ಮೂರುವರೆ ವರ್ಷದ ಗಂಡು ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ

0
26

ಬೆಂಗಳೂರು

      ನಗರದಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಮುಂದುವರೆದಿದ್ದು ಮೂರುವರೆ ವರ್ಷದ ಗಂಡು ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಪರಾರಿಯಾಗುತ್ತಿದ್ದ ಕಾಮುಕನನ್ನು ಸಾರ್ವಜನಿಕರೇ ಹಿಡಿದು ಥಳಿಸಿ ಮಾರತ್‍ಹಳ್ಳಿ ಪೊಲೀಸರಿಗೆ ಒಪ್ಪಿಸಿದ್ದಾರೆ.

      ಸಾರ್ವಜನಿಕರು ಹಿಡಿದುಕೊಟ್ಟ ತಮಿಳುನಾಡು ಮೂಲದ ಮಾರತ್‍ಹಳ್ಳಿಯ ಚಂದ್ರಬಾಬು (52)ನನ್ನು ಬಂಧಿಸಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.ವೆಲ್ಡಿಂಗ್ ಕೆಲಸ ಮಾಡುತ್ತಿದ್ದ ಚಂದ್ರಬಾಬು ಮಾರತ್‍ಹಳ್ಳಿಯ ದೇವರಬೀಸನಹಳ್ಳಿ ಬಳಿ ಶೆಡ್‍ನಲ್ಲಿ ಓಂಟಿಯಾಗಿ ವಾಸಿಸುತ್ತಿದ್ದ ಪಕ್ಕದ ಮನೆಯಲ್ಲಿಯೇ ಮನೆಗೆಲಸ ಮಾಡುತ್ತಿದ್ದ ದಂಪತಿ ವಾಸಿಸುತ್ತಿದ್ದರು. ದಂಪತಿಗೆ ಮೂರುವರೆ ವರ್ಷದ ಗಂಡು ಮಗುವಿದೆ ಮಧ್ಯಾಹ್ನ ಮಗುವನ್ನು ಮನೆಯಲ್ಲೇ ಬಿಟ್ಟು ದಂಪತಿ ಮನೆ ಕೆಲಸಕ್ಕೆ ತೆರಳಿದ್ದರು.

       ಶೆಡ್‍ನಲ್ಲಿದ್ದ ಆರೋಪಿ ಚಂದ್ರಬಾಬು ಮನೆ ಪಕ್ಕದಲ್ಲಿ ಆಟವಾಡುತ್ತಿದ್ದ ಮೂರೂವರೆ ವರ್ಷದ ಮಗುವನ್ನು ಗಮನಿಸಿದ್ದ. ಆ ಮಗುವನ್ನು ಮನೆಗೆ ಕರೆ ತಂದು ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಇದಾದ ಬಳಿಕ ಮಗು ಚಂದ್ರಬಾಬು ಮನೆಯಿಂದ ಅಳುತ್ತಾ ಬರುತ್ತಿರುವುದನ್ನು ಕಂಡ ಸ್ಥಳೀಯರು ಈ ಬಗ್ಗೆ ಮಗುವಿನ ಬಳಿ ಪ್ರಶ್ನಿಸಿದಾಗ ಮಗು ನಡೆದ ಕೃತ್ಯವನ್ನು ಹೇಳಿದೆ.ಸಾರ್ವಜನಿಕರೇ ಆರೋಪಿಯನ್ನು ಹಿಡಿದು ಆತನಿಗೆ ಥಳಿಸಿ ಪೊಲೀಸರಿಗೊಪ್ಪಿಸಿದ್ದಾರೆ.ಚಂದ್ರಬಾಬು ಪತ್ನಿ ಮತ್ತು ಮೂವರು ಮಕ್ಕಳು ತಮಿಳುನಾಡಿನಲ್ಲಿದ್ದಾರೆ ಮಾರತ್‍ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

LEAVE A REPLY

Please enter your comment!
Please enter your name here