ಗುರುವಿನ ಗೌರವದ ಶಿಕ್ಷಣ ಇಂದು ಮರೆಯಾಗಿದೆ : ಸೋಮಣ್ಣ

ಶಿಗ್ಗಾವಿ :

         ಮೊದಲಿನ ಗುರುವಿನ ಗೌರವದ ಶಿಕ್ಷಣ ಇಂದು ಮರೆಯಾಗಿದೆ, ಆ ಗುರುವಿನ ಗೌರವದ ಶಿಕ್ಷಣ ಪಡೆದವರೇ ಬಲ್ಲರು, ಆ ಸದ್ಘುರುವಿನ ಕರುಣೆ ಇಲ್ಲದೇ ಯಾವುದೇ ಕೆಲಸ ಕಾರ್ಯಗಳು ಯಶಸ್ವಿಯಾಗಲು ಸಾದ್ಯವಿಲ್ಲ ಎಂದು ಮಾಜಿ ವಿ ಪ ಸದಸ್ಯ ಸೋಮಣ್ಣ ಬೇವಿನಮರದ ಮಾರ್ಮಿಕವಾಗಿ ನುಡಿದರು.

        ತಾಲೂಕಿನ ವನಹಳ್ಳಿ ಗ್ರಾಮದಲ್ಲಿ ರಂಭಾಪುರಿ ಜಗದ್ಘುರು ವೀರಗಂಗಾಧರ ಸ್ವತಂತ್ರ್ಯ ಪದವಿ ಪೂರ್ವ ಮಹಾವಿದ್ಯಾಲಯ ಶಿಗ್ಗಾವಿ ವತಿಯಿಂದ 2018-19 ನೇ ಸಾಲಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಭಿರದ ಉದ್ಘಾಟನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ನಾವು ನಿವು ನೆಪಕ್ಕೆ ಮಾತ್ರ ಗುರುವಿಗೆ ಗೌರವ ಗುರುವಿಗೆ ಭಕ್ತಿಯಿಂದ ಕಾಣುವವರು ಎತ್ತರದ ಮಟ್ಟಕ್ಕೆ ಬೆಳೆಯುತ್ತಾರೆ

       ಇದಕ್ಕೆ ನಾನೇ ಸಾಕ್ಷಿ ಎಂದ ಅವರು ಜೀವನದಲ್ಲಿ ಸಹಾಯ ಮಾಡಿದವರನ್ನು ನೆನೆಯುವದು ಮನುಷ್ಯ ಮಾನವೀತೆಯ ಧರ್ಮ ಇಲ್ಲವಾದರೆ ಅವನು ಮನುಷ್ಯನೆ ಅಲ್ಲ ಹಿರಿಯರ ಮಾತಿನಂತೆ ಆಚಾರ ಹೇಳುವದಕ್ಕಿಂತ ಆಚರಣೆಗೆ ತರುವದೆ ಲೇಸು ಎಂದು ಮಾರ್ಮಿಕವಾಗಿ ಹೇಳಿದ ಅವರು ಎನ್.ಎಸ್.ಎಸ್ ಶಿಭಿರವು ಇದೊಂದು ಶ್ರಮಧಾನದ ಶಿಬಿರವಾಗಿದ್ದು ಗ್ರಾಮದ ಸಂಪೂರ್ಣ ಸಹಕಾರವನ್ನು ವಿದ್ಯಾರ್ಥಿಗಳಿಗೆ ನೀಡಬೇಕು ಎಂದ ಅವರು ಒಳ್ಳೆಯ ಪ್ರಜೆಗಳನ್ನು ನೀಡಿದ ಗ್ರಾಮ ವನಹಳ್ಳಿ ಗ್ರಾಮವಾಗಿದ್ದು ಇತಿಹಾಸಯುಳ್ಳ ಗ್ರಾಮವಾಗಿದೆ ದೇಶದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ದೇಶ ಭಕ್ತಿಯಲ್ಲಿ ಸ್ವಯಂ ಸೇವಕರಾಗಿ ಸ್ವಸಹಾಯದೊಂದಿಗೆ ಕೆಲಸ ಮಾಡುವುದೇ ರಾಷ್ಟ್ರೀಯ ಸೇವಾ ಯೋಜನೆಯಾಗಿದ್ದು ಎಂದರು.

      ಬಂಕಾಪೂರ ಅರಳೆಮಠದ ರೇವಣಶಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಸಾನಿದ್ಯ ವಹಿಸಿ ಆಶೀರ್ವಚನ ನೀಡಿ ವನಹಳ್ಳಿ ಗ್ರಾಮ ಸಣ್ಣದಾದರು ಪ್ರಗತಿಪರರನ್ನು ನೀಡಿದ ಗ್ರಾಮವಾಗಿದೆ ಒಳ್ಳೆಯ ಗುಣಗಳನ್ನು ಹೇಳುವವರೇ ಗುರುಗಳು ಆ ಗುರುಗಳು ನೀಡುತ್ತಿರುವ ಶಿಕ್ಷಣ ಜೀವನ ಅವರ ಉನ್ನತಿಗೆ ಕಾರಣವಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

      ಕಾರ್ಯಕ್ರಮದಲ್ಲಿ ಎಫ್, ಎಸ್, ಶಿವಣ್ಣವರ ಪ್ರಾಸ್ಥಾವಿಕವಾಗಿ ಮಾತನಾಡಿದರು, ಬಂಕಾಪೂರ ಅರಳೆಲೆಮಠದ ರೇವಣಶಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳನ್ನು ಹಾಗೂ ಮಾಜಿ ವಿ ಪ ಸದಸ್ಯ ಸೋಮಣ್ಣ ಬೇವಿನಮರದ ಅವರನ್ನು ಸನ್ಮಾನಿಸಲಾಯಿತು.

        ಗ್ರಾಪಂ ಅಧ್ಯಕ್ಷ ಸಂಗಮೇಶ ದೊಡ್ಡಮನಿ, ಉಪಾಧ್ಯಕ್ಷೆ ರತ್ನವ್ವ ದೊಡ್ಡಮನಿ, ಸದಸ್ಯರಾದ ಮಾಸುಬಿ ನದಾಫ್, ಮಂಜುಳಾ ಸಾತಪ್ಪನವರ, ಬಸಣ್ಣ ಮಣಕಟ್ಟಿ, ಸುಭಾಷಣ್ಣ ಕಟ್ಟಿ, ಗೌರಪ್ಪ ರಾಮಾಪೂರ, ವಕೀಲರಾದ ಬಸವರಾಜ ರಾಗಿ, ಕರವೇ ಉಪಾದ್ಯಕ್ಷ ಬಸಲಿಂಗಪ್ಪ ನರಗುಂದ, ಮುತ್ತಪ್ಪ ಕ್ಷೌರದ, ಪ್ರಾಚಾರ್ಯ ಎಸ್ ವಿ ಕುಲಕರ್ಣಿ, ಎನ್ ಎಸ್ ಎಸ್ ಕಾರ್ಯಾಕ್ರಮಾಧಿಕಾರಿ ಪ್ರೋ ಎಸ್ ವಿ ಪೂಜಾರ, ಪ್ರೋ ಎನ್.ಎಸ್. ಶಿದ್ದಪ್ಪನವರ, ಪ್ರೋ ಎಫ್.ಎಸ್.ಶಿವಣ್ಣವರ, ಪ್ರೋ ಎಸ್, ಎನ್ ತೀರ್ಥ, ಪ್ರೋ ಎಮ್ ಎಸ್ ಸಂಗಣ್ಣವರ, ಸೇರಿದಂತೆ ಶಿಭಿರಾರ್ಥಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು, ಪ್ರೋ ಎಸ್ ವಿ ಪೂಜಾರ ನಿರೂಪಿಸಿದರು, ಪ್ರೋ ಶಿವಪ್ರಕಾಶ ಬಳಿಗಾರ ಸ್ವಾಗತಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link