ಸಹಜ ಶಿವಯೋಗ ಕಾರ್ಯಕ್ರಮ

ಹಾವೇರಿ :

           ಧರ್ಮ ಇಂದು ಕೇವಲ ಆಚಾರ ವಿಚಾರಗಳಿಗೆ ಸೀಮಿತಿವಾಗಿದೆ. ಜನರು ಆಚಾರಕ್ಕಾಗಿ, ಮಡಿವಂತಿಕೆಗಾಗಿ, ತೋರಿಕೆಗಾಗಿ ಸ್ನಾನ ಮಾಡಿದರೆ ಸಾಲದುಅಂತರಂಗವನ್ನು ಶುದ್ಧಿಕರಿಸಿಕೊಳ್ಳುವುದು ಅವಶ್ಯವಿದೆಎಂದುಚಿತ್ರದುರ್ಗದಡಾ. ಶಿವಮೂರ್ತಿ ಮುರುಘಾ ಶರಣರು ಹೇಳಿದರು.

           ನಗರದ ಬಸವ ಕೇಂದ್ರ ಶ್ರೀ ಹೊಸಮಠದಲ್ಲಿ ಲಿಂ. ಜಗದ್ಗುರು ಶ್ರೀ. ನೈಘಂಟಿನ ಸಿದ್ದಬಸವ ಮುರುಘರಾಜೇಂದ್ರ ಶ್ರೀಗಳ ಹಾಗೂ ಶ್ರೀ ಮುರುಘೇಂದ್ರ ಮಹಾಶಿವಯೋಗಿಗಳವರ ಸ್ಮರಣೋತ್ಸವ ನಿಮಿತ್ಯ ಶರಣ ಸಂಸೃತಿ ಉತ್ಸವ-2018 ರಪ್ರಯುಕ್ತ ಬೆಳಗಿನ ಸಹಜ ಶಿವಯೋಗ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

           ಅನಾಧಿ ಕಾಲದಿಂದಲೂಧಾರ್ಮಿಕ ವ್ಯವಸ್ಥೆ ಹಲವು ಕಟ್ಟು ಪಾಡುಗಳಿಗೆ ಒಳಗಾಗಿದೆ. ಸ್ವಾರ್ಥಕ್ಕಾಗಿಧರ್ಮದ ಮೂಲ ಅಂಶವನ್ನು ಬಚ್ಚಿಟ್ಟು, ಅಡಂಬರದ ಪಾದಪೂಜೆ, ಯಂತ್ರ, ಮಾಟ, ಮಂತ್ರ, ತಂತ್ರ, ಇತ್ಯಾದಿ ದಾರಿದ್ರ್ಯಗಳು ಆಚರಣೆಗಳನ್ನು ಜಾರಿಯಲ್ಲಿಟ್ಟಿದ್ದರು. ಅಲ್ಲದೇಅನೇಕರನ್ನುಧಾರ್ಮಿಕ ಆಚರಣೆಗಳಿಂದ ದೂರಇಡಲಾಗಿತ್ತು. ಆದರೆ ಬಸವಾದಿ ಶಿವಶರಣರು ಈ ಕಟ್ಟು ಪಾಡುಗಳನ್ನು ದೂರ ಮಾಡಿ ಮಾನವಕುಲ ಒಂದೇಎನ್ನುವುದನ್ನು ಸಾರಿದರು.

          ಮಡಿ ಮಾಡುವುದುಧರ್ಮವಲ್ಲ. ಕೇವಲ ಲಿಂಗಪೂಜೆ, ದ್ಯಾನ ಮಾಡುವುದು, ಸ್ನಾನ ಮಾಡುವುದು ನಿಜವಾದಧರ್ಮಅಲ್ಲ. ಒಬ್ಬರನ್ನೊಬ್ಬರು ಅಪ್ಪಿಕೊಳ್ಳುವುದು, ಮುಟ್ಟಿಸಿಕೊಳ್ಳುವುದು ಧರ್ಮ. ಸಹಜ ಶಿವಯೋಗದಲ್ಲಿ ಇಂತಹ ಲೋಕಕಲ್ಯಾಣದ ಚಿಂತನೆಗಳನ್ನು ಮಾತ್ರ ಮಾಡಲಾಗುತ್ತದೆಎಂದರು.

         ಸ್ವರ್ಗ ಮತ್ತು ನರಕಗಳನ್ನು ನಮ್ಮ ಶಾಸ್ತ್ರಗಳು ಬೇರೆಕಡೆಇಟ್ಟಿವೆ. ಆದರೆ ಶರಣರುಅದು ಮಾನವನ ನಾಲಿಗೆ ಮತ್ತು ಹೃದಯದಲ್ಲಿದೆಎಂದು ತೋರಿಸಿ ಅಯ್ಯಾಎಂದರೆ ಸ್ವರ್ಗ,ಎಲವೋ ಎಂದರೆ ನರಕಎಂದು ಸ್ವರ್ಗ ಮತ್ತು ನರಕದ ಸೃಷ್ಟಿಕರ್ತರು ನಾವೇ ಆಗಿದ್ದೇವೆಎಂದರು.

          ಯಾವ ವ್ಯಕ್ತಿಯಲ್ಲಿಅತಿ ಹೆಚ್ಚು ಕೋಪ ತಾಪವನ್ನು ಹೊಂದಿರುತ್ತಾನೋ ಅವನಿಗೆ ಸಾಧನೆ ಸಾಧ್ಯವಿಲ್ಲ. ಸಹನೆ, ಶಾಂತಿ, ಸಮಾಧನಗಳನ್ನು ಅಳವಡಿಸಿಕೊಂಡಿರುವ ವ್ಯಕ್ತಿಸಾಧನೆ ಮಾಡಲು ಸಾಧ್ಯ. ಸಾಧನೆ ನಮಗೆ ಸಿದ್ದಿಯನ್ನು ತಂದುಕೊಡುತ್ತದೆಎಂದರು.
ಶಿಗ್ಗಾಂವಿ ವಿರಕ್ತಮಠದ ಸಂಗನ ಬಸವ ಸ್ವಾಮಿಜಿ ಮಾತನಾಡಿ, ಮಠ ಮಂದಿರಗಳಲ್ಲಿ ಮೌಡ್ಯಗಳನ್ನು ತುಂಬುವವರೆಅಧಿಕವಾಗಿದ್ದಾರೆ. ಇಂತಹ ಮೌಡ್ಯಗಳನ್ನು ದೂರ ಮಾಡುವುದಕ್ಕೆಡಾ. ಶಿವಮೂರ್ತಿ ಮುರಘಾ ಶರಣರು ಅನೇಕ ದಿಟ್ಟ ನಿರ್ಧಾರಗಳನ್ನು ತೆಗೆದುಕೊಂಡು ಅನುಷ್ಟಾನಗೊಳಿಸುತ್ತಿದ್ದಾರೆ ಎಂದರು.

          ನವಲಗುಂದದ ಗವಿಮಠದ ಬಸವಲಿಂಗ ಸ್ವಾಮಿಜಿ ಮಾತನಾಡಿ, ಜನಸಾಮಾನ್ಯರಿಗೂ ಸಹಿತ ಸಹಜವಾಗಿ ನೀರು, ಬಿಲ್ವಪತ್ರಿಯೊಂದಿಗೆ ಲಿಂಗ ಪೂಜೆಯನ್ನು ಮಾಡಿಕೊಳ್ಳಲು ಸಾಧ್ಯವಿದೆಎನ್ನುವುದನ್ನುಡಾ. ಶಿವಮೂರ್ತಿ ಮುರುಘಾ ಶರಣರು ತೋರಿಸಿಕೊಟ್ಟಿದ್ದಾರೆ ಎಂದು ಹೇಳಿದರು.

       ಚಿತ್ರದುರ್ಗದ ಡಾ.ಶಿವಮೂರ್ತಿ ಮುರುಘಾಶರಣರು ನಡೆಸಿಕೊಟ್ಟ ಸಹಜ ಶಿವಯೋಗದಲ್ಲಿ ನೂರಾರು ಭಕ್ತರು ಸಹಜ ಶಿವಯೋಗದಲ್ಲಿ ಪಾಲ್ಗೊಂಡರು. ವೇದಿಕೆಯಲ್ಲಿ ಬಸವಶಾಂತಲಿಂಗ ಶ್ರೀಗಳು, ಬಸವಪ್ರಭು ಶ್ರೀಗಳು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜಿಲ್ಲಾ ನಿರ್ದೇಶಕಮಹಾಬಲ ಕುಲಾಲ, ಯಾದಗಿರಿಜಿಲ್ಲಾಚುಟುಕು ಸಾಹಿತ್ಯ ಪರಿಷತ್ತಿನಅಧ್ಯಕ್ಷ ಬಸವರಾಜ ಸಿನ್ನೂರ, ಪರಮೇಶಪ್ಪ ಮೇಗಳಮನಿ , ನಾಗೇಂದ್ರ ಕಟಕೋಳ, ಪ್ರಕಾಶ ಶೆಟ್ಟಿ, ಇಂದುಧರ ಯರೇಶಿಮಿ, ಡಾ. ಮೃತ್ಯುಂಜಯತುರಕಾಣಿ, ಮಲ್ಲಿಕಾರ್ಜುನ ಹಿಂಚಿಗೇರಿ ಸೇರಿದಂತೆ ಇತರರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link