ಸಮನ್ವಯತೆಯಿಂದ ಕರ್ತವ್ಯ ನಿರ್ವಹಣೆಗೆ ಸಹಕರಿಸಿ

ಹಗರಿಬೊಮ್ಮನಹಳ್ಳಿ:

          ಲೋಕಸಭಾ ಚುನಾವಣೆ ನಿಮ್ಮಿತ್ತ ಕಂದಾಯ ಇಲಾಖೆಯ ಅಧಿಕಾರಿಗಳು, ನಮ್ಮ ಪೊಲೀಸ್ ಅಧಿಕಾರಿಗಳೊಂದಿಗೆ ಕರ್ತವ್ಯ ನಿರ್ವಹಣೆಯಲ್ಲಿ ಸಮಾನತೆ ಕಾಪಾಡಬೇಕೆಂದು ಪೊಲೀಸ್ ಸೆಕ್ಟರ್ ಅಧಿಕಾರಿ ಸಿಪಿಐ ರಾಜೇಶ್ ತಿಳಿಸಿದರು.

         ಪಟ್ಟಣದ ತಾ.ಪಂ.ಸಭಾಂಗಣದಲ್ಲಿ ಜರುಗಿದ ಚುನಾವಣಾಧಿಕಾರಿಗಳ ಸಮನ್ವಯತೆಯ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಕಳೆದ ಎಲ್ಲಾ ಚುನಾವಣೆಗಳಲ್ಲಿ ಬಹುತೇಕ ಪೊಲೀಸ್ ಅಧಿಕಾರಿಳ ಸೆಕ್ಟರ್ ಬೇರೆ, ಕಂದಾಯ ಇಲಾಖೆಯ ಸೆಕ್ಟರ್ ಬೇರೆಯಾಗಿ ಕರ್ತವ್ಯ ನಿರ್ವಹಿಸಲಾಗುತ್ತಿತ್ತು.

          ಆದರೆ, ಕನೂನು ಸುವೆವಸ್ಥೆಯ ಹಿನ್ನೆಲೆಯಲ್ಲಿ ಅಧಿಕಾರಿಗಳೆಲ್ಲ ಸಮನ್ವಯತೆಯಿಂದ ಕರ್ತವ್ಯ ನಿರ್ವಹಿಸಿದರೆ ಮಾಹಿತಿ ಸಂಗ್ರಹಣೆಗೆ ಸುಲಭವಾಗುತ್ತೆ ಎನ್ನುವ ಹಿನ್ನೆಲೆಯಲ್ಲಿ ಈ ರೀತಿಯ ಕರ್ತವ್ಯ ನಿರ್ವಹಣೆಗೆ ಚುನಾವಣಾಧಿಕಾರಿಗಳು ಆದೇಶ ನೀಡಿದ್ದಾರೆ ಎಂದರು. ಈಗ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 23ಕಡೆಗಳಲ್ಲಿ ಸೆಕ್ಟರ್‍ಗಳ ಕರ್ತವ್ಯಗಳಿಗೆ ಶೆಡ್‍ಗಳು ನಿರ್ಮಾಣವಾಗಿದ್ದು, ಇದಕ್ಕೆ ಅಧಿಕಾರಿಗಳು ಹಾಗೂ ಸಹಾಯಕ ಅಧಿಕಾರಿಗಳ ಸಹಕಾರ ಅಗತ್ಯವೆಂದರು.

          ಚುನಾವಣೆ ನೋಡಲ್ ಅಧಿಕಾರಿಯಾದ ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿ ಎನ್.ರಾಜಪ್ಪ ಮಾತನಾಡಿ, ಚುನಾವಣೆ ಸುರಕ್ಷಿತವಾಗಿ ಮತ್ತು ಶಾಂತವಾಗಿ ನಡೆಯಲು ಎಲ್ಲಾ ತಯಾರಿ ನಡೆಯಬೇಕು. ಅಧಿಕಾರಿಗಳು ಒಬ್ಬರಿಗೊಬ್ಬರು ಅನುಕೂಲತೆ ಮತ್ತು ಅನಾನುಕೂಲತೆಗಳ ಬಗ್ಗೆ ಚರ್ಚೆಮಾಡಿ ಕ್ರಮ ಕೈಗೊಳ್ಳಬೇಕು. ಚೆಕ್‍ಪೋಸ್ಟ್‍ಗಳು ಸೇರೆ ಎಲ್ಲಾ ಕಡೆ ಕಾನೂನು ಸುವೆವಸ್ಥೆಯನ್ನು ಕಾಪಾಡುವಂತೆ ತಿಳಿಸಿದ ಅವರು, ಇದಕ್ಕೆ ಎಲ್ಲಾ ಅಧಿಕಾರಿಗಳು ಚುನಾವಣೆ ನಿರ್ವಹಣೆಗೆ ತಯಾರಾಗಿರಬೇಕು ಎಂದರು.ಈ ಸಂದರ್ಭದಲ್ಲಿ ತಹಸಿಲ್ದಾರ್ ಸಂತೋಷ್‍ಕುಮಾರ್, ತಾ.ಪಂ.ಇಒ ಮಲ್ಲಾನಾಯ್ಕ ಸೇರಿದಂತೆ ರೆವೆನ್ಯೂ ಅಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link