ಹೊಸಪೇಟೆ:
ಹೊಸಪೇಟೆಯಲ್ಲಿ ಮಾ. 27 ರಂದು ಸರ್ವಧರ್ಮ ಸಮನ್ವಯ ರಥೋತ್ಸವ, ವಿಶ್ವಧರ್ಮ ದರ್ಶನ ಪ್ರವಚನಮಂಗಲಮಹೋತ್ಸವ, 1111 ಮುತ್ತೈದೆಯರಿಗೆ ಉಡಿತುಂಬುವ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಹಂಪಿಹೇಮಕೂಟ ಶೂನ್ಯಸಿಂಹಾಸನಾಧೀಶ್ವರ ಡಾ.ಸಂಗನಬಸವ ಸ್ವಾಮೀಜಿ ತಿಳಿಸಿದರುನಗರದ ಕೊಟ್ಟೂರು ಸ್ವಾಮಿ ಮಠದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಇಂದು ಮಾತನಾಡಿದರು.
ಎಲ್ಲ ಧರ್ಮಗಳ ಅನುಯಾಯಿಗಳಲ್ಲಿ ಸಾಮರಸ್ಯ ಹಾಗೂ ಸದ್ಭಾವನೆ ಬೆಳೆಯಲೆಂದು ಮತ್ತು ದೇಶದಲ್ಲಿ ಯೇ ವಿನೂತನವಾಗಿ ಈ ಸರ್ವಧರ್ಮ ರಥೋತ್ಸವ ನಡೆಸಲಾಗುತ್ತಿದ್ದು ಇದು ಎರಡನೇ ವರ್ಷ ಆಚರಣೆಯಾಗಿದೆ ಎಂದು ಹೇಳಿದರು.
ಮಾ. 27 ರಂದು ಬೆಳಗ್ಗೆ 10 ಕ್ಕೆ 1111 ಮುತ್ತೈದೆಯರಿಗೆ ಉಡಿತುಂಬುವ ಸಮಾರಂಭ ನಡೆಯಲಿದೆ. ಸಮಾರಂಭದಲ್ಲಿ ಶ್ರೀಸಿದ್ಧಲಿಂಗ ಸ್ವಾಮೀಜಿ ಸನ್ನಿಧ್ಯವಹಿಸಲಿದ್ದಾರೆ. ಶ್ರೀಶಾಂತಮಲ್ಲ ಸ್ವಾಮೀಜಿ ನೇತೃತ್ವವಹಿಸಲಿದ್ದಾರೆ. ಶ್ರೀಮರಿಮಹಾಂತ ಸ್ವಾಮೀಜಿ, ಶ್ರೀಗುರುಬಸವ ಸ್ವಾಮೀಜಿ ಸೇರಿದಂತೆ ಹಲವು ಮಠದ ಸ್ವಾಮೀಜಿಗಳು ಹಾಗೂ ಸಮಾಜದ ಗಣ್ಯರು ಭಾಗವಹಿಸಿದ್ದಾರೆ ಎಂದರು.
ಸಂಜೆ 5 ಕ್ಕೆ ಸರ್ವಧರ್ಮ ಸಮನ್ವಯ ರಥೋತ್ಸವ, ವಿಶ್ವಧರ್ಮ ದರ್ಶನ ಪ್ರವಚನ ಮಂಗಲ ಮಹೋತ್ಸವ ನಡೆಯಲಿದೆ. ಮೈಸೂರು ಸುತ್ತೂರು ಸಂಸ್ಥಾನ ಮಠದ ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸನ್ನಿಧ್ಯಾವಹಿಸಲಿದ್ದಾರೆ. ಸರ್ವ ಧರ್ಮ ರಥದಲ್ಲಿ ಹಿಂದೂ, ಮುಸ್ಲಿಂ, ಜೈನ್, ಕ್ರಿಶ್ಚಿಯನ್ ಸೇರಿದಂತೆ ನಾನಾ ಧರ್ಮಗಳ ಪವಿತ್ರಗಳನ್ನು ಇರಿಸಿ ಎಳೆಯಲಾಗುವುದು. ರಥೋತ್ಸವ ಸಮಾರಂಭದಲ್ಲಿ ಹಲವು ಮಠಾಧೀಶರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಬಾಲೆ ಹೊಸೂರು ದಿಂಗಾಲೇಶ್ವರ ಮಠದ ಶ್ರೀ ದಿಂಗಾಲೇಶ್ವರ ಸ್ವಾಮೀಜಿ ಇಂದು ಸರ್ವಧರ್ಮಗಳ ಸಮನ್ವಯದ ಅವಶ್ಯಕತೆ ಕುರಿತು ಉಪನ್ಯಾಸ ನೀಡಲಿದ್ದಾರೆ. ಇಲಕಲ್ಲ ಅನ್ನದಾನ ಶಾಸ್ತ್ರಿಗಳು ಹಿರೇಮಠ ವಿಶ್ವಧರ್ಮ ದರ್ಶನ ಪ್ರವಚನ ಮಂಗಲ ಮಹೋತ್ಸ ನಡೆಸಿಕೊಡಲಿದ್ದಾರೆ. ಸಂಗಮೇಶ ಗವಾಯಿಗಳು ಸಂಗೀತ ನಡೆಸಿಕೊಡಲಿದ್ದು ಮಹಾಂತೇಶ್ ಕಾಳಗಿ ತಬಲಾ ಸಾಥ್ ನೀಡಲಿದ್ದಾರೆ ಎಂದು ಹೇಳಿದರು.
ನಿವೃತ್ತ ಐಪಿಎಸ್ ಅಧಿಕಾರಿ ಶಂಕರ ಬಿದರಿ, ಕನ್ನಡ ಹಂಪಿ ವಿವಿ ಕುಲಪತಿ ಡಾ.ರಮೇಶ್, ವೀರಶೈವ ಮಹಾಸಭಾ ರಾಜ್ಯಾಧ್ಯಕ್ಷ ತಿಪ್ಪಣ್ಣರವರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ಗೋಷ್ಠಿಯಲ್ಲಿ ಸಾಲಿಸಿದ್ಧಯ್ಯ ಸ್ವಾಮಿ, ಶರಣಯ್ಯ ಹಿರೇಮಠ ಮುಂತಾದವರು ಇದ್ದರು.