ರಾಣಿಬೆನ್ನೂರ:
ಇಲ್ಲಿನ ಸಿದ್ದೇಶ್ವರ ನಗರದ ಅಂಧರ ಜೀವ ಬೆಳಕು ಸಂಸ್ಥೆಯ ಮಕ್ಕಳು ಬೆಂಗಳೂರಿನಲ್ಲಿ ಐಡಿಯಲ್ ಫೌಂಡೇಶನ್ ವತಿಯಿಂದ ಇತ್ತೀಚಿಗೆ ಏರ್ಪಡಿಸಲಾಗಿದ್ದ 17 ವರ್ಷದೊಳಗಿನ ಮಹಿಳೆಯರ ರಾಜ್ಯ ಮಟ್ಟದ ಬ್ಲೈಂಡ್ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್‍ನಲ್ಲಿ ಸಮಗ್ರ ವೀರಾಗ್ರಣಿ ಪ್ರಶಸ್ತಿ ಗಳಿಸಿದ್ದಾರೆ.
ಲಕ್ಷ್ಮೀ ತಳವಾರ 800ಮೀ. ಓಟ, 400ಮೀ. ಓಟ, 200ಮೀ.ಓಟ ಪ್ರಥಮ, ಶಾಹಿನಾ 200ಮೀ. ಓಟ ದ್ವಿತೀಯ, ಜ್ಯೋತಿ ಹೊಸೂರ 200ಮೀ. ಓಟ ತೃತೀಯ, ಶಾಟ್‍ಪುಟ್‍ನಲ್ಲಿ ಜ್ಯೋತಿ ಹೊಸೂರ ಪ್ರಥಮ, ಲಕ್ಷ್ಮೀ ತಳವಾರ ದ್ವಿತೀಯ, ಸೌಮ್ಯ ತೃತೀಯ, ಡಿಸ್ಕಸ್ ಥ್ರೋ ಲಕ್ಷ್ಮೀ ತಳವಾರ ದ್ವಿತೀಯ, ಜ್ಯೋತಿ ಹೊಸೂರ ತೃತೀಯ ಸ್ಥಾನ ಗಳಿಸಿದ್ದಾರೆ. ಸಾಧನೆಗೈದ ಕ್ರೀಡಾಪಟುಗಳಿಗೆ ಸಂಸ್ಥೆಯ ನಾಗನಗೌಡ ಬೆಳ್ಳೊಳ್ಳಿ, ಎಂ.ಎಸ್.ಕ್ಷೇವಿಯರ್ ತರಬೇತಿ ನೀಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ