ಸಾಹಿತ್ಯ ಹುಣ್ಣಿಮೆ ಕಾರ್ಯಕ್ರಮ

ಹಾನಗಲ್ಲ :

       ಬದುಕನ್ನು ಪ್ರೀತಿಸುವುದೇ ಜೀವನವನ್ನು ಆಹ್ಲಾದಗೊಳಿಸುತ್ತದೆಯಲ್ಲದೆ, ಸಾಹಿತ್ಯ ಚಟುವಟೆಕೆಗಳು ಉದಾರ ಮಾನವೀಯ ಮೌಲ್ಯಗಳನ್ನು ಬಿಂಬಿಸುವಂತಾಗಿರಬೇಕು ಎಂದು ಸಾಹಿತಿ ಪ್ರೊ.ಮಾರುತಿ ಶಿಡ್ಲಾಪುರ ನುಡಿದರುಪಟ್ಟಣದ ಕಿತ್ತೂರ ರಾಣಿ ಚನ್ನಮ್ಮ ಸಮುದಾಯ ಭವನದಲ್ಲಿ ಭಾರತೀಯ ಸೃಜನಶೀಲ ಕನ್ನಡ ಸಾಹಿತ್ಯ ಬಳಗ ಆಯೋಜಿಸಿದ ಸಾಹಿತ್ಯ ಹುಣ್ಣಿಮೆ ಹಾಗೂ ಪ್ರೇಮ ಕವನಗಳ ಕವಿಗೋಷ್ಠಿಯ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಪ್ರೀತಿ ಪ್ರೇಮದ ಕವನ ಬರೆಯುವುದು ಅಪರಾಧ ಎಂದು ಬಿಂಬಿಸುವುದು ಬೇಡ. ಕವಿಯ ಭಾವನೆಗಳನ್ನು ಕೊಲ್ಲಬಾರದು. ಸೃಜನಶೀಲತೆಯನ್ನು ಪೋಷಿಸಬೇಕು.

        ನಿರ್ಮಲ ಮನಸ್ಸಿನಿಂದ ಸಮಾಜದ ಹಿತಕ್ಕೆ ಸಂತೊಷಕ್ಕೆ ಬರೆಯುವ ಸಾಹಿತಿಗಳನ್ನು ಬೆಂಬಲಿಸುವಂತಾಗಬೇಕು. ಆಪ್ತ ಬರಹಕ್ಕೆ ಸಹೃದಯರ ಸ್ವೀಕೃತಿಯೂ ಬೇಕು ಎಂದರು.ಸಾಹಿತ್ಯ ಹುಣ್ಣಿಮೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಾಹಿತಿ ಪ್ರಾಚಾರ್ಯ ಅನಿತಾ ಹೊಸಮನಿ, ಸಾಹಿತ್ಯ ಯಾರದೋ ಸ್ವತ್ತು ಎಂಬತೆ ಬಿಂಬಿಸುವುದು ಬೇಡ. ಎಲ್ಲರಲ್ಲೂ ಸಾಹಿತ್ಯಕ ಮನಸ್ಸಿರುತ್ತದೆ. ಅದಕ್ಕೆ ಬೆಂಬಲಿಸುವ ಮನಸ್ಸುಗಳೂ ಬೇಕು. ಸಾಹಿತ್ಯ ಚಟುವಟಿಕೆಗಳು ರಾಗ ದ್ವೇಷಗಳಿಲ್ಲದ ಪ್ರೀತಿ ವಿಶ್ವಾಸವನ್ನು ಮೂಡಿಸುವ ಶಕ್ತ ಸಂಘಟನೆಗಳಾಗಬೇಕು. ಯುವ ಕವಿಗಳನ್ನು ಬೆಂಬಲಿಸಿ ಪ್ರೋತ್ಸಾಹಿಸುವತ್ತ ಎಲ್ಲರ ಚಿತ್ತವಿದ್ದರೆ ಉಚಿತ ಎಂದರು.

          ಅಧ್ಯಕ್ಷತೆವಹಿಸಿ ಮಾತನಾಡಿದ ಭಾರತೀಯ ಸೃಜನಶೀಲ ಕನ್ನಡ ಸಾಹಿತ್ಯ ಬಳಗದ ಜಿಲ್ಲಾಧ್ಯಕ್ಷ ಸಂತೋಷ ಬಿದರಗಡ್ಡೆ ಮಾತನಾಡಿ, ಸಾಹಿತ್ಯ ಚಟುವಟಿಕೆಗಳು ನಮ್ಮ ಮನಸ್ಸನ್ನು ಆಹ್ಲಾದಗೊಳಿಸುತ್ತವೆ. ಸೃಜನಶೀಲ ಕನ್ನಡ ಸಾಹಿತ್ಯ ಬಳಗ ಹಾವೇರಿ ಜಿಲ್ಲೆಯಲ್ಲಿ ಯುವ ಬರಹಗಾರರನ್ನು ಪ್ರೋತ್ಸಾಹಿಸುತ್ತಿದೆ. ಪುಸ್ತಕ ಸಂಸ್ಕತಿಯನ್ನು ಬೆಳೆಸುತ್ತಿದೆ. ಯುವಕರಿಗೆ ವೇದಿಕೆಗಳನ್ನು ನೀಡುತ್ತಿದೆ. ಸಾಹಿತ್ಯ ಮನಸ್ಸುಗಳನ್ನು ಸಾಮಾಜಿಕ ಜವಾಬ್ದಾರಿಗಾಗಿ ಸಿದ್ದಗೊಳಿಸುತ್ತಿರುವುದು ನಮಗೆ ಸಮಾಧಾನ ತಂದಿದೆ ಎಂದ ಅವರು, ಹಾವೇರಿ ಜಿಲ್ಲೆಯ ಸಾಹಿತ್ಯ ಇತಿಹಾಸಕ್ಕೆ ಸೃಜನಶೀಲ ಕನ್ನಡ ಸಾಹಿತ್ಯ ಬಳಗದ ಸೇವೆ ಎಲ್ಲರಿಗೂ ಮೆಚ್ಚುಗೆಯಾಗಿದೆ ಎಂದರು.

        ಕವಿವೃಕ್ಷ ಬಳಗಾದ ತಾಲೂಕು ಘಟಕದ ಅಧ್ಯಕ್ಷ ಗಣೇಶ ಚಹ್ವಾಣ ಅತಿಥಿಗಳಾಗಿದ್ದರು. ಪಾರ್ವತಿಬಾಯಿ ಕಾಶೀಕರ (ನಲ್ಲೆ), ನಂದೀಶ ಲಮಾಣಿ (ಗೆಳತಿ), ಗಣೇಶ ಚಹ್ವಾಣ (ಗೆಳತಿ), ಮಹೇಶಕುಮಾರ ಹನಕರೆ (ಮಡದಿ), ಶಂಭುಲಿಂಗ ಹೀರೂರ (ಪ್ರೇಮ) ಸ್ವರಚಿತ ಕವಿತೆಗಳನ್ನು ವಾಚಿಸಿದರು. ದಮಯಂತಿ ದೇಶಪಾಂಡೆ, ಅನಿತಾ ಪರಾಂಡೆ, ವನಜಾಕ್ಷಿ ಕುಲಕರ್ಣಿ, ಮಾಧುರಿ ದೇಸಾಯಿ ಭಾವಗೀತೆಗಳನ್ನು ಹಾಡಿದರು.

         ಸೃಜನಶೀಲ ಕನ್ನಡ ಸಾಹಿತ್ಯ ಬಳಗದ ಜಿಲ್ಲಾ ಕಾರ್ಯದರ್ಶಿ ದಾವಲಮಲಿಕ್ ಇಂಗಳಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂತೋಷ ದೊಡ್ಡಮನಿ ಸ್ವಾಗತಿಸಿದರು. ಮಾರುತಿ ಕೊರಗರ ನಿರೂಪಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link