ಶ್ರೀ ಸದ್ಗುರು ಮಹಾದೇವ ತಾತನವರ ಮೂರ್ತಿ ಪ್ರತಿಷ್ಠಾಪನೆ

ಹರಪನಹಳ್ಳಿ:

          ಅಡ್ಡಪಲಕ್ಕಿ ಉತ್ಸವ ಆಚರಣೆಯಿಂದ ಭಕ್ತರಿಗೆ ಗುರುವಿನ ಅಡಿಮುಡಿಯಿಂದ ಆಶೀರ್ವಾದ ಲಭ್ಯವಾಗುತ್ತದೆ ಎಂದು ಉಜ್ಜಯಿನಿ ಜಗದ್ಗುರು ಪ್ರಸನ್ನ ದಾರುಕ ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಹೇಳಿದರುತಾಲ್ಲೂಕಿನ ಚಿರಸ್ತಹಳ್ಳಿ ಗ್ರಾಮದಲ್ಲಿ ಸೋಮವಾರ ಶ್ರೀ ಸದ್ಗುರು ಮಹಾದೇವ ತಾತನವರ ಮೂರ್ತಿ ಪ್ರತಿಷ್ಠಾಪನೆ, ಶ್ರೀ ಮಠದ ಉದ್ಘಾಟನೆ ಹಾಗೂ ಜನಜಾಗೃತ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

         ಅಡ್ಡಪಲಕ್ಕಿ ಉತ್ಸವ ಮೌಢ್ಯದಿಂದ ಕೂಡಿಲ್ಲ. ಇದು ಭಕ್ತಿಯ ಸಂಕೇತವಾಗಿದೆ. ಜಗತ್ತಿನ ಮೊದಲು ಗುರುಗಳು ಆದ್ಯರ ಆಶೀರ್ವಾದ ಪಡೆಯುವ ಸಂಪ್ರದಾಯ ಇದಾಗಿದೆ. ಅಡ್ಡಪಲಕ್ಕಿ ಬರ ಮಾಡಿಕೊಳ್ಳುವ ಭಾವಾರ್ಥ ಎರಡು ರೀತಿಯಿದ್ದು, ಗುರುಗಳ ಮುಖ ಭಕ್ತಾಧಿಗಳಿಗೆ ಸಂಪೂರ್ಣ ದರ್ಶನ ಮಾಡುವುದು ಹಾಗೂ ಅಡಿಯಿಂದ ಮುಡಿಯವರಿಗೆ ಅವರ ಆಶೀರ್ವಾದ ಪಡೆಯಲು ತಲೆತಲಾಂತಬಂದ ನಡೆದು ಬಂದ ಆಚರಣೆ ಪದ್ಧತಿ ಆಗಿದೆ ಎಂದು ಹೇಳಿದರು.

        ಅಡ್ಡಪಲಕ್ಕಿ ಉತ್ಸವ ಗುರು-ಶಿಷ್ಯರ ನಡುವೆ ಬೆಸೆಯುವ ಸಂಬಂಧ. ಭಕ್ತರು ಎಲ್ಲಿಯವರಿಗೆ ಈ ಸಂಪ್ರದಾಯ ನಡೆಸಿಕೊಂಡು ಬರುತ್ತಾರೋ ಅಲ್ಲಿಯವರಿಗೆ ನಾವೂ ಮುಂದುವರೆಸುತ್ತೇವೆ. ದೇವರನ್ನು ನೇರವಾಗಿ ಕಾಣಲು ಸಾಧ್ಯವಿಲ್ಲ. ಗುರುವಿನ ಮಾರ್ಗದರ್ಶನದಲ್ಲಿ ಭಕ್ತಿಯಿಂದ ನಡೆದಲ್ಲಿ ದೇವರನ್ನು ಕಾಣಲು ಸಾಧ್ಯ ಎಂದು ಹೇಳಿದರು.

         ನಾವೆಲ್ಲರೂ ಭಾರತೀಯರು ಎಂಬ ಭಾವ ಮೂಡಬೇಕಿದೆ. ರೈತನ ಬದುಕು ಹಸನು ಆದರೆ ಎಲ್ಲರೂ ಸುಖ ಜೀವನ ನಡೆಸಲು ಸಾಧ್ಯ. ಮತದಾನ ಪವಿತ್ರ ಕಾರ್ಯವಾದದ್ದು, ಅದನ್ನು ಮಾರಿಕೊಳ್ಳಬೇಡಿ. ಸರಳ ಸಜ್ಜನಿಕೆ ವ್ಯಕ್ತಿಯನ್ನು ಆಯ್ಕೆ ಮಾಡಲು ಮುಂದಾಗಬೇಕು. ಮತದಾನವನ್ನು ಸರ್ಕಾರ ಕಡ್ಡಾಯ ಮಾಡಬೇಕು. ಕಡಿಮೆ ಮತದಾನವಾದರೆ ಅಯೋಗ್ಯ ವ್ಯಕ್ತಿಗಳು ಆಯ್ಕೆಯಾಗುತ್ತಾರೆ. ಅದೇ ಮತದಾನ ಹೆಚ್ಚು ಪ್ರತಿಶತವಾದರೆ ಯೋಗ್ಯ ವ್ಯಕ್ತಿಗಳು ಆಯ್ಕೆ ಆಗುತ್ತಾರೆ ಎಂದು ಸಲಹೆ ನೀಡಿದರು.

        ಶ್ರೀ ಸದ್ಗುರು ಮಹಾದೇವ ತಾತನವರು ಪವಾಡ ಪುರುಷರು. ಜನರ ಒಳಿತಿಗಾಗಿ ಶ್ರೀಗಳು ಸಾಕಷ್ಟು ಪವಾಡ ಮಾಡಿದ್ದಾರೆ. ಚಿರಸ್ತಹಳ್ಳಿ ಗ್ರಾಮ ಸಣ್ಣ ಊರಾದರೂ ಭಕ್ತಿಯಲ್ಲಿ ಹಿರಿಯದ್ದಾಗಿದೆ. ಭಕ್ತರು ತಾತನವರ ಮೂರ್ತಿ ಪ್ರತಿಷ್ಠಾಪಿಸಿ ಗ್ರಾಮವನ್ನು ಸಾಕ್ಷಾತ್ ಕೈಲಾಸದಂತೆ ರೂಪಿಸಿದ್ದಾರೆ ಎಂದು ಹೇಳಿದರು.

       ತೆಗ್ಗಿನಮಠದ ವರಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಭಾರತೀಯ ಸನಾತನ ಧರ್ಮದಲ್ಲಿ ಗುರುವಿಗೆ ಉನ್ನತ ಸ್ಥಾನವಿದೆ. ಶಾಂತಿಯುತ ಸಮಾಜ ನಿರ್ಮಾಣದಲ್ಲಿ ಗುರುವಿನ ಪಾತ್ರ ಅಪಾರ. ಜೀವನ ಸುಂದರವಾಗಲು ಗುರುವಿನ ಅಭಯಹಸ್ತ ಅತ್ಯಗತ್ಯವಾಗಿದೆ ಎಂದರು.

        ಎಂ.ಪಿ.ಪ್ರಕಾಶ್ ಸಮಾಜಮುಖಿ ಟ್ರಸ್ಟ್ ಅಧ್ಯಕ್ಷ ಎಂ.ಪಿ,ವೀಣಾ ಮಾತನಾಡಿ, ಮಠ-ಮಾನ್ಯಗಳು ಭಾವೈಕ್ಯ ಸಂಕೇತವಾಗಿವೆ. ಮಂದಿರಗಳಲ್ಲಿ ದೇವರ ದ್ಯಾನ ಮಾಡುವುದರಿಂದ ಜೀವನದಲ್ಲಿ ಸುಖ-ಶಾಂತಿ ನೆಮ್ಮದಿ ಲಭ್ಯವಾಗುತ್ತದೆ. ಧಾರ್ಮಿಕ ಕಾರ್ಯಕ್ರಮಗಳು ಜನರನ್ನು ಒಂದುಗೂಡಿಸುವ ಶ್ರೇಷ್ಠ ಆಚರಣೆಗಳಾಗಿವೆ ಎಂದರು.

        ರಾಮಘಟ್ಟದ ರೇವಣಸಿದ್ದೇಶ್ವರ ಸ್ವಾಮೀಜಿ, ಅವರಗೊಳ್ಳ ಪುರವರ್ಗ ಮಠದ ಓಂಕಾರ ಸ್ವಾಮೀಜಿ, ಮಾನೇಹಳ್ಳಿ ಮಳಿಯೋಗೇಶ್ವರ ಶಿವಾಚಾರ್ಯ ಸ್ವಾಮೀಜಿ, ನೀಲಗುಂದ ಗುಡ್ಡದಮಠದ ಚನ್ನಬಸವ ಶಿವಯೋಗಿಗಳು ಸಾನ್ನಿಧ್ಯ ವಹಿಸಿದ್ದರು.ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಸಿದ್ದಲಿಂಗಪ್ಪ, ಬಾಗಳಿ ಹೊಸೂರಪ್ಪ, ಎ.ಎಂ.ವಿಶ್ವನಾಥ, ಚಿರಸ್ತಹಳ್ಳಿ ಬಸವರಾಜಪ್ಪ, ಸಿ.ಮೆರೆಯಪ್ಪ, ಮಲ್ಲಿಕಾರ್ಜುನಸ್ವಾಮಿ ಕಲ್ಮಠದ, ಟಿ.ಎಂ.ರಾಜಶೇಖರ, ಆರುಂಡಿ, ನಾಗರಾಜ, ಲಲಿತಮ್ಮ, ಗುಂಡಗತ್ತಿ ಕೊಟ್ರಪ್ಪ, ಎಚ್.ಹನುಮಂತ ಇತರರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link