ಶಕ್ತಿ ಕೇಂದ್ರದ ಕಾರ್ಯಕರ್ತರ ಸಭೆ…!!!

ಹಾನಗಲ್ಲ :

         ದೇಶದ ಕಟ್ಟಕಡೆ ವ್ಯಕ್ತಿಗೂ ಸರಕಾರದ ಯೋಜನೆ ತಲುಪಬೇಕೆಂಬ ದೂರದೃಷ್ಟಿಯುಳ್ಳ ಹಾಗೂ ನವಭಾರತ ನಿರ್ಮಾಣದ ಕನಸನ್ನು ಅಜೆಂಡಾವಾಗಿಸಿಕೊಂಡ ಹೊತ್ತ ಪ್ರಧಾನಿ ನರೇಂದ್ರ ಮೋದಿ ಒಂದು ಕಡೆ, ಯಾವುದೇ ದೂರದೃಷ್ಟಿಯಿಲ್ಲದೆ ಕೇವಲ ನರೇಂದ್ರ ಮೋದೊ ಅವರನ್ನು ಸೋಲಿಸುವುದೇ ತಮ್ಮ ಅಜೆಂಡಾ ಮಾಡಿಕೊಂಡಿರುವ ಘಟಬಂಧನ ಒಂದುಕಡೆ. ಭಾರತದ ಭವಿಷ್ಯ ನಿರ್ಮಾಣಕ್ಕೆ ಯಾರನ್ನು ಆಯ್ಕೆ ಮಾಡಬೇಕು ಎಂಬುದನ್ನು ಮತದಾರ ನಿರ್ಧರಿಸಿದ್ದು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರ ಆಡಳಿತದ ಚುಕ್ಕಾಣಿ ಹಿಡಿಯಲಿದೆ ಎಂದು ಸಂಸದ ಶಿವಕುಮಾರ ಉದಾಸಿ ವಿಶ್ವಶ ವ್ಯಕ್ತಪಡಿಸಿದರು.

         ಸೋಮವಾರ ತಾಲೂಕಿನ ಬೊಮ್ಮನಹಳ್ಳಿ ಜಿಪಂ ಶಕ್ತಿ ಕೇಂದ್ರದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು, ದೇಶದ 23 ಕೋಟಿಗೂ ಅಧಿಕ ಜನತೆ ಕೇಂದ್ರ ಸರಕಾರದ ಒಂದಿಲ್ಲೊಂದು ಯೋಜನೆಗಳ ಲಾಭ ಪಡೆದಿವೆ. ವಿಶ್ವದಲ್ಲೆ ಪ್ರಥಮ ಬಾರಿಗೆ ಆಯುಷ್ಮಾನಭಾರತ ಯೋಜನೆಯಡಿ 50ಕೋಟಿ ಜನತೆಗೆ ಒಂದು ನಯಾಪೈಸೆ ಇಲ್ಲದೆ ಹೆಲ್ತ ಇನ್ಸೂರೆನ್ಸ ಮಾಡಿಸಿದ ಖ್ಯಾತಿ ನರೇಂದ್ರ ಮೋದಿಯವರದ್ದಾಗಿದೆ.

          ಬಡವರ, ದೀನದಲಿತರ, ರೈತರ ಉದ್ಧಾರಕ್ಕಾಗಿ ಹತ್ತು ಹಲವು ಯೋಜನೆಗಳನ್ನು ನರೇಂದ್ರ ಮೋದಿ ಜಾರಿಗೆ ತಂದಿದ್ದಾರೆ. ದೇಶದ 1.80 ಲಕ್ಷ ಜನತೆಗೆ ಉಚಿತ ಅಡುಗೆ ಅನೀಲ ನೀಡಿ ಮಹಿಳೆಯರ ಆರೋಗ್ಯ ಕಾಪಾಡಿದ್ದಾರೆ. ಬಡವರ, ದೀನದಲಿತರ, ರೈತರ ಪರ ಯೊಜನೆಗಳನ್ನು ಜಾರಿಗೆ ತರುವುದಷ್ಟ ಅಲ್ಲ ಅದನ್ನು ಸಮರ್ಪಕವಾಗಿ ಅನುಷ್ಟಾನಗೊಳಿಸುವ ಬದ್ಧತೆ ನರೇಂದ್ರ ಮೋದಿ ತೋರಿದ್ದಾರೆ. 55 ವರ್ಷದಲ್ಲಿ ಮಾಡಲಾಗದ ಕಾರ್ಯವನ್ನು ಕೇವಲ 55 ತಿಂಗಳಿನಲ್ಲಿ ನರೇಂದ್ರ ಮೋದಿ ಮಾಡಿ ತೋರಿಸಿದ್ದಾರೆ ಎಂದ ಅವರು, ಪ್ರತಿಯೊಬ್ಬರ ಮತವು ಅಮೂಲ್ಯವಾಗಿದ್ದು, ನಿಮ್ಮ ಒಂದು ಮತ ದೇಶದ ಭವಿಷ್ಯವನ್ನು ಬದಲಾಯಿಸಬಲ್ಲದು. ದೇಶದ ಹಿತಕಾಯುವ ಬದ್ಧತೆ ಹೊಂದಿರುವ ನರೇಂದ್ರ ಮೋದಿಯವರನ್ನು ಮತ್ತೊಂದು ಬಾರಿ ಪ್ರಧಾನಿ ಮಾಡುವ ಕಾರ್ಯದಲ್ಲಿ ಶ್ರಮವಹಿಸಬೇಕು ಎಂದು ಮನವಿ ಮಾಡಿದರು.

       ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಶಾಸಕ ಬಸವರಾಜ ಬೊಮ್ಮಾಯಿ ಮಾತನಾಡಿ, ದೇಶ ಉಳಿದರೆ ನಾವು ಉಳಿಯುತ್ತೇವೆ. ದೇಶ ಉಳಿಯಬೇಕಾದರೆ ನರೇಂದ್ರ ಮೋದಿಯಂತಹ ಬದ್ಧತೆ ಇರುವ ವ್ಯಕ್ತಿ ಈ ದೇಶದ ಪ್ರಧಾನಿಯಾಗಬೇಕು. ಕಾಂಗ್ರೆಸ್ಸಿಗರು ಪಾತಾಳ, ಭೂಮಿ ಹಾಗೂ ಆಕಾಶಗಳಲ್ಲಿ ಕೊಳ್ಳೆ ಹೊಡೆದಿದ್ದಾರೆ. ಆದರೆ ಪ್ರಧಾನಿ ಮೋದಿ ಅವರು ದೇಶದ ಅಭಿವೃದ್ಧಿಯಲ್ಲಿ ಹಲವಾರು ಮೂಲಭೂತ ಬದಲಾವಣೆ ತಂದಿದ್ದಾರೆ.

        ಇಂದು ರಾಜಕೀಯ ಬದಲಾಗಿದೆ. ದೇಶದ ಪ್ರತಿಯೊಬ್ಬ ಪ್ರಜೆಗೂ ಗೊತ್ತಿದೆ ಯಾರು ಸಮರ್ಥವಾಗಿ ಭಾರತವನ್ನು ಮುನ್ನಡೆಸಲು ಸಾಧ್ಯ ಎಂದು. ಘಟಬಂಧನದಲ್ಲಿ ಪ್ರಧಾನಿ ಅಭ್ಯರ್ಥಿ ಯಾರೆಂಬುದೇ ಗೊತ್ತಿಲ್ಲ. ರಾಹುಲ್ ಗಾಂಧಿ ಅವರೇ ನಮ್ಮ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಲಿ ಜನೋಡೋಣ ಎಂದು ಸವಾಲು ಹಾಕಿದ ಅವರು, ದಕ್ಷ ನಾಯಕತ್ವ ಹೊಂದಿದವರನ್ನು ಆಯ್ಕೆ ಮಾಡುವ ಕಾರ್ಯ ಮತದಾರರ ಮೇಲಿದೆ ಎಂದರು.

         ಶಾಸಕ ಸಿ.ಎಂ.ಉದಾಸಿ ಮಾತನಾಡಿ, ದೇಶ ಸಂನೃದ್ಧಿ ಹೊಂದಬೇಕಾದರೆ ಮೋದಿಯಂತಹ ನಾಯಕರು ಬೇಕು. ಮೋದಿ ಅವರು ಅಶ್ವಮೇಧದ ಕುದುರೆ ಇದ್ದಂತೆ ಅದನ್ನು ಕಟ್ಟಿ ಹಾಕಲು ಯಾರಿಂದಲೂ ಸಾಧ್ಯವಿಲ್ಲ. ಮತ್ತೊಮ್ಮೆ ನರೇಂದ್ರ ಮೋದಿಯವರನ್ನು ಬೆಂಬಲಿಸಿ ಸಮೃದ್ಧ ಭಾರತದ ಕನಸನ್ನು ನನಸಾಗಿಸಬೇಕು ಎಂದು ಮನವಿ ಮಾಡಿದರು.

       ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಸಜ್ಜನ, ತಾಲೂಕು ಅಧ್ಯಕ್ಷ ನಿಂಗಪ್ಪ ಗೊಬ್ಬೇರ, ಪದ್ಮನಾಭ ಕುಂದಾಪೂರ, ಭೋಜರಾಜ ಕರೂದಿ, ಕಲ್ಯಾಣಕುಮಾರ ಶೆಟ್ಟರ, ಮಾಲತೇಶ ಸೊಪ್ಪಿನ, ಬಸವರಾಜ ಬೂದಿಹಾಳ, ಶಿವಲಿಂಗಪ್ಪ ತಲ್ಲೂರ, ಚಂದ್ರಪ್ಪ ಹರಿಜನ, ಮಂಜುಳಾ ಕಾಮನಹಳ್ಳಿ, ಮಹರಾಜಪೇಟ, ಹನುಮಂತಪ್ಪ ಗೊಂದಿ ಮೊದಲಾದವರು ವೇದಿಕೆಯಲ್ಲಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link