ ಜೊತೆ ಕಾಲಕಳೆಯಬೇಕು. ವಿವಿಧ ಹಂತದ ಚುನಾವಣೆಗಳಲ್ಲಿ ಮತ ಕೇಳಲು ಬರುವ ವಿವಿಧ ಪಕ್ಷದ ಅಭ್ಯರ್ಥಿಗಳು ಚುನಾಯಿತರಾದ ಮೇಲೆ ಈ ಕಡೆ ಹೊರಳಿ ನೋಡುವುದಿಲ್ಲ ಗ್ರಾಮ ಪಂಚಾಯತಿ ಕೇಂದ್ರ ಸ್ಥಾನಗಳಿಂದ ಹತ್ತು ಹತ್ತು ಕಿ.ಮಿ ದೂರದ ಅರಣ್ಯದಲ್ಲಿರುವ ಈ ದಡ್ಡಿಗಳಿಗೆ ವಾಹನ ಸೌಕರ್ಯವಂತೂ ಇಲ್ಲವೇ ಇಲ್ಲ ಬ್ಯಾಂಕ ಸೇರಿದಂತೆ ಪಡಿತರ ಆಹಾರ ಧಾನ್ಯ ತಗೆದುಕೊಂಡು ಹೊಗಲು ಅರಣ್ಯದಲ್ಲಿ 10 ಕಿ.ಮಿ. ದೂರ ನಡೆದು ಹೋಗುವ ಪರಸ್ಥಿತಿ ಇದೆ.
ಮನೆ ನಿರ್ಮಿಸಿಕೊಳ್ಳಲು ಹಕ್ಕು ಪತ್ರ ನೀಡದೇ ಇಲ್ಲಿನ ಮಕ್ಕಳಿಗೆ ಶಿಕ್ಷಣ ಪಡೆದುಕೊಳ್ಳುವ ಭಾಗ್ಯವಂತೂ ಇಲ್ಲವೇ ಇಲ್ಲ ಶಿಕ್ಷಣ ಪಡೆದು ತಮ್ಮ ಭವಿಷ್ಯ ರೂಪಿಸಿಕೊಗಳ್ಳುವ ಈ ಮಕ್ಕಳಿಗೆ ಶಾಲೆ ಇಲ್ಲದೇ ಇರುವದರಿಂದ ತಮ್ಮ ತಂದೆ-ತಾಯಿಯವರ ಜೊತೆ ತಮ್ಮ ಕುಲ ಕಸಬಾದ ಧನ ಕಾಯುವದೇ ಕಾಯಕವನ್ನಾಗಿ ಮಾಡಿಕೊಂಡಿರುವದನ್ನು ನೋಡಿದರೆ ತುಂಬಾ ದುಃಖವಾಗುತ್ತದೆ.
ಈ ಜನಾಂಗ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿರುವದಕ್ಕೆ ಜನ ಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಇಚ್ಚಾ ಶಕ್ತಿಯ ಕೊರತೆ ಎದ್ದು ಕಾಣುತ್ತದೆ. ಇಲ್ಲಿನ ಸಮಸ್ಯೆಗಳಿಗೆ ಪರಿಹಾರ ದೊರಕಿಸದೇ ಹೋದರೆ ಲೋಕಸಭೆ ಚುನಾವಣೆಯನ್ನು ಬಹಿಷ್ಕಾರಕ್ಕೆ ಮುಂದಾಗಬೇಕಾಗುತ್ತದೆ ಎಂದು ಮನವಿಯಲ್ಲಿ ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಮಂಜುನಾಥ ಓಲೇಕಾರ, ಮುಖಂಡರಾದ ನಾಗರಾಜ ಮಲ್ಲಮ್ಮನವರ, ಪರಮೇಶ ತೋಟದ, ಪರಶುರಾಮ ತಳವಾರ, ಮಂಜು ದೇವಿಹೊಸೂರ, ಅಪ್ಪಣ್ಣ ಧಾರವಾಡ, ಪ್ರಭು ಲೋಕಾಪುರ, ಕಿರಣ ಲೋಕಾಪುರ, ಕಲ್ಲಿಕಾರ್ಜುನ ಪುರದ, ಶಿವರಾಜ ಯರೇಶಿಮಿ, ಚೇತನ ಬಳಿಗಾರ, ಪರಮೇಶ ಬಾರ್ಕಿ, ಕರಬಸಪ್ಪ ಮಾವಿನಕಾಯಿ, ಬಸವರಾಜ ಕುಂಬಾರ, ಗುಡ್ಡಪ್ಪ ಮ್ಯಾಗನಿಮನಿ, ಬಸವರಾಜ ಕಬ್ಬೇರ, ಅಭಿಷೇಕ ಪುರದ, ಅಭಿಷೇಕ ಜಾಲಿ, ಫಕ್ಕೀರೇಶ ಹರಿಹರ, ವಿನಾಯಕ ವೈಷದ, ರಚನಾ ಎನ್.ಎಚ್ ಅನೇಕರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ