ಹಾವೇರಿ :
ಕಾಗಿನೆಲೆಯ ಶ್ರೀ ಕನಕಗುರುಪೀಠದ ಕನಕ ಕಲಾಭವನದಲ್ಲಿ ರಾಜ್ಯ ಮಟ್ಟದ 65 ನೇ ಅಖಿಲ ಭಾರತ ಸಹಕಾರ ಸಪ್ತಾಹದ ಸಪ್ತ ವರ್ಣದ ಸಹಕಾರ ಧ್ವಜಾರೋಹಣವನ್ನು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ನೆರವೇರಿಸಿದರು.
ಸಚಿವ ಬಂಡೆಪ್ಪ ಕಾಶಂಪೂರ.ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಕಾರ್ಯದರ್ಶಿ ಹಾಗೂ ಹಾವೇರಿ ಜಿಲ್ಲಾ ಸಹಕಾರ ಸಪ್ತಾಹ ನೋಡಲ್ ಅಧಿಕಾರಿ ಪಿ.ಎಂ.ನಾಗಶಯನ, ವಿವಿಧ ಸಹಕಾರ ಮಹಾಮಂಡಗಳ ಅಧ್ಯಕ್ಷರಾದ ರಾಜಶೇಖರ ಮಗಿಮಠ, ಬಾಪುಗೌಡ ಪಾಟೀಲ, ಬಸವರಾಜ ಎಸ್.ಸುಲ್ತಾನಪುರಿ, ನಿರ್ದೇಶಕರಾದ ಸುರೇಶ ಯತ್ನಳ್ಳಿ, ಜದೀಶ ತಂಬಾಕದ, ಸಿದ್ದಣ್ಣ ಅಂಬಲಿ, ಅಶೋಕ ಬನ್ನಿಹಳ್ಳಿ, ಲಿಂಗರಾಜ ಚಪ್ಪರದಹಳ್ಳಿ ಇತರರು ಹಾಗೂ ಹಾವೇರಿ ಜಿಲ್ಲಾ ಸಹಕಾರಿ ಯೂನಿಯನ್‍ದ ಆಡಳಿತದ ಮಂಡಳಿಯ ನಿರ್ದೇಶಕರು, ಹಾವೇರಿ ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕರಾದ ಶ್ರೀಮತಿ ಶಶಿಕಲಾ ಪಾಳೇದ, ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಮಲ್ಲೇಶಪ್ಪ ಹೊರಪೇಟೆ. ಕೆ.ಎಂ.ಎಫ್.ನ ಬಸವರಾಜ ಅರಬಗೊಂಡ. ಚಂದ್ರಶೇಖರ ಕರಿಯಣ್ಣನವರ. ಜನಪ್ರತಿನಿಧಿಗಳು, ಸಹಕಾರ ಬಂಧುಗಳು ಅನೇಕ ಗಣ್ಯರು ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ