ಬೆಂಗಳೂರು
ಬೈಕ್ ಹಣ ಕೊಡದ ವಿಚಾರವಾಗಿ ಜಗಳ ಮಾಡಿ ಕುಖ್ಯಾತ ಕಳ್ಳ ಚೌಕಿ ನರಸಿಂಹನನ್ನು ಡ್ರಾಗರ್‍ನಿಂದ 20ಕ್ಕೂ ಹೆಚ್ಚು ಕಡೆ ಇರಿದು ಭೀಕರವಾಗಿ ಕೊಲೆಗೈದು ತಲೆಮರೆಸಿಕೊಂಡಿದ್ದ ಕುಖ್ಯಾತ ರೌಡಿ ಸಚಿನ್‍ಗೆ ರಾಜಗೋಪಾಲನಗರ ಪೊಲೀಸರು ಗುಂಡು ಹೊಡೆದು ಬಂಧಿಸಿದ್ದಾರೆ.
ಪೊಲೀಸರ ಮೇಲೆ ಕಲ್ಲಿನಿಂದ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ಲಗ್ಗೆರೆಯ ಸಚಿನ್ (23)ಆತ್ಮರಕ್ಷಣೆಗಾಗಿ ಪೊಲೀಸರು ಹಾರಿಸಿದ ಗುಂಡು ಬಲಗಾಲಿನ ಮಂಡಿ ಚಿಪ್ಪಿಗೆ ತಗುಲಿ ಗಾಯಗೊಂಡಿರುವ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ
ಪೆÇಲೀಸರಿಂದ ತಪ್ಪಿಸಿಕೊಳ್ಳಲು ಸಚಿನ್ ರಾಜಗೋಪಾಲನಗರ ಪೆÇಲೀಸ್ ಪೇದೆಗಳಾದ ಜಯಶಂಕರ ಹಾಗೂ ಪ್ರಕಾಶ್ ನಾಯಕ ಅವರ ಮೇಲೆ ಕಲ್ಲಿನಿಂದ ಹಲ್ಲೆ ಮಾಡಿದ್ದು, ಗಾಯಗೊಂಡಿರುವ ಅವರಿಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ ಎಂದು ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್ ತಿಳಿಸಿದ್ದಾರೆ.
ಕಳೆದ ಏ. 2 ರಂದು ರಾತ್ರಿ 12ರ ವೇಳೆ ನಂದಿನಿ ಲೇಔಟ್‍ನ ಬಾರ್‍ವೊಂದರಲ್ಲಿ ಕಳ್ಳ ಚೌಕಿನರಸಿಂಹನಿಗೆ ಕುಡಿಸಿ ರಾಜಗೋಪಾಲ ನಗರದ ಅನ್ನಪೂರ್ಣೇಶ್ವರಿ ನಗರದ ರಸ್ತೆ ಬಳಿ ಡ್ರಾಗರ್‍ನಿಂದ 20ಕ್ಕೂ ಹೆಚ್ಚು ಕಡೆಗಳಲ್ಲಿ ಇರಿದು ಕೊಲೆ ಮಾಡಲಾಗಿತ್ತು.
ಈ ಸಂಬಂಧ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡ ರಾಜಗೋಪಾಲ ನಗರ ಪೆÇಲೀಸರು ರೌಡಿ ಸಚಿನ್ ಹಾಗೂ ಅವನ ಸಹಚರರಾದ ಲಗ್ಗೆರೆಯ .ಹಿತೇಶ್ (30), ಕಾರ್ತಿಕ್ (25)ನನ್ನು ಬುಧವಾರ ಸಂಜೆ ಮಂಡ್ಯ ಬಳಿ ಬಂಧಿಸಿ ವಿಚಾರಣೆ ನಡೆಸಿದ್ದರು.
ಪೊಲೀಸರ ಮೇಲೆ ಹಲ್ಲೆ
ಚೌಕಿನರಸಿಂಹನ ಕೊಲೆಗೆ ಬಳಸಿದ್ದ ಡ್ರಾಗರ್‍ನ್ನು ವಶಪಡಿಸಿಕೊಂಡು ಸ್ಥಳ ಮಹಜರು ಮಾಡಲು ಗುರುವಾರ ಬೆಳಿಗ್ಗೆ 6ರ ವೇಳೆ ಸಚಿನ್‍ನ್ನು ರಾಜಗೋಪಾಲನಗರ ಇನ್ಸ್‍ಪೆಕ್ಟರ್ ದಿನೇಶ್, ಸಿಬ್ಬಂದಿಗಳಾದ ಜಯಶಂಕರ, ಪ್ರಕಾಶ್ ನಾಯ್ಕ ಜೊತೆ ಜೀಪಿನಲ್ಲಿ ಹೊರಟರು.
ಪೀಣ್ಯದ ಶಿವಪುರದ ಬಳಿ ಬೈಕ್‍ನ್ನು ವಶಪಡಿಸಿಕೊಳ್ಳಲು ಶಿವಪುರದ ಬಳಿ ಸಚಿನ್‍ನನ್ನು ಜೀಪಿನಿಂದ ಇಳಿಸಿದಾಗ ಆರೋಪಿಯು ಅಲ್ಲಿದ್ದ ಕಲ್ಲನ್ನು ತೆಗೆದುಕೊಂಡು ಜಯಶಂಕರ್ ಹಾಗೂ ಪ್ರಕಾಶ್ ನಾಯ್ಕ ಮೇಲೆ ಹಲ್ಲೆ ನಡೆಸಿ ಓಡಿ ಹೋಗಲು ಯತ್ನಿಸಿದ್ದಾನೆ. ಈ ವೇಳೆ ಇನ್ಸ್‍ಪೆಕ್ಟರ್ ದಿನೇಶ್ ಅವರು ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ ಶರಣಾಗುವಂತೆ ಸೂಚನೆ ನೀಡಿದರೂ ಮತ್ತೆ ಕಲ್ಲಿನಿಂದ ಹಲ್ಲೆ ನಡೆಸಲು ಮುಂದಾದಾಗ ಮತ್ತೊಂದು ಸುತ್ತು ಗುಂಡು ಹಾರಿಸಿದ್ದಾರೆ. ಆ ಗುಂಡು ಬಲಗಾಲಿನ ಮಂಡಿ ಚಿಪ್ಪಿಗೆ ತಗುಲಿದ ಸಚಿನ್ ಸ್ಥಳದಲ್ಲೇ ಕುಸಿದು ಬಿದ್ದಿದ್ದಾನೆ.
ರೌಡಿ ಪಟ್ಟಿಗೆ ಸೇರಿದ್ದ
ಆತನನ್ನು ಬಂಧಿಸಿ ಮೊದಲು ಶ್ರೀನಿವಾಸ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ನಾಲ್ಕೈದು ವರ್ಷಗಳಿಂದ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ಸಚಿನ್, ಕೊಲೆಯತ್ನ, ಮನೆಗಳವು, ಕಳ್ಳತನ ಸೇರಿ 4ಕ್ಕೂ ಹೆಚ್ಚು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದು ಆತನನ್ನು ನಂದಿನಿ ಲೇಔಟ್ ಪೆÇಲೀಸ್ ಠಾಣೆಯ ರೌಡಿ ಪಟ್ಟಿಗೆ ಸೇರಿಸಲಾಗಿತ್ತು ಎಂದು ತಿಳಿಸಿದ್ದಾರೆ.
ಏಕೆ ಜಗಳ
ಲಗ್ಗೆರೆಯ ಕಾರ್ತಿಕ್ ತನ್ನ ಬೈಕ್‍ನ್ನು ನಂಜೇಶ್ ಎಂಬಾತನಿಗೆ 20 ಸಾವಿರ ರೂ,ಗಳಿಗೆ ಮಾರಾಟ ಮಾಡಿದ್ದು, ಹಣ ಪಡೆದಿರಲಿಲ್ಲ. ಅನಾರೋಗ್ಯದಿಂದ ಬಳಲುತ್ತಿದ್ದ ಮಂಜೇಶ್, ಬೈಕ್‍ನ್ನು ಕಳ್ಳ ಚೌಕಿನರಸಿಂಹನಿಗೆ ನೀಡಿದ್ದರು. ಹಣವನ್ನು ಕಾರ್ತಿಕ್‍ಗೆ ನೀಡುವಂತೆ ಚೌಕಿನರಸಿಂಹನಿಗೆ ಹೇಳಲಾಗಿತ್ತು. ಆದರೆ, ಚೌರಿನರಸಿಂಹ ಹಣ ಕೊಡಲು ಸತಾಯಿಸಿ ತಾನೇ ಬೈಕ್ ಓಡಿಸಿಕೊಂಡಿದ್ದ.
ಕೊನೆಗೆ ನಡೆದ ರಾಜಿ ಪಂಚಾಯ್ತಿಯಲ್ಲಿ 18 ಸಾವಿರ ರೂ.ಗಳನ್ನು ಕಾರ್ತಿಕ್‍ಗೆ ಕೊಡುವಂತಾಗಿತ್ತು. ಆದರೂ, ಚೌಕಿನರಸಿಂಹ ಹಣ ನೀಡಿರಲಿಲ್ಲ. ಇದರಿಂದ ಆಕ್ರೋಶಗೊಂಡ ಕಾರ್ತಿಕ್, ಸ್ನೇಹಿತರಾದ ಸಚಿನ್ ಹಾಗೂ ಹಿತೇಶ್ ಜತೆ ಸೇರಿ ಕಳೆದ ಏ. 2ರಂದು ರಾತ್ರಿ ನಂದಿನಿ ಲೇಔಟ್‍ನಿಂದ ರಾಜಗೋಪಾಲ ನಗರಕ್ಕೆ ಕರೆಸಿಕೊಂಡು ಬಾರ್‍ನಲ್ಲಿ ಕುಡಿಸಿ ಜಗಳ ಮಾಡಿ ಕೊಲೆ ಮಾಡಿರುವುದು ತನಿಖೆಯಲ್ಲಿ ಕಂಡು ಬಂದಿದೆ ಎಂದು ಶಶಿಕುಮಾರ್ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
