ಬಳ್ಳಾರಿ
ರಂಗಭೂಮಿಯಲ್ಲಿ ಕೇವಲ ಒಂದು ಪಾತ್ರಕ್ಕೆ ಸೀಮಿತವಾಗದೇ ಹಲವಾರು ವಿಭಿನ್ನ ಪಾತ್ರಗಳಿಗೆ ನಟಿಸಿ, ಆ ಪಾತ್ರಗಳಿಗೆ ಜೀವ ತುಂಬಿದ ಕಲಾವಿದೆ ಪದ್ಮಾ ಕೂಡ್ಲಿಗಿ ಅವರು ಎಂದು ಹಿರಿಯ ರಂಗಭೂಮಿ ಕಲಾವಿದೆ ನಾಡೋಜ ಡಾ.ಸುಭದ್ರಮ್ಮ ಮನ್ಸೂರ್ ಅವರು ಹೇಳಿದರು.
ನಗರದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಮಂಗಳವಾರರಂದು ಹಮ್ಮಿಕೊಂಡಿದ್ದ, ಶ್ರೀಮತಿ ಪಿ.ಪದ್ಮಾ ಕೂಡ್ಲಿಗಿ ಅವರ ಜೀವನ ಸಾಧನೆ ಕುರಿತು ವಿಚಾರ ಸಂಕಿರಣ ಹಾಗೂ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪಿ.ಪದ್ಮಾ ಅವರು ಸಾಮಾಜಿಕ, ಪೌರಾಣಿಕ, ಇತಿಹಾಸ ಹಾಗೂ ಇತರೆ ವಿಭಾಗದಲ್ಲಿ ಪರಕಾಯ ಪ್ರವೇಶ ಮಾಡಿ, ನಟನೆ ಮಾಡಿದವರು. ಇಂದಿನ ಯುವಜನತೆ ಕೇವಲ ವಿದ್ಯಾಭ್ಯಾಸ ಅಲ್ಲದೇ ರಂಗಭೂಮಿ, ಸಾಹಿತ್ಯ ಕ್ಷೇತ್ರದಲ್ಲಿ ಸಹ ಮುಂದಾಗಬೇಕು ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಸಿದ್ದರಾಮ ಕಲ್ಮಠ ಅವರು ಮಾತನಾಡಿ, ರಂಗಭೂಮಿಯು ಸಮಾಜಕ್ಕೆ ಮಾರ್ಗದರ್ಶನ ನೀಡುವ ಪಾಠ. ಒಂದಲ್ಲಾ ಒಂದೂ ರೀತಿಯಲ್ಲಿ ಸಮಾಜಕ್ಕೆ ಮಾರ್ಗದರ್ಶನ ಹಾಗೂ ಬದುಕಿಗೆ ಮಾರ್ಗದರ್ಶನ ನೀಡುತ್ತದೆ ಎಂದರು.
ಆರೋಗ್ಯವಂತ ಸಮಾಜ ನಿರ್ಮಾಣದಲ್ಲಿ ಸಾಹಿತಿಗಳು ಮತ್ತು ಕಲಾವಿದರ ಪಾತ್ರ ಅತ್ಯಂತ ಪ್ರಮುಖವಾಗಿದ್ದು,ನಾಡಿನ ಸಂಸ್ಕತಿಯನ್ನು ರಕ್ಷಿಸುವಲ್ಲಿ ಇವರ ಪಾತ್ರ ಗಣನೀಯವಾಗಿದೆ ಎಂದರು.ಈ ಸಂದರ್ಭದಲ್ಲಿ ಸರ್ಕಾರಿ ಬಾಲಕಿಯ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಕೆ.ಎಂ.ಮಹಾಲಿಂಗನಗೌಡ ಅವರು ಮಾತನಾಡಿದರು.ಹಿರಿಯ ರಂಗಭೂಮಿ ಮತ್ತು ತೊಗಲುಗೊಂಬೆ ಕಲಾವಿದರಾದ ನಾಡೋಜ ಬೆಳಗಲ್ ವೀರಣ್ಣ ಅವರು ಅಧ್ಯಕ್ಷತೆ ವಹಿಸಿದ್ದರು.
ಜೀವನ ಮತ್ತು ಸಾಧನೆಯ ವಿಷಯದ ಕುರಿತು ಹಗರಿಬೊಮ್ಮನಹಳ್ಳಿಯ ಎ.ವಿರುಪಾಕ್ಷರಾವ್ ಮೊರಗೇರಿ ಮತ್ತು ರಂಗಭೂಮಿ ಕ್ಷೇತ್ರದ ಕೊಡುಗೆಗಳ ವಿಷಯ ಕುರಿತು ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಕೆ.ಬಿ.ಸಿದ್ದಲಿಂಗಪ್ಪ ಅವರು ವಿಚಾರ ಸಂಕಿರಣ ನಡೆಸಿದರು. ರಮೇಶ ಗೌಡ ಪಾಟೀಲ್, ಎ.ವರಲಕ್ಷ್ಮೀ, ಎನ್.ಡಿ.ವೆಂಕಮ್ಮ, ಎಂ.ಅಹಿರಾಜ್ ಮತ್ತು ಅಣ್ಣಾಜಿ ಕೃಷ್ಣಾರೆಡ್ಡಿ ಅವರು ಸಂವಾದದಲ್ಲಿ ಪಾಲ್ಗೊಂಡಿದ್ದರು.
ಕನ್ನಡ ಮತ್ತು ಸಂಸ್ಕತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ ಅವರು ಪ್ರಾಸ್ತಾವಿಕ ಮಾತನಾಡಿದರು.
ಈ ಸಂದರ್ಭದಲ್ಲಿ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷೆ ಶ್ರೀದೇವಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಿಬ್ಬಂದಿ ವರ್ಗದವರು ಸೇರಿದಂತೆ ಶಿಕ್ಷಕರು, ಶಾಲಾ ಮಕ್ಕಳು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
