ಕಾಂಗ್ರೆಸ್‍ನಿಂದ ಆರೋಗ್ಯ ಹಸ್ತ ಕಾರ್ಯಕ್ರಮಕ್ಕೆ ಚಾಲನೆ

ತುಮಕೂರು

    ಕಾಂಗ್ರೆಸ್ ಪಕ್ಷ ಆರೋಗ್ಯ ಹಸ್ತ ಕಾರ್ಯಕ್ರಮದ ಮೂಲಕ ಸಂಕಷ್ಟದಲ್ಲಿರುವ ರಾಜ್ಯದ ಜನರ ಸಂಕಷ್ಟಕ್ಕೆ ಸಹಾಯ ಹಸ್ತ ಚಾಚಲು ಮುಂದಾಗಿದ್ದು, ಸರಕಾರೇತರ ಸಂಸ್ಥೆಗಳಲ್ಲಿಯೇ ಇದು ಮೊದಲನೇಯ ಪ್ರಯತ್ನವಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ರಾಮಕೃಷ್ಣ ತಿಳಿಸಿದ್ದಾರೆ.

    ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಆರೋಗ್ಯ ಹಸ್ತ ಕಾರ್ಯಕ್ರಮದಲ್ಲಿ ಎಲ್ಲಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಮತ್ತು ಪದಾಧಿಕಾರಿಗಳಿಗೆ ಕೊರೊನಾ ಆರೋಗ್ಯ ಕಿಟ್ ವಿತರಿಸಿ ಮಾತನಾಡಿ ಅವರು,ಕೋವಿಡ್-19 ಭಯದಿಂದ ತತ್ತರಿಸಿರುವ ಜನರಲ್ಲಿ ಆತ್ಮಸ್ಥೈರ್ಯ ತುಂಬುವ ನಿಟ್ಟಿನಲ್ಲಿ ಇದು ವಿನೂತನ ಕಾರ್ಯಕ್ರಮವಾಗಿದೆ ಎಂದರು.

     ಕಳೆದ ವಾರ ಕೆ.ಪಿ.ಸಿ.ಸಿ.ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಅವರು ರಾಜ್ಯದ ವೈದ್ಯರೊಂದಿಗೆ ಮಾತುಕತೆ ನಡೆಸಿ, ಕೆ.ಪಿ.ಸಿ.ಸಿ.ಯ ಆರೋಗ್ಯ ಹಸ್ತ ಕಾರ್ಯಕ್ರಮಕ್ಕೆ ಸಹಕಾರ ನೀಡುವಂತೆ ಕೋರಿಕೊಂಡ ಮೇರೆಗೆ ರಾಜ್ಯದಾದÀ್ಯಂತ ಹಲವಾರು ವೈದ್ಯರು ಮುಂದೆ ಬಂದಿದ್ದು, ಪ್ರತಿ ತಾಲೂಕಿಗೆ ಒಬ್ಬರಂತೆ ವೈದ್ಯರನ್ನು ನಿಯುಕ್ತಿಗೊಳಿಸಿ,ಕೋರೋನಾ ವಾರಿಯರ್ಸ್ ಗಳಾಗಿ ಈಗಾಗಲೇ ನೊಂದಾಯಿಸಿರುವ ಕಾಂಗ್ರೆಸ್ ಕಾರ್ಯಕರ್ತರಿಗೆ ತರಬೇತಿ ನೀಡಿ,ಕೆ.ಪಿ.ಸಿ.ಸಿ.ವತಿಯಿಂದ ನೀಡಿರುವ ಆರೋಗ್ಯ ಪರಿಕರಗಳನ್ನು ಹೇಗೆ ಬಳಸಬೇಕುಎಂಬುದನ್ನು ತಿಳಿಸಲಿದ್ದಾರೆ. ವೈದ್ಯರು ನಿಗಧಿಪಡಿಸಿದ ದಿನದಂದು ಎಲ್ಲಾ ವಾರಿಯರ್ಸ್‍ಗಳು ಸದರಿ ಸ್ಥಳದಲ್ಲಿದ್ದು, ಮಾಹಿತಿ ಪಡೆದುಕೊಳ್ಳುವಂತೆ ಸಲಹೆ ನೀಡಿದರು.

ವೈದ್ಯರ ನಿಯೋಜನೆ:

     ತುಮಕೂರು ಜಿಲ್ಲೆಯ 11ವಿಧಾನಸಭಾ ಕ್ಷೇತ್ರಗಳಿಗೆ ಡಾ.ಬಸವರಾಜು ಮತ್ತು ಡಾ.ಲಕ್ಷ್ಮಿದೇವಿ ಅವರ ಉಸ್ತುವಾರಿಯಲ್ಲಿ ಓರ್ವ ವೈದ್ಯರಂತೆ ನೇಮಕ ಮಾಡಲಾಗಿದೆ.ತುಮಕೂರು ನಗರಕ್ಕೆ ಡಾ.ಬಸವರಾಜು, ತುಮಕೂರು ಗ್ರಾಮಾಂತರ ಡಾ.ಲಕ್ಷ್ಮಿದೇವಿ, ಚಿಕ್ಕನಾಯಕನಹಳ್ಳಿ ಡಾ.ವಿಜಯರಾಘವೇಂದ್ರ,ಶಿರಾ ಡಾ.ರಾಮಕೃಷ್ಣ, ಗುಬ್ಬಿ ಡಾ.ನಾಗಭೂಷಣ್,ಕೊರಟಗೆರೆ ಡಾ.ಸೌಮ್ಯ,ಪಾವಗಡ ಡಾ.ಜಗದೀಶ್,ಮಧುಗಿರಿ ಡಾ.ಗೋಪಾಲಕೃಷ್ಣ ಹಾಗೂ ಕುಣಿಗಲ್‍ಗೆ ಡಾ.ಅನಿಲ್‍ಕುಮಾರ್ ಅವರುಗಳನ್ನು ನಿಯೋಜಿಸಲಾಗಿದೆ ಎಂದು ಆರ್.ರಾಮಕೃಷ್ಣ ವಿವರ ನೀಡಿದರು.

    ತುಮಕೂರು ಜಿಲ್ಲಾ ಉಸ್ತುವಾರಿ ವೈದ್ಯರಾದ ಡಾ.ಬಸವರಾಜು ಮಾತನಾಡಿ, ಕೊರೊನಾ ರೋಗಕ್ಕಿಂತ,ಅದರ ಭಯದಿಂದಲೇ ಜನರು ಹೆಚ್ಚು ಆತಂಕಕ್ಕೆ ಒಳಗಾಗಿದ್ದಾರೆ.ಇದನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಜನರಿಗೆ ತಮ್ಮ ಕೈಲಾದ ಸೇವೆಯನ್ನು ಮಾಡಲು ಹೊರಟಿರುವುದು ತುಂಬಾ ಶ್ಲಾಘನೀಯ ಕೆಲಸ. ರೋಗ ಲಕ್ಷಣ ಇದ್ದವರು ಹತ್ತಿರದ ವೈದ್ಯರನ್ನು ಸಂಪರ್ಕಿಸಿ,ಚಿಕಿತ್ಸೆ ಪಡೆಯಬಹುದು. ಸ್ವಯಂ ವೈದ್ಯದಿಂದ ತೊಂದರೆ ತಪ್ಪಿದಲ್ಲ.ನಾವು ಯಾವುದೇ ಪಕ್ಷಕ್ಕೆ ಸೇರಿದವರಲ್ಲ.ಸೇವಾ ಮನೋಭಾವನೆಯಿಂದ ಈ ಕೆಲಸ ಮಾಡುತ್ತಿದ್ದು,ಕಾಂಗ್ರೆಸ್ ಕಾರ್ಯಕರ್ತರು ಸಹಕರಿಸುವಂತೆ ಮನವಿ ಮಾಡಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link