ಶಿರಾ ಇಲ್ಲಿನ ನಗರಸಭಾ ವ್ಯಾಪ್ತಿಯ ಭಗವಾನ್ ಪೆಟ್ರೋಲ್ ಬಂಕ್ ಸಮೀಪದ ಡಿ.ಎಸ್.ಪಿ. ಕಚೇರಿ ರಸ್ತೆಯ ಬದಿಯಲ್ಲಿದ್ದ ಅಂಗಡಿಗಳನ್ನು ನಗರಸಭೆಯಿಂದ ತೆರವುಗೊಳಿಸಲಾಯಿತು.ನಗರದ ಮಾರುಕಟ್ಟೆ ರಸ್ತೆಯೂ ಇದಾಗಿದ್ದು, ಡಾ.ರಾಮಕೃಷ್ಣ ಆಸ್ಪತ್ರೆ, ಧರ್ಮಸ್ಥಳ ಗ್ರಾ.ಯೋಜನಾ ಕಚೇರಿಯೂ ಸೇರಿದಂತೆ ಸದರಿ ರಸ್ತೆಯು ಅತ್ಯಂತ ಜನನಿಬಿಡ ರಸ್ತೆಯೂ ಆಗಿದೆ.
ಸದರಿ ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೂ ಅಡಚಣೆಯಾದ್ದರಿಂದ ಸಾರ್ವಜನಿಕರು ರಸ್ತೆಯನ್ನು ತೆರವುಗೊಳಿಸುವಂತೆ ಈ ಹಿಂದೆ ಲೋಕಾಯುಕ್ತರ ಮೊರೆ ಹೋಗಿದ್ದರು. ರಸ್ತೆ ಬದಿಯ ಅಂಗಡಿಗಳನ್ನು ತೆರವುಗೊಳಿಸಿಕೊಳ್ಳುವಂತೆ ನಗರಸಭೆಯ ಅಧಿಕಾರಿಗಳು ಈಗಾಗಲೆ ಸಾಕಷ್ಟು ತಿಳಿವಳಿಕೆಯನ್ನು ನೀಡಿದ್ದರು.
ದಿಢೀರನೆ ಮಂಗಳವಾರ ಬೆಳಗ್ಗೆ ಮುಖ್ಯ ಎಂಜಿನಿಯರ್, ಆರೋಗ್ಯ ನಿರೀಕ್ಷಕರು, ಕಂದಾಯ ಅಧಿಕಾರಿಗಳು ಹಾಗೂ ತಮ್ಮ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಭೇಟಿ ನೀಡಿದ ಆಯುಕ್ತ ಪರಮೇಶ್ವರಪ್ಪ ರಸ್ತೆ ಬದಿಯ ಅಂಗಡಿಗಳನ್ನು ತೆರವುಗೊಳಿಸಿದರು.
ಎ.ಇ.ಇ. ಶಾರದಾ, ನಗರಸಭಾ ಕಂದಾಯ ಅಧಿಕಾರಿ ಪ್ರದೀಪ್‍ಕುಮಾರ್, ಆರೋಗ್ಯ ನಿರೀಕ್ಷಕ ಮಾರೇಗೌಡ, ಮುಜಾಹಿದ್, ಗೌಸ್ ಮೊಹಿಯುದ್ಧೀನ್, ದೇವರಾಜು ಮುಂತಾದವರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ