ಹೊಸಪೇಟೆ
ನಗರದ ಅನಂತಶಯನಗುಡಿಯಲ್ಲಿರುವ ಹಿಂದೂ ರುದ್ರಭೂಮಿಯನ್ನು ವಿಜಯನಗರ ಯುವಕರ ಬಳಗದಿಂದ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಯಿತು.
ಅನೇಕ ವರ್ಷಗಳಿಂದ ಕಾಡು ಬೆಳೆದಂತೆ ಜಾಲಿ ಗಿಡಗಳು ಬೆಳೆದಿದ್ದವು. ಶವ ಸಂಸ್ಕಾರಕ್ಕೆ ತೀವ್ರ ತೊಂದರೆಯಾಗಿತ್ತು. ಸ್ವಚ್ಛಗೊಳಿಸಲು ಸಂಬಂಧಪಟ್ಟ ಇಲಾಖೆಗಳಿಗೆ ಎಷ್ಟೇ ಮನವಿ ಮಾಡಿಕೊಂಡರೂ ಪ್ರಯೋಜನವಾಗಿರಲಿಲ್ಲ. ಇದನ್ನು ಅರಿತ ಯುವಕರು, ವರ್ಷದ ಮೊದಲ ದಿನ ಬೆಳಿಗ್ಗೆ 6.00 ಗಂಟೆಗೆ ಪದಾಧಿಕಾರಿಗಳು ಹಾಗೂ ನಗರಸಭೆ ಜೊತೆಗೂಡಿ ಸ್ವಚ್ಛತಾ ಕಾರ್ಯ ಕೈಗೊಂಡರು. ನಗರಸಭೆಯಿಂದ ಒಂದು ಜೆ.ಸಿ.ಬಿ. ಕಳುಹಿಸಿದ್ದರಿಂದ ಸ್ವಚ್ಛತಾ ಕಾರ್ಯ ಬೇಗ ಪೂರ್ಣಗೊಳ್ಳಲು ಸಾಧ್ಯವಾಯಿತು ಎಂದು ಬಳಗದ ಅಧ್ಯಕ್ಷ ಸೋಮಶೇಖರ ನಾಯಕ ತಿಳಿಸಿದರು.
ವಿಜಯನಗರ ಯುವಕರ ಬಳಗದ ಕಾರ್ಯದರ್ಶಿ ಪ್ರಶಾಂತ್ ಮಾತನಾಡಿ, ಎಲ್ಲವನ್ನೂ ಸರ್ಕಾರಗಳಿಂದ ಮಾಡಲು ಸಾಧ್ಯವಿಲ್ಲ. ಸ್ಥಳೀಯ ಯುವ ಸಂಘಟನೆಗಳ ನೆರವಿನಿಂದ ಈ ರೀತಿಯ ಕಾರ್ಯ ಕೈಗೊಳ್ಳಲು ಸಾಧ್ಯವಾಗಲಿದೆ. ಆದ್ದರಿಂದ ಎಲ್ಲಾ ನಗರ, ಪಟ್ಟಣ ಹಾಗೂ ಗ್ರಾಮಗಳ ಜನರು ತಮ್ಮನ್ನು ತಾವು ತೊಡಗಿಸಿಕೊಳ್ಳುವ ಮೂಲಕ ಸ್ವಚ್ಛತೆಯನ್ನು ಕಾಪಾಡಿಕೊಳ್ಳಲು ಸಾಧ್ಯ ಎಂದರು.
ಸ್ವಚ್ಛತಾ ಕಾರ್ಯದಲ್ಲಿ ಬಳಗದ ಪದಾಧಿಕಾರಿಗಳಾದ ಕಾಶಿ ವಿಶ್ವನಾಥ, ರಾಮು, ಚಂದ್ರಶೇಖರ್, ಕೋಳಿ ಶಂಕರ್, ಸೋಮ್ಲನಾಯ್ಕ್, ಗೌರಿಶಂಕರ ಹಾಗೂ ಊರಿನ ಕೆಲ ಮುಖಂಡರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
