ಹರಳಕೊಪ್ಪ: ಸ.ಕಿ.ಪ್ರಾ.ಶಾಲೆಗೆ ಸ್ಪೀಕರ್ ಕೊಡುಗೆ ನೀಡಿದ ಎಸ್ ಡಿ ಎಂ ಸಿ ಅಧ್ಯಕ್ಷರು

ಹಾನಗಲ್  :

    ತಾಲ್ಲೂಕಿನ ಅಕ್ಕಿಆಲೂರ- ಸಮೀಪದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಹರಳಕೊಪ್ಪ ಶಾಲೆಗೆ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರಾದ ಶಿದ್ಧಲಿಂಗಪ್ಪ.ಈರಪ್ಪ.ಕಲ್ಮಟ್ಲ ಹಾಗೂ ಶೇಖಪ್ಪ.ಮಲ್ಲಪ್ಪ.ಕಲ್ಮಟ್ಲ ಇಬ್ಬರೂ ಸೇರಿ 6500 ರೂ ಮೌಲ್ಯದ ಸ್ಪೀಕರ್ ಅನ್ನು ಕೊಡುಗೆಯಾಗಿ ನೀಡಿದರು.

    ನಂತರ ಮಾತನಾಡಿದ ಅವರು ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳ ಬೆಳವಣಿಗೆಗೆ ಕಲಿಕೆಗೆ ಪೂರಕವಾದ ಇಂತಹ ಸಾಮಗ್ರಿಗಳನ್ನು ಊರಿನ ಶಿಕ್ಷಣ ಪ್ರೇಮಿಗಳು ನೀಡುವುದರ ಮೂಲಕ ಸಮುದಾಯದವರು ಸರಕಾರಿ ಶಾಲೆಗಳ ಸಬಲೀಕರಣ ಮಾಡುವುದು ಇಂದು ಅವಶ್ಯವಿದೆ ಎಂದರು.

    ಶೇಖಪ್ಪ ಕಲ್ಮಟ್ಲ ಮಾತನಾಡಿ ಈ ಶಾಲೆಯಲ್ಲಿ ನಮ್ಮ ಮಕ್ಕಳು ಗುಣಾತ್ಮಕ ಶಿಕ್ಷಣವನ್ನು ಪಡೆಯುತ್ತಿದ್ದಾರೆ ಇಲ್ಲಿನ ಶಿಕ್ಷಕ ಸಿಬ್ಬಂದಿ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸುತ್ತಿದ್ದಾರೆ ಇವರ ಮಕ್ಕಳ ಮೇಲಿನ ಕಾಳಜಿಗೆ ಮನಸೋತು ನಾನು ನನ್ನ ಕೈಲಾದ ಸಹಾಯ ಮಾಡಿದ್ದು ಸಂತೋಷ ನೀಡಿದೆ ಎಂದರು

     ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಗುರುಮಾತೆ ಶ್ರೀಮತಿ ಪವಿತ್ರ ಸಹ ಶಿಕ್ಷಕರಾದ ನಿಂಗಪ್ಪ ಸಾಳಂಕಿ ಊರಿನ ಪ್ರಮುಖರಾದ ಶಿವಪುತ್ರಪ್ಪ ಹೊಸಮನಿ, ಶೇಖಪ್ಪ ಕಲ್ಮಟ್ಲ, ಶಂಭಣ್ಣ ಹೊಸಮನಿ, ರಾಜಣ್ಣ ಹೊಸಮನಿ,ರಮೇಶ ಅಡಗುಂಟಿ, ಚನ್ನಬಸಪ್ಪ ಹೊಸಮನಿ, ಬಸವಣ್ಯಪ್ಪ ಹೊಸಮನಿ, ನಾಗಪ್ಪ ಕಲ್ಮಟ್ಲ,ನಾಗರಾಜ ಗುಡ್ಡದವರ,ಜಗದೀಶ ಹೊಸಮನಿ,ಕುಮಾರ್ ಕಲ್ಮಟ್ಲ,ಪರಶುರಾಮ ಅಡಗುಂಟಿ ,ಮಂಜಣ್ಣ ಹೊಸಮನಿ, ಜಯಮ್ಮ ಹೊಸಮನಿ, ಶಾಲೆಯ ಹಳೆಯ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link