ಎಸ್‍ಎಫ್‍ಐ ಕೆಎಸ್‍ಆರ್‍ಟಿಸಿ ಘಟಕದ ವ್ಯವಸ್ಥಾಪಕರಿಗೆ ಮನವಿ

ಹಾವೇರಿ :

          ನಗರದ ಅಕ್ಕಮಹಾದೇವಿ ಸರ್ಕಲ ಮತ್ತು ರೈಲ್ವೆ ಸ್ಟೆಷನ್ ಹತ್ತಿರ ಸರ್ಕಾರಿ ಬಸ್ ನಿಲ್ಲಿಸುವಂತೆ ಹಾಗೂ ನಗರ ಸಂಚಾರ ಬಸ್ಸ್ ಕಲ್ಪಿಸುವಂತೆ ನಗರದ ಬಸ್ಟ್ಯಾಂಡ ಒಳಗಡೆ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‍ಎಫ್‍ಐ)ಜಿಲ್ಲಾ ಸಮಿತಿ ನೇತೃತ್ವದಲ್ಲಿ ವಿದ್ಯಾರ್ಥಿಗಳೊಂದಿಗೆ ಪ್ರತಿಭಟನೆ ಮಾಡಿ ಕೆಎಸ್‍ಆರ್‍ಟಿಸಿ ಘಟಕದ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಲಾಯಿತು.

            ಎಸ್‍ಎಫ್‍ಐ ಜಿಲ್ಲಾ ಸಹಕಾರ್ಯದರ್ಶಿ ಬಸವರಾಜ ಭೋವಿ ಮಾತನಾಡಿ ನಗರದ ಬಹುದೂರಗಳ ಅಂತರ ಕಾಲೇಜುಗಳು ಇದ್ದು, ವಿದ್ಯಾರ್ಥಿಗಳು ಬಸ್ಸಿಗಾಗಿ ಪರದಾಡುವಂತಾಗಿದೆ.

         ಬಸ್ಸುಗಳು ಇದ್ದರು ನಿಲ್ಲಿಸುವಲ್ಲಿ ತಾರತಮ್ಯ ಮಾಡುತ್ತಾರೆ.ಇಂಹತ ಸನ್ನಿವೇಶದಿಂದ ವಿದ್ಯಾರ್ಥಿಗಳ ಕಲಿಕೆಯ ಮೇಲೆ ವ್ಯತರಿಕ್ತ ಪರಿಣಾಮ ಬೀರುತ್ತಿದೆ ಮತ್ತು ವಿದ್ಯಾರ್ಥಿಗಳ ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ನಗರ ಸಂಚಾರ ಬಸ್ಸುಗಳನ್ನು ಬಿಡುವಂತೆ ಕೆಎಸ್‍ಆರ್‍ಟಿಸಿ ಘಟಕದ ಮುಖ್ಯಸ್ಥರು ವಿದ್ಯಾರ್ಥಿಗಳ ಹಾಗೂ ಸಾರ್ವಜನಿಕರ ಸಮಸ್ಯೆಗಳ ಬಗ್ಗೆ ಎಚ್ಚತ್ತುಗೊಂಡು ಸೂಕ್ತ ರೀತಿಯ ಬಸ್ಸ ಸಂಚಾರ ಮಾಡುವಂತೆ ನಿಗಾವಹಿಸಿ

          ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಮಾಡಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಎಸ್ ಎಫ್ ಐ ಮುಖಂಡರಾದ ಮೋಹನ್ ಆರ್ ಬಿ. ಹನುಮಂತಗೌಡ.ವಿನಾಯಕ ಕಳಸೂರ.ದೀಕ್ಷಿತಾ ಕಚವಿ.ರಘುವೀರ. ಚಂದ್ರು ಆರ್.ಹಜರತಲಿ.ಕಿರಣ ಗೊಲ್ಲರ . ಸಿದ್ದನಗೌಡ ಕ್ಯಲಕೊಂಡ. ಮುಬಾರಕಅಲಿ ಸೇರಿದಂತೆ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link