ಚಿತ್ರದುರ್ಗ
ಈ ಮಾಹೆಯಲ್ಲಿ ನಗರದ ವಿವಿಧೆಡೆಗಳಲ್ಲಿ ವಿವಿಧ ಇಲಾಖೆ ಮತ್ತು ಯೋಜನೆಯಡಿ ಸುಮಾರು 74 ಕೋಟಿಯಷ್ಟು ರಸ್ತೆ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ತಿಳಿಸಿದರು.
ಚಿತ್ರದುರ್ಗ ನಗರದ ವಿದ್ಯಾನಗರದಲ್ಲಿ ಎಸ್.ಇ.ಪಿ.ಟಿ.ಎಸ್.ಪಿ. ಯೋಜನೆಯಡಿ ಸುಮಾರು 15 ಲಕ್ಷ ರೂ, ವೆಚ್ಚದ ಸಿಸಿ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಇದೇ ದಿನ ನಗರದ ವಿವಿಧೆಡೆಗಳಲ್ಲಿ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಗುತ್ತಿದೆ. ಈ ಹಿನ್ನಲೆಯಲ್ಲಿ ಸರ್ಕಾರದ ವಿವಿಧ ಇಲಾಖೆಗಳು ಮತ್ತು ವಿವಿಧ ಯೋಜನೆಯಡಿಯಲ್ಲಿ ಈ ಕಾಮಗಾರಿಗಳನ್ನು ಮಾಡಲಾಗುತ್ತಿದೆ, ರಸ್ತೆಗಳ ಕಾಮಗಾರಿಗಳ ಗುಣಮಟ್ಟ ಕಡಿಮೆಯಾಗದಂತೆ ಎಚ್ಚರವಹಿಸಿ ಅದೇ ರೀತಿ ನಾಗರೀಕರು ಸಹಾ ಕಾಮಗಾರಿಯ ಬಗ್ಗೆ ನಿಗಾವಹಿಸುವಂತೆ ಮನವಿ ಮಾಡಿದರು.
ವಿದ್ಯಾನಗರದ ಬಡಾವಣೆಯಲ್ಲಿಯೇ ವಿವಿಧ ಯೋಜನೆಯಡಿ 4 ರಸ್ತೆಗಳನ್ನು ಸುಮಾರು 40 ಲಕ್ಷ ರೂ.ಗಳ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ, ಇದ್ದಲ್ಲದೆ ಆದಿ ಜಾಂಬವ ಬಡಾವಣೆಯಲ್ಲಿ ಸುಮಾರು 1.30 ಕೋಟಿ ರೂ.ವೆಚ್ಚದಲ್ಲಿ ರಸ್ತೆಯ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದರು.ಈ ಸಂದರ್ಭದಲ್ಲಿ ನಗರಸಭೆಯ ಮಾಜಿ ಅಧ್ಯಕ್ಷ ಶ್ರೀಮತಿ ಸುನೀತಾ, ಹಾಲಿ ಸದಸ್ಯರಾದ ಷಾಹಿನಾ ಭಾಷ, ಮುಖಂಡರಾದ ಮಲ್ಲಿಕಾರ್ಜನ್, ಮಹಾಂತೇಶ್, ಭಾಷಾ, ಇಂಜಿನಿಯರ್ ಏಕಾಂತರಾಜು ಸೇರಿದಂತೆ ಇತರರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ