ಸಾವಯವ ಕೀಟನಾಶಕ ಮಳಿಗೆ ಉದ್ಘಾಟನೆ

ಗುಬ್ಬಿ

        ರೈತರ ಅನುಕೂಲಕ್ಕಾಗಿ ಸಾವಯವ ಕೀಟನಾಶಕ ಮತ್ತು ಗೊಬ್ಬರಗಳನ್ನು ಮಾರಾಟ ಮಾಡಲಾಗುತ್ತದೆ. ಇದರ ಉಪಯೋಗವನ್ನು ತಾಲ್ಲೂಕಿನ ರೈತರು ಪಡೆದುಕೊಂಡು ಕೃಷಿಯಲ್ಲಿ ಖರ್ಚನ್ನು ಕಡಿಮೆ ಮಾಡಿಕೊಳ್ಳಿ ಎಂದು ಗುಬ್ಬಿ ಚನ್ನಬಸವೇಶ್ವರ ರೈತ ಉತ್ಪಾದಕರ ಕಂಪನಿಯ ಅಧ್ಯಕ್ಷ ಯತೀಶ್‍ಕುಮಾರ್ ತಿಳಿಸಿದರು.

         ಪಟ್ಟಣದ ರೈಲ್ವೆ ಸ್ಟೇಷನ್ ಸಮೀಪ ಸುಜೀವನ ಸೇವಾ ಕೇಂದ್ರ ಮಳಿಗೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ರೈತ ಉತ್ಪಾದಕರ ಕಂಪನಿಯ ವತಿಯಿಂದ ಸ್ಥಳೀಯ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಜಾನುವಾರುಗಳಿಗೆ ನಾನಾ ರೀತಿಯ ಪಶು ಆಹಾರ, ಬೆಳೆಗಳಿಗೆ ಜೈವಿಕ ಗೊಬ್ಬರ, ಜೈವಿಕ ಪೀಡೆನಾಶಕಗಳು, ಬೆಳೆನಾಶಕಗಳು, ಟಾರ್ಪಾಲಿನ್‍ಗಳು, ಸ್ಪ್ರೇಯರ್‍ಗಳು, ಕಳೆಯನ್ನು ತೆಗೆಯುವ ಯಂತ್ರಗಳು, ದೇಶೀಯ ಸಾವಯವ ಉತ್ಪನ್ನಗಳು ಇನ್ನೂ ಮುಂತಾದ ವಸ್ತುಗಳನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತದೆ. ರೈತರು ಮತ್ತು ಷೇರುದಾರರು ಇದರ ಉಪಯೋಗವನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು.

         ಕಾರ್ಯಕ್ರಮ ಸಂಯೋಜಕ ಮು.ಲ.ಕೆಂಪೇಗೌಡ ಮಾತನಾಡಿ, ಈ ಸೇವಾ ಕೇಂದ್ರದಲ್ಲಿ ನಗರದ ಮತ್ತು ಗ್ರಾಮೀಣ ಪ್ರದೇಶದ ಸಾರ್ವಜನಿಕರು ಬ್ಯಾಂಕಿಗ್ ಸೌಲಭ್ಯವನ್ನು ಪಡೆದುಕೊಳ್ಳಬಹುದು. ಎಟಿಎಂ ಮತ್ತು ಆಧಾರ್ ಮೂಲಕವು ಇಲ್ಲಿ ವ್ಯವಹಾರ ಮಾಡಬಹುದು ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಸಾವಯವ ರೈತ ಅಮ್ಮನಘಟ್ಟ ಮಹೇಶ್, ಗುಬ್ಬಿ ಚನ್ನಬಸವೇಶ್ವರ ಕಂಪನಿಯ ನಿರ್ದೇಶಕರಾದ ಶಿವಶಂಕರ್, ಮಹಾಲಿಂಗಯ್ಯ, ಗುರುಪ್ರಸಾದ್, ಈರಣ್ಣ, ತಮ್ಮಣ್ಣ, ಗಂಗಾಧರಯ್ಯ, ನಾಗರಾಜು, ಕಾರ್ಯಕ್ರಮ ಸಂಯೋಜಕರಾದ ಸಂಗಪ್ಪ,

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap